ಚಿತ್ರರಂಗದಲ್ಲಿ ಸಿನೆಮಾಗಳ ಅಪ್ಡೇಟ್ ಜೊತೆಗೆ ಗಾಸಿಪ್ ಗಳಿಗೂ ಕೊರತೆ ಇಲ್ಲ. ಸ್ಯಾಂಡಲ್ ವುಡ್,ಟಾಲಿವುಡ್,ಬಾಲಿವುಡ್,ಕಾಲಿವುಡ್ ಹೀಗೆ ಎಲ್ಲಾ ಭಾಷೆಗಳ ನಟ ನಟಿಯರ ಕುರಿತ ಗಾಸಿಪ್ ಗಳು ಗಾಳಿಯಂತೆ ಬೀಸುತ್ತಲೇ ಇರುತ್ತವೆ.ಈಗ ಇಂತಹದ್ದೇ ಒಂದು ರೂಮರ್ ಟಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ. ಅದು ಮೆಗಾಸ್ಟಾರ್ ಕುಟುಂಬದ್ದು ಅನ್ನೋದು ಇನ್ನೂ ಗಮನಾರ್ಹ. ಯಸ್, ಚಿರಂಜೀವಿಯವರ ಸಹೋದರ ನಾಗಬಾಬು ಅವರ ಮಗಳು ನಿಹಾರಿಕಾ, ಪತಿ ಚೈತನ್ಯಗೆ ವಿಚ್ಛೇದನ ನೀಡಿರುವುದು ನಿಮಗೆಲ್ಲ ಗೊತ್ತೆಯಿದೆ. ಆಗಲೇ 2ನೇ ಮದುವೆಗೆ ಸಿದ್ಧರಾಗಿದ್ದಾರೆ ಎನ್ನುವ ರೂಮರ್ಗಳು ಈ ಮಳೆಗಾಲದಲ್ಲಿ ಬಿಸಿ ಬಿಸಿ ಪಕೋಡದಂತೆ ಸೇಲ್ ಆಗ್ತಿವೆ.
ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಜೊನ್ನಲಗುಡ್ಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮೇಘಾಸ್ಟಾರ್ ಕುಟುಂಬ ಮದುವೆ ಸಮಾರಂಭ ನಡೆಸಿಕೊಟ್ಟಿತ್ತು.ಆದರೆ, ದಾಂಪತ್ಯ ಕೇವಲ ಎರಡೂವರೆ ವರ್ಷಕ್ಕೆ ಮುರಿದುಬಿದ್ದಿದೆ. ಪತಿ ಚೈತನ್ಯಗೆ ವಿಚ್ಛೇದನ ನೀಡಿ ಇನ್ನೂ ಒಂದು ತಿಂಗಳು ಕಳೆದಿಲ್ಲ, ಆಗಲೇ 2ನೇ ಮದುವೆಗೆ ಸಿದ್ಧರಾಗಿದ್ದಾರೆನ್ನುವ ಸುದ್ದಿ ಎಲ್ಲರನ್ನೂ ಹುಬ್ಬೇರಿಸಿರುವುದು ನಿಜ.
ಮೆಗಾ ಕುಟುಂಬದ ಕುಡಿ ನಿಹಾರಿಕಾ 2ನೇ ಮದುವೆಗೆ ರೆಡಿ ಆದ್ರಾ ಅನ್ನೋ ಪ್ರಶ್ನೆ ಏಳುತ್ತಲೇ ನಿಹಾರಿಕಾ ವರಿಸೋ ವರ ಯಾರೆಂಬ ಬಗ್ಗೆಯೂ ಗಾಸಿಪ್ ಹರಿದಾಡೋಕೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ವ್ಯಾಪಕವಾಗಿ ಸುದ್ದಿಯಾಗಿದ್ದು, ಸ್ಟಾರ್ ನಟ ತರುಣ್ ರನ್ನು ನಿಹಾರಿಕಾ ಮದುವೆಯಾಗಲಿದ್ದಾರೆ ಎಂಬ ವದಂತಿ ಗಳಿವೆ. ಈಗಾಗಲೇ ಮೆಗಾಸ್ಟರ್ ಕುಟುಂಬ, ನಟ ತರುಣ್ ಅವರ ಕುಟುಂಬದೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ಇಬ್ಬರ ಮದುವೆಯನ್ನು ಫಿಕ್ಸ್ ಕೂಡ ಮಾಡಲಾಗಿದೆ ಅಂತೆಲ್ಲ ಸುದ್ದಿಗಳು ಹಬ್ಬಿದೆ. ಟಾಲಿವುಡ್ಗೆ ಬಾಲನಟನಾಗಿ ಪಾದಾರ್ಪಣೆ ಮಾಡಿದ ತರುಣ್, ತೆಲುಗಿನಲ್ಲಿ ಲವರ್ ಬಾಯ್ ಚಿತ್ರದ ಮೂಲಕ ಫೇಮಸ್ ಆಗಿದ್ದರು. ಇವರನ್ನೇ ನಿಹಾರಿಕ ೨ ನೇ ಬಾರಿಗೆ ವರಿಸಲಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ.
ಈ ವದಂತಿ ಹರಡೋಕೆ ಕಾರಣಗಳು ಇವೆ. ಯಾಕಂದ್ರೆ,ಕಳೆದ ಕೆಲ ತಿಂಗಳಿಂದ ತರುಣ್ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ನಡುವೆ ತರುಣ್ ಅವರ ತಾಯಿ ರೋಜಾ ರಮಣಿ ಶೀಘ್ರದಲ್ಲಿಯೇ ಮಗನ ಮದುವೆಯಾಗಲಿದೆ, ದೊಡ್ಡ ಮನೆತನದ ಹುಡುಗಿಯನ್ನು ತರುಣ್ ಮದುವೆಯಾಗುತ್ತಿರುವುದಾಗಿ ಹೇಳಿದ್ದು ರೂಮರ್ಸ್ ಗಳು ಇನ್ನಷ್ಟು ಇಂಬು ಪಡೆದುಕೊಳ್ಳಲು ಕಾರಣವಾಗಿದೆ. ಆದರೆ ಈ ಬಗ್ಗೆ ಸ್ವತಃ ತರುಣ್ ಸ್ಪಷ್ಟನೆ ನೀಡುವ ಮೂಲಕ ತಾವು ಮದುವೆ ಯಾಗುವ ವಧು ನಿಹಾರಿಕ ಕೊನಿಡೆಲಾ ಎಂಬ ಗಾಸಿಪ್ ಗೆಲ್ಲಾ ಬ್ರೇಕ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಒಳ್ಳೆಯ ಸುದ್ದಿ ಏನಾದರೂ ಇದ್ದಲ್ಲಿ ಅದನ್ನು ನಾನೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ.
ಸಧ್ಯ ನಿಹಾರಿಕಾ ಹಾಗು ತರುಣ್ ಮದುವೆ ಗಾಸಿಪ್ ಗೆ ತೆರೆ ಎಳೆಯಲಾಗಿದ್ದು,ಮಗಳ ಸಂಸಾರ ಸರಿದಾರಿಗೆ ತರುವ ದೃಷ್ಟಿಯಲ್ಲಿ ಮೆಗಾಸ್ಟಾರ್ ಕುಟುಂಬ ಹೆಚ್ಚಿನ ಗಮನ ಹರಿಸಿದೆಯಂತೆ. ಇನ್ನು ವೈಯಕ್ತಿಕ ಜೀವನ ಸರಿ ಇಲ್ಲದೇ ಇರುವ ಕಾರಣ ನಿಹಾರಿಕಾ ಮತ್ತೆ ಬೆಳ್ಳಿಪರದೆಯಲ್ಲಿ ನಟಿ ಮಿಂಚ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಿಹಾರಿಕಾ ನಿರ್ಧಾರಕ್ಕೆ ಕುಟುಂಬದ ಸಹಮತ ನೀಡಿಲ್ಲ ಎಂದು ಹೇಳಲಾಗ್ತಿದೆ.