Manvitha Kamath: ಟಗರು(Tagaru) ಸಿನಿಮಾ ಖ್ಯಾತಿಯ ನಟಿ ಮಾನ್ವಿತಾ ಕಾಮತ್(Manvitha Kamath) ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರುಣ್ ಕುಮಾರ್ ಜೊತೆ ಮಾನ್ವಿತಾ ಹಸೆಮಣೆ ಏರಿದ್ದು, ಚಿಕ್ಕಮಗಳೂರಿನ ಕಳಸದಲ್ಲಿ ಕುಟುಂಬದ ಆತ್ಮೀಯರು ಹಾಗೂ ಚಿತ್ರರಂಗದ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಜೊತೆ ಮಾನ್ವಿತಾ(Manvitha Kamath) ಹಸೆಮಣೆ ಏರಿದ್ದಾರೆ. ಟಗರು ಪುಟ್ಟಿ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದು, ನಟಿ ನಿಧಿ ಸುಬ್ಬಯ್ಯ, ಶೃತಿ ಹರಿಹರನ್, ನಿರೂಪಕ ನಿರಂಜನ್, ರಿಲ್ಯಾಕ್ಸ್ ಸತ್ಯ ಸಿನಿಮಾ ನಟ ಪ್ರಭು ಸೇರಿದಂತೆ ಚಿತ್ರರಂಗದ ಹಲವು ಸ್ನೇಹಿತರು ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದ್ದಾರೆ. ಅಮ್ಮ ನೋಡಿದ್ದ ಹುಡುಗನನ್ನೇ ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದ ಮಾನ್ವಿತಾ, ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಮೈಸೂರು ಮೂಲದ ಅರುಣ್ ಕುಮಾರ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಮಾನ್ವಿತಾ ಕಾಮತ್ (Manvitha Kamath)ಗೆ ಚಿತ್ರರಂಗದ ಆತ್ಮೀಯರು ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾನ್ವಿತಾ ಮದುವೆ ಫೋಟೋಗಳು ವೈರಲ್ ಆಗಿದ್ದು, ನೆಚ್ಚಿನ ನಟಿಗೆ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ.
2018ರಲ್ಲಿ ತೆರಕಂಡ ಶಿವರಾಜ್ ಕುಮಾರ್(Shivaraj Kuamar) ಅಭಿನಯದ ‘ಟಗರು’ ಸಿನಿಮಾ ಮಾನ್ವಿತಾಗೆ ಬಿಗ್ ಬ್ರೇಕ್ ನೀಡಿತ್ತು ಈ ಸಿನಿಮಾ ಮೂಲಕ ‘ಟಗರು ಪುಟ್ಟಿ’ ಎಂದೇ ಖ್ಯಾತಿಗಳಿಸಿಕೊಂಡಿದ್ರು. ಸೂರಿ ನಿರ್ದೇಶನದ ‘ಕೆಂಡ ಸಂಪಿಗೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾನ್ವಿತಾ(Manvitha Kamath) ಕನಕ, ರಿಲ್ಯಾಕ್ಸ್ ಸತ್ಯ, ಚೌಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ನಂತರವೂ ಸಿನಿಮಾಗಳಲ್ಲಿ ನಟಿಸಲಿದ್ದೇನೆ ಎಂದಿದ್ದಾರೆ ಮಂಗಳೂರು ಬೆಡಗಿ