ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Vijay) ಖಾದಿ ತೊಟ್ಟು ಕಣಕ್ಕಿಳಿಯುತ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ತಮಿಳಿಗ ವೆಟ್ರಿ ಕಳಗಂ ಎಂಬ ಘೋಷಣೆ ಮಾಡಿರುವ ದಳಪತಿ ವಿಜಯ್ ಸದ್ಯ ʻದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಅಥಾರ್ತ್ ಗೋಸ್ಟ್ʼ (The Greatest of All Time-goat) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ವಿಜಯ್ ಅವ್ರ 68ನೇ ಚಿತ್ರವಾಗಿದ್ದು, ಇನ್ನೊಂದು ಸಿನಿಮಾ ಮಾಡಿ ಬಣ್ಣದ ಜಗತ್ತಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ. ಜನ ಕೈ ಹಿಡಿದರೆ ಇನ್ಮುಂದೆ ರಾಜಕೀಯದಲ್ಲಿ ಸಂಪೂರ್ಣವಾಗಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ ಅಂತ ಹೇಳಲಾಗ್ತಿದೆ. ಹೀಗಿರುವಾಗಲೇ ನಟ ವಿಜಯ್ (Vijay) ತಮಿಳುನಾಡು ಹಾಗೂ ಕೇರಳ ನನ್ನ ಎರಡು ಕಣ್ಣು ಇದ್ದಂತೆ ಅಂತೇಳಿ ಬಹುಪರಾಕ್ ಹಾಕಿಸಿಕೊಳ್ತಿದ್ದಾರೆ.
ಯಸ್, ಕೇರಳದ ತಿರುವನಂತಪುರಂನಲ್ಲಿ ʻಗೋಟ್ʼ (The Greatest of All Time-goat) ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ನಟ ವಿಜಯ್ (Vijay) ಅಲ್ಲಿ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ಶೂಟಿಂಗ್ ಆರಂಭಗೊಂಡ ದಿನದಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸ್ತಿದ್ದರು. ಹೀಗಾಗಿ, ವಿಜಯ್ ಶೂಟಿಂಗ್ ವೇಳೆ ಕೆಲ ಸಮಯ ಬಿಡುವು ಮಾಡಿಕೊಂಡು ಸ್ಟೇಡಿಯಂನಲ್ಲಿ ಅಭಿಮಾನಿಗಳನ್ನ ಮೀಟ್ ಮಾಡಿದ್ದಾರೆ. ಈ ವೇಳೆ ಕೇರಳದ ಅಭಿಮಾನಿಗಳ ಪ್ರೀತಿಗೆ ಮನಸೋತ ವಿಜಯ್ (Vijay) , ಮೊಬೈಲ್ ಕೈಗೆತ್ತಿಕೊಂಡು ಅಭಿಮಾನಿಗಳೆಲ್ಲರನ್ನೂ ಕ್ಯಾಪ್ಟರ್ ಮಾಡಿಕೊಂಡಿದ್ದಾರೆ. ಅದನ್ನ ವಿಡಿಯೋ ಮೂಲಕ ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದ್ದು ಮಿಲಿಯನ್ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಇಂಟ್ರೆಸ್ಟಿಂಗ್ ಅಂದರೆ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳನ್ನುದ್ದೇಶಿಸಿ ದಳಪತಿ (Vijay) ಮಾತನಾಡಿದ್ದಾರೆ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಏನ್ ಹೇಳಬೇಕು ಗೊತ್ತಾಗ್ತಿಲ್ಲ. ಅದೇನೇ ಇರಲಿ ತಮಿಳುನಾಡು ಮತ್ತು ಕೇರಳ ನನ್ನ ಎರಡು ಕಣ್ಣು ಇದ್ದಂತೆ ಅಂದುಬಿಟ್ಟರು. ಹೀಗನ್ನುವ ಮೂಲಕ ದಳಪತಿ (Vijay) ಎರಡು ರಾಜ್ಯದ ಅಭಿಮಾನಿಗಳ ಹೃದಯದಲ್ಲಿ ದೇವರಾಗಿಬಿಟ್ಟರು.
ಅಂದ್ಹಾಗೇ, ನಟ ವಿಜಯ್ (Vijay) ಗೆ ಅತೀ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಕೇರಳ, ತಮಿಳು ನಾಡು ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯ ಮತ್ತು ಹೊರದೇಶಗಳಲ್ಲೂ ಕೂಡ ದಳಪತಿ ವಿಜಯ್ (Vijay) ರನ್ನ ಆರಾಧಿಸುವ ಮತ್ತು ಅಭಿಮಾನಿಸುವ ಭಕ್ತರಿದ್ದಾರೆ. ಆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಿಯೋ ಸಿನಿಮಾದಿಂದ ಮತ್ತೊಂದಿಷ್ಟು ಫ್ಯಾನ್ಸ್ ಸೇರ್ಪಡೆಗೊಂಡಿದ್ದಾರೆ. ಇದೀಗ ಬಿಗಿಲ್ ಹೀರೋ ನಟನೆಯ ಬಹುನಿರೀಕ್ಷಿತ ʻಗೋಟ್ʼ (The Greatest of All Time-goat) ಚಿತ್ರಕ್ಕಾಗಿ ಕಾಲಿವುಡ್ ಪ್ರೇಕ್ಷಕರು ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳೇ ಕಣ್ಣರಳಿಸಿದ್ದಾರೆ. ಸೈನ್ಸ್ ಫಿಕ್ಷನ್ ಪ್ಲಸ್ ಆಕ್ಷನ್ ಜಾನರ್‌ನಲ್ಲಿ ತಯಾರಾಗ್ತಿರೋ ಗೋಟ್‌ನಲ್ಲಿ ಕಾಲಿವುಡ್ ಭೈರವ (Vijay) ನ ದರ್ಬಾರ್ ನೋಡಲಿಕ್ಕೆ ಕಾತುರರಾಗಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ `ಗೋಟ್’ (The Greatest of All Time-goat) ಚಿತ್ರದಲ್ಲಿ ವಿಜಯ್ (Vijay) ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ. ಅಪ್ಪ-ಮಗ ಎರಡು ಕ್ಯಾರೆಕ್ಟರ್‌ಗೆ ಭೈರವ (Vijay) ಜೀವ ತುಂಬುತ್ತಿರುವುದರಿಂದ ನಿರೀಕ್ಷೆ ತುಸು ಹೆಚ್ಚೇಯಿದೆ. ಫಸ್ಟ್ ಟೈಮ್ ನಿರ್ದೇಶಕ ವೆಂಕಟ್ ಪ್ರಭು ದಳಪತಿಗೆ ಆಕ್ಷನ್ ಕಟ್ ಹೇಳಿದ್ದು ತೆರೆಮೇಲೆ ವಿಜಯ್ (Vijay) ನ ಯಾವ್ ರೀತಿ ತೋರಿಸ್ತಾರೆನ್ನುವ ಕುತೂಹಲ ಸಹಜವಾಗಿದೆ. ಗೋಟ್ ಚಿತ್ರದಲ್ಲಿ ಸರ್ಕಾರ್ ನಾಯಕ ಸಖತ್ ಸ್ಟೈಲಿಷ್ ಆಗಿ ಕಾಣಸಿಗ್ತಾರೆ ಅಂತ ಈಗಾಗಲೇ ರಿವೀಲ್ ಆಗಿರೋ ವಿಜಯ್(Vijay) ಕ್ಲೀನ್ ಶೇವ್ ಲುಕ್ ನೋಡಿ ಹೇಳಬಹುದು. ಇನ್ನೂ ಗೋಟ್ ಫೈಟರ್ ಜೆಟ್ ಪೈಲೆಟ್‌ಗಳ ಕಥೆಯನ್ನೊಳಗೊಂಡಿದ್ದು, ಪ್ರಭುದೇವ, ಮೀನಾಕ್ಷಿ ಚೌದರಿ, ಜಯರಾಮ್, ಪಾರ್ವತಿ ನಾಯರ್ ಸೇರಿದಂತೆ ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಈ ಸಿನಿಮಾಗಾಗಿ ದಳಪತಿ (Vijay) ಬರೋಬ್ಬರಿ 250 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆನ್ನಲಾಗ್ತಿದೆ. ಈ ಮೂಲಕ ರೆಮ್ಯುನರೇಷನ್ ವಿಚಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಅವ್ರನ್ನ ಹಿಂದಿಕ್ಕಿದ್ದಾರೆನ್ನುವುದು ಕಾಲಿವುಡ್ ಅಂಗಳದಲ್ಲಿ ಚರ್ಚೆಯಾಗ್ತಿರುವ ಸುದ್ದಿ. ಬಹಳಷ್ಟು ವರ್ಷಗಳಾದ್ಮೇಲೆ ಯುವನ್ ಶಂಕರ್ ರಾಜಾ ದಳಪತಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಎಜಿಎಸ್ ಎಂಟರ್‌ಟೈನ್ಮೆಂಟ್ ಬಂಡವಾಳ ಹೂಡ್ತಿದೆ. ಸದ್ಯ ಕೇರಳದ ತಿರುವನಂತಪುರಂನಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಚಿತ್ರತಂಡ ನಿರತವಾಗಿದೆ. ಲಿಯೋ ನಂತರ ಅಖಾಡಕ್ಕಿಳಿದಿರೋ ಭೈರವ(Vijay) ʻಗೋಟ್ʼ ಮೂಲಕ ಅದ್ಯಾವ್ ರೀತಿ ಕಮಾಲ್ ಮಾಡ್ತಾರೆನ್ನುವುದನ್ನ ಕಾದುನೋಡಬೇಕಿದೆ.