2023 ಐಪಿಎಲ್ ಫೀವರ್ ಜೋರಾಗಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಪಂದ್ಯ ಏರ್ಪಟ್ಟಿದೆ. ಇಂಟ್ರೆಸ್ಟಿಂಗ್ ಅಂದರೆ ಐಪಿಎಲ್ ಅಖಾಡಕ್ಕೆ ಸ್ಯಾಂಡಲ್‌ವುಡ್ ಟಗರು ಎಂಟ್ರಿಯಾಗ್ತಿದೆ.
ಸ್ಯಾಂಡಲ್‌ವುಡ್ ಟಗರು ಅಂತೇಳಿದ್ಮೇಲೆ ಮುಗೀತು, ನಿಮ್ಮ ಕಣ್ಣಮುಂದೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬಂದು ನಿಂತಿರ್ತಾರೆ. ಅಪ್‌ಕೋರ್ಸ್ ಇವತ್ತಿನ ಮ್ಯಾಚ್ ನೋಡಲಿಕ್ಕೆ ಕಾಯುತ್ತಿರುವವರು, ಸೆಂಚುರಿ ಸ್ಟಾರ್ ಶಿವಣ್ಣನ ಆಗಮನದ ಸುದ್ದಿ ಕೇಳಿ ಥ್ರಿಲ್ಲಾಗಿರ್ತೀರಿ. ನಿಮ್ಮಷ್ಟೇ ಶಿವಣ್ಣ ಕೂಡ ಎಕ್ಸೈಟ್ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿ ನೋಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ರಾಜ್ ಕುಮಾರ್ ಸೇರಿದಂತೆ ಆತ್ಮೀಯರೊಟ್ಟಿಗೆ ಗ್ಯಾಲರಿಯಲ್ಲಿ ಕುಂತು ಮ್ಯಾಚ್ ಎಂಜಾಯ್ ಮಾಡಲಿದ್ದಾರೆ.
ಅಂದ್ಹಾಗೇ, ಶಿವಣ್ಣ ಕೂಡ ಕ್ರಿಕೆಟ್ ಪ್ರೇಮಿ. ಬಿಡುವುದ್ದಾಗಲೆಲ್ಲಾ ಬ್ಯಾಟ್ ಕೈಲಿಡಿದು ಫೀಲ್ಡಿಗಿಳಿಯುತ್ತಾರೆ. ಪ್ಯಾಡ್ ಕಟ್ಟಿಕೊಳ್ಳದೇ ಕಣಕ್ಕಿಳಿದು ಸಿಕ್ಸ್, ಫೋರ್ ಎತ್ತುತ್ತಾರೆ. ಸಿಸಿಎಲ್ ಹಾಗೂ ಕೆಸಿಸಿಗೆ ಕೈ ಜೋಡಿಸ್ತಾರೆ. ಅಚ್ಚರಿ ಅಂದರೆ ಶಿವಣ್ಣ ಕ್ರಿಕೆಟರ್ ಆಗಬೇಕಿತ್ತು. ಆದರೆ, ಅಲ್ಲಿ ನಡೆದ ರಾಜಕೀಯ ಹ್ಯಾಟ್ರಿಕ್ ಹೀರೋನಾ ಸಿನಿಮಾ ಲೋಕಕ್ಕೆ ಎಂಟಿಕೊಡುವಂತೆ ಮಾಡ್ತು ಅನ್ನೋ ಸುದ್ದಿ ಇವತ್ತಿಗೂ ಗ್ರೌಂಡ್ನಲ್ಲಿ ಓಡಾಡ್ತಿದೆ.
ಕ್ರೀಡಾಂಗಣದಲ್ಲಿ ಸೆಂಚುರಿ ಹೊಡೆಯೋದು ಮಿಸ್ಸಾದ್ರೇನಂತೆ, ಬೆಳ್ಳಿತೆರೆ ಮೇಲೆ ಹ್ಯಾಟ್ರಿಕ್ ಹೀರೋ ಸೆಂಚುರಿ ಬಾರಿಸಿ ಮುನ್ನುಗುತ್ತಿದ್ದಾರೆ. ಚಿತ್ರರಂಗದಲ್ಲಿ 37 ವರ್ಷಗಳನ್ನ ಯಶಸ್ವಿಯಾಗಿ ಪೂರೈಸ್ತಿರುವ ದೊಡ್ಮನೆ ದೊರೆ, ಆನಂದ್ ಸಿನಿಮಾದಿಂದ ಹಿಡಿದು ವೇದ ಚಿತ್ರದವರೆಗೆ ಒಟ್ಟು 125 ಚಿತ್ರಗಳಿಗೆ ಜೀವ ತುಂಬಿದ್ದಾರೆ. ಸದ್ಯ ಶಿವಣ್ಣನ ಕೈಯಲ್ಲಿ ಹತ್ತಾರು ಸಿನಿಮಾಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, 60ನೇ ವಯಸಲ್ಲೂ ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯುಸಿಯೆಷ್ಟ್ ನಟರಾಗಿ ಗುರ್ತಿಸಿಕೊಂಡಿದ್ದಾರೆ. ಸಂಡೇ ಹೊರತುಪಡಿಸಿ ಉಳಿದೆಲ್ಲಾ ದಿನವೂ ಸಿನಿಮಾ ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿ ಇರುವ ಶಿವಣ್ಣ, ಕೊಂಚ ಬಿಡುವು ಮಾಡಿಕೊಂಡು ಐಪಿಎಲ್ ವೀಕ್ಷಿಸೋದಕ್ಕೆ ಬರುತ್ತಿದ್ದಾರೆ. ಆರ್ ಸಿ ಬಿ ಸಪೋರ್ಟ್ ಮಾಡ್ತಾ, ಇವತ್ತಿನ ಮ್ಯಾಚ್‌ನ ಮಾಸ್ ಲೀಡರ್ ಶಿವಣ್ಣ ಮಸ್ತಾಗಿ ಎಂಜಾಯ್ ಮಾಡಲಿದ್ದಾರೆ.