Taapsee Pannu: ಬಾಲಿವುಡ್ ಬ್ಯೂಟಿ ತಾಪ್ಸಿ ಪನ್ನು(Taapsee Pannu) ಮದುವೆ ಸುದ್ದಿ ಕಳೆದ ವಾರ ಬಿಟೌನ್ ಅಂಗಳದಲ್ಲಿ ಸಖತ್ ಸುದ್ದಿಯಾಗಿತ್ತು. ಸ್ಟಾರ್ ನಟಿಮಣಿ ಸದ್ದಿಲ್ಲದೇ ಬಹು ಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದಿದ್ದರು. ಆಕೆಯ ಆತ್ಮೀಯರ ಮೂಲಕ ಈ ಸುದ್ದಿ ಪಸರ್ ಆಗಿ ಸಖತ್ ವೈರಲ್ ಆಗಿತ್ತು. ಇಲ್ಲಿವರೆಗೂ ಮದುವೆ ಬಗ್ಗೆ ಮಾತನಾಡದ ʻತಪ್ಪಡ್ʼ ಬೆಡಗಿ ಮ್ಯಾರೇಜ್ ಸ್ಟೋರಿ ಲೀಕ್ ಆಗಿದೆ.
ಹೌದು, ತಾಪ್ಸಿ ಉದಯಪುರದಲ್ಲಿ ಡೆನ್ಮಾರ್ಕ್ ಮೂಲದ ಬಾಡ್ಮಿಂಟನ್ ಆಟಗಾರ ಮ್ಯಾಥ್ಯೂಸ್ ಬೋ(Mathias Boe) ಜೊತೆ ಸಪ್ತಪದಿ ತುಳಿದಿದ್ದಾರೆ. ಫ್ಯಾಮಿಲಿ ಹಾಗೂ ಆಪ್ತರ ಸಮ್ಮುಖದಲ್ಲಿ ಮಾರ್ಚ್ 23ರಂದು ತಾಪ್ಸಿ ಹಸೆಮಣೆ ಏರಿದ್ದರು. ಇದೀಗ ಇವರ ಮದುವೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ನಂತರವೂ ಈ ಬಗ್ಗೆ ಪೋಸ್ಟ್ ಆಗಲಿ, ಸ್ಟೇಟ್ಮೆಂಟ್ ಆಗಲಿ ನೀಡಿರಲಿಲ್ಲ ಈ ಜೋಡಿ.
ಮದು ಮಗಳಾಗಿ ರೆಡ್ ಡ್ರೆಸ್ನಲ್ಲಿ ಮಿಂಚಿರುವ ತಾಪ್ಸಿ(Taapsee) ಡಾನ್ಸ್ ಮಾಡುತ್ತಾ ತನ್ನ ಗೆಳೆಯ ಮ್ಯಾಥ್ಯೂಸ್ ಬೋ(Mathias Boe) ನತ್ತ ಎಂಟ್ರಿ ಕೊಟ್ಟಿರುವ ವೀಡಿಯೋ ಸಖತ್ ವೈರಲ್ ಆಗಿದೆ. ಇಬ್ಬರು ಕೈ ಕೈ ಹಿಡಿದು ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಇನ್ನು ಮದುವೆಗೆ ಆತ್ಮೀಯರನ್ನು ಹೊರತು ಪಡಿಸಿ ಯಾರಿಗೂ ಆಹ್ವಾನ ಬಂದಿಲ್ಲ ಅನ್ನೋದಕ್ಕೂ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿಯೋ ಮೂಲಕ ಮದುವೆ ಸುತ್ತ ಹುಟ್ಟಿಕೊಂಡ ಊಹಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ.