ತಲೈವಾ 169 ಸಿನಿಮಾ ಜೈಲರ್ ಬ್ಲಾಕ್‍ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ರಿಲೀಸ್ ಆದ 4 ವಾರದಲ್ಲಿ ಬರೋಬ್ಬರಿ 600 ಕೋಟಿ ಬಾಚಿಕೊಂಡು ಹೊಸ ಇತಿಹಾಸ ನಿರ್ಮಿಸಿದೆ. ತಮಿಳು ಇಂಡಸ್ಟ್ರಿಯಲ್ಲಿ ಹೈಯೆಸ್ಟ್ ಕಲೆಕ್ಷನ್ ಕಂಡ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರೋ ಜೈಲರ್ ಈಗಲೂ ಥಿಯೇಟರ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಈ ಮಧ್ಯೆಯೇ ತಲೈವಾ 170 ಹಾಗೂ 171 ಸಿನಿಮಾಗಳು ಸೆನ್ಸೇಷನ್ ಸೃಷ್ಟಿಸುತ್ತಿವೆ. ಡೆಡ್ಲಿ ಕಾಂಬಿನೇಷನ್‍ನಿಂದ ಸುನಾಮಿ ಎಬ್ಬಿಸಿದ್ದ ಈ ಎರಡು ಚಿತ್ರಗಳು ಈಗ ಸ್ಟಾರ್ ಕಾಸ್ಟ್ ವಿಚಾರಕ್ಕೆ ಸಿನಿದುನಿಯಾದಲ್ಲಿ ಸಖತ್ ಸುದ್ದಿಯಾಗ್ತಿವೆ.
ಹೌದು, ತಲೈವಾ ಅಪ್‍ಕಮ್ಮಿಂಗ್ ಸಿನಿಮಾಗಳ ತಾರಾಬಳಗ ದೊಡ್ಡದಾಗ್ತಿದೆ. ಅದ್ರಲ್ಲೂ, ತಲೈವಾ 170 ಚಿತ್ರದಲ್ಲಿ ಸೌತ್-ನಾರ್ತ್ ಸೂಪರ್‍ಸ್ಟಾರ್ ಗಳ ಸಮಾಗಮ ಆಗ್ತಿದೆ. ಜೈಲರ್ ಚಿತ್ರಕ್ಕಾಗಿ ಸ್ಯಾಂಡಲ್‍ವುಡ್‍ನಿಂದ ಶಿವಣ್ಣ, ಮಾಲಿವುಡ್ ಅಂಗಳದಿಂದ ಮೋಹನ್ ಲಾಲ್, ಬಿಟೌನ್ ಅಖಾಡದಿಂದ ಜಾಕಿಶ್ರಾಫ್ ಎಂಟ್ರಿಕೊಟ್ಟಿದ್ದರು. ಅದರಂತೇ ಈಗ ತಲೈವಾ 170ಗಾಗಿ ಬಾಲಿವುಡ್ ಅಂಗಳದಿಂದ ಬಿಗ್ ಬಿ ಅಮಿತಾಬ್ ಬಚ್ಚನ್ ಆಗಮಿಸ್ತಿದ್ದಾರೆ. ಟಾಲಿವುಡ್‍ನಿಂದ ರಾಣಾದಗ್ಗುಬಾಟಿ, ಮಾಲಿವುಡ್‍ನಿಂದ ಮಂಜು ವಾರಿಯರ್ ಹಾಗೂ ಪುಷ್ಪ ಸಿನಿಮಾ ಖ್ಯಾತಿಯ ಫಹಾದ್ ಫಾಸಿಲ್ ಎಂಟ್ರಿಯಾಗ್ತಿರುವುದಾಗಿ ಸುದ್ದಿಯಾಗಿದೆ. ಟೈಗರ್ ಮುತ್ತುವೇಲ್ ಪಾಂಡಿಯನ್ ಮತ್ತೊಮ್ಮೆ ಸೂಪರ್ ಕಾಪ್ ಲುಕ್ ನಲ್ಲಿ ಖದರ್ ತೋರಿಸೋದು ಪಕ್ಕಾ ಎನ್ನಲಾಗ್ತಿದೆ.
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಪಿಕ್ಚರ್ ಆರಂಭಿಸುವ ಬಹುತೇಕರು, ಎಲ್ಲಾ ಭಾಷೆಯ ಖ್ಯಾತ ಕಲಾವಿದರನ್ನ ಒಟ್ಟುಗೂಡಿಸಿ ಸಿನಿಮಾ ಮಾಡುತ್ತಿದ್ದಾರೆ. ಅದರಂತೆ, ತಲೈವಾ 170 ಚಿತ್ರವನ್ನ ಡೈರೆಕ್ಟ್ ಮಾಡುತ್ತಿರುವ ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ಕೂಡ, ಸೌತ್-ನಾರ್ತ್ ಸೂಪರ್ ಸ್ಟಾರ್ಗಳಿಗೆ ಮಣೆಹಾಕ್ತಿದ್ದಾರೆ. ಬಿಗ್ ಬಿ ಎಂಟ್ರಿ ಕೊಡುವುದು ಈಗಾಗಲೇ ಪಕ್ಕಾ ಆಗಿದ್ದು, 32 ವರ್ಷದ ನಂತರ ಅಮಿತಾಬ್ ಹಾಗೂ ರಜನಿಕಾಂತ್ ಒಟ್ಟಿಗೆ ಆ್ಯಕ್ಟ್ ಮಾಡುತ್ತಿದ್ದಾರೆ. ಲೈಕಾ ಸಂಸ್ಥೆ ಬಂಡವಾಳ ಹೂಡ್ತಿದ್ದು, ಇದೇ ಸೆಪ್ಟೆಂಬರ್ ಕೊನೆಯ ವಾರದೊಳಗೆ ಶೂಟಿಂಗ್ ಶುರು ಮಾಡಿ, 2024 ಫಸ್ಟ್ ಹಾಫ್ ನಲ್ಲಿ ತೆರೆಗೆ ತರಬೇಕು ಎನ್ನುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ.
ತಲೈವಾ 170 ಸಿನಿಮಾದ ಸದ್ದು-ಸುದ್ದಿಯ ನಡುವೆ ತಲೈವಾ 171 ಚಿತ್ರದ ಬ್ರೇಕಿಂಗ್ ಸಮಾಚಾರವೂ ಜೋರಾಗಿದೆ. ಲೋಕೇಶ್ ಕನಕರಾಜ್ ಹಾಗೂ ಪಡೆಯಪ್ಪನ ಕಾಂಬಿನೇಷನ್ ನಲ್ಲಿ ಬರಲಿರೋ ಸಿನಿಮಾದ ಅಪ್‍ಡೇಟ್ ಅತೀ ಶೀಘ್ರದಲ್ಲೇ ಹೊರಬೀಳುವ ಬಗ್ಗೆ ಸುದ್ದಿಯಾಗ್ತಿದೆ. ಸದ್ಯ ಲೋಕೇಶ್ ದಳಪತಿ ವಿಜಯ್ ಜೊತೆ ಲಿಯೋ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಬಿಗ್ ಬಜೆಟ್ಟಿನ, ಬಹುತಾರಾಗಣದ `ಲಿಯೋ’ ಗಾಗಿ ದಳಪತಿ ಪಡೆ ಮಾತ್ರವಲ್ಲ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಕಣ್ಣರಳಿಸಿದೆ ಕಾದಿದೆ. ಇದೇ ಅಕ್ಟೋಬರ್ 19ರಂದು ಚಿತ್ರ ಬಿಡುಗಡೆ ಮುಹೂರ್ತ ಫಿಕ್ಸಾಗಿದೆ. ಲಿಯೋ ಅಖಾಡಕ್ಕೆ ಇಳಿದ ಬೆನ್ನಲ್ಲೇ ಶಿವಾಜಿ ಚಿತ್ರದ ಬಿಗ್ ಅಪ್‍ಡೇಟ್ ಹೊರಬೀಳೋದು ಗ್ಯಾರಂಟಿ
ಒಟ್ನಲ್ಲಿ ತಲೈವಾ ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಪ್ರೂ ಮಾಡುತ್ತಲೇ ಹೊರಟಿದ್ದಾರೆ. 72ನೇ ವಯಸ್ಸಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ, ಆಲ್ ಇಂಡಿಯಾ ಸೂಪರ್ ಸ್ಟಾರ್ ಗಳಿಗೆ ಟಕ್ಕರ್ ಕೊಡುತ್ತಿದ್ದಾರೆ. 170 ಹಾಗೂ 171 ಚಿತ್ರದ ಜೊತೆಗೆ ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಸಿನಿಮಾದಲ್ಲೂ ಪಡೆಯಪ್ಪ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ, ತಲೈವಾ ಅಭಿನಯದ ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಪ್ರಿಪ್ರೊಡಕ್ಷನ್ ವರ್ಕ್ ಆರಂಭಗೊಂಡಿದ್ದು, ಸೂಪರ್‍ಸ್ಟಾರ್ ಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ಲೋಕೇಶ್ ಕನಕರಾಜ್ ಕಾತುರರಾಗಿ ಕಾಯ್ತಿದ್ದಾರೆ. ಇವರಿಬ್ಬರ ಜುಗಲ್ ಬಂಧಿಯಲ್ಲಿ ಬರಲಿರೋ ಜಬರ್ದಸ್ತ್ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಈಗಾಗಲೇ ಕೋಟೆಯನ್ನೇ ಕಟ್ಟಿದೆ. ಪ್ರೇಕ್ಷಕರನ್ನ ಒಂಟಿಕಾಲಲ್ಲಿ ನಿಲ್ಲಿಸಿದೆ.