Teja Sajja: ʻಹನು-ಮಾನ್ʼ(Hanu-Man) ಸಿನಿಮಾ ಸೂಪರ್ ಸಕ್ಸಸ್ ಮೂಲಕ ನಟ ತೇಜ ಸಜ್ಜಾ(Teja Sajja) ಟಾಲಿವುಡ್ ಅಂಗಳದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಾಕ್ಸ್ ಆಫೀಸ್‌ನಲ್ಲೀ ʻಹನು-ಮಾನ್ʼ ಹೊಸ ದಾಖಲೆ ಬರೆದಿತ್ತು. ಅದರ ಸಕ್ಸಸ್ ಖುಷಿಯಲ್ಲಿರುವ ಯುವ ಹಾಗೂ ಪ್ರತಿಭಾವಂತ ನಟನಿಗೆ ಸಿನಿಮಾ ಮಾಡಲು ತೆಲುಗು ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ.
ತೇಜ ಸಜ್ಜಾ(Teja Sajja) ಹೊಸ ಸಿನಿಮಾ ಅಪ್ಡೇಟ್ ಹೊರ ಬಿದ್ದಿದ್ದು, ʻಈಗಲ್ʼ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಕಾರ್ತಿಕ್ ಘಟ್ಟಮನೇನಿ ಸಿನಿಮಾದಲ್ಲಿ ತೇಜ ಸಜ್ಜಾ(Teja Sajja) ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಿರೈ(Mirai) ಎಂದು ಹೆಸರಿಡಲಾಗಿದ್ದು, ನಾಯಕಿಯಾಗಿ ʻಹಾಯ್ ನಾನ್ನʼ ಖ್ಯಾತಿಯ ರಿತಿಕಾ ನಾಯಕ್(Ritika Nayak) ನಟಿಸುತ್ತಿದ್ದಾರೆ. ʻಮಿರೈʼ ಸಿನಿಮಾ ಜೊತೆಗೆ ʻಜೈ ಹನುಮಾನ್ʼ(Jai Hanuman) ಸಿನಿಮಾ ಕೂಡ ತೇಜ ಸಜ್ಜಾ ಕೈಯಲ್ಲಿದೆ.
ಬಾಲನಟನಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾವಂತ ನಟ ತೇಜ ಸಜ್ಜಾ(Teja Sajja), ʻಝಾಂಭಿ ರೆಡ್ಡಿʼ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು. ʻಹನು-ಮಾನ್ʼ ಸಿನಿಮಾ ಸಿನಿಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿದ್ದು, ತೇಜ ಸಜ್ಜಾ ಈಗ ತೆಲುಗಿನ ಬೇಡಿಕೆಯ ನಟರ ಸಾಲಿನಲ್ಲಿದ್ದಾರೆ.