Thalapathy Vijay: ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್(Thalapathy Vijay) ಅಭಿನಯದ ಬಹು ನಿರೀಕ್ಷಿಯ ಸಿನಿಮಾ ‘ಗೋಟ್’(Goat). ಸೈನ್ಸ್-ಫಿಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗ್ತಿರೋ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಕೇಳಿ ಥ್ರಿಲ್ ಆಗಿದ್ದಾರೆ ದಳಪತಿ ಫ್ಯಾನ್ಸ್.
‘ಗೋಟ್’(Goat). ಸಿನಿಮಾ ಸೆಪ್ಟೆಂಬರ್ 5ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಸೈನ್ಸ್- ಫಿಕ್ಷನ್ ಕಥಾಹಂದರ ಒಳಗೊಂಡ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದಾರೆ. ಯುವನ್ ಶಂಕರ್ ರಾಜ ಸಂಗೀತ ನಿರ್ದೇಶನ ‘ಗೋಟ್’ ಚಿತ್ರಕ್ಕಿದ್ದು, ಈ ಚಿತ್ರದ ಹಾಡಿಗೆ ದಳಪತಿ ದನಿಯಾಗಲಿದ್ದಾರೆ. ಅದ್ರೆಲ್ಲೇನು ವಿಶೇಷ ಅವ್ರು ತಮ್ಮ ಹಲವು ಸಿನಿಮಾಗಳಿಗೆ ಹಾಡಿದ್ದಾರಲ್ಲ ಎನ್ನಬಹುದು ಆದ್ರೆ. ವಿಜಯ್((Thalapathy Vijay) ಫರ್ ದಿ ಫಸ್ಟ್ ಟೈಂ ಚಿತ್ರದ ಎರಡು ಹಾಡುಗಳಿಗೆ ದನಿಯಾಗುತ್ತಿದ್ದಾರೆ. ಈ ಬಗ್ಗೆ ಚಿತ್ರದ ಸಂಗೀತ ನಿರ್ದೇಶಕ ಯುವನ್ ಶಂಕರ್ ಮಾಹಿತಿ ರಿವೀಲ್ ಮಾಡಿದ್ದು, ಚಿತ್ರದ ಎರಡು ಹಾಡನ್ನು ದಳಪತಿ ವಿಜಯ್ ಹಾಡುತ್ತಿದ್ದಾರೆ ಎಂದಿದ್ದಾರೆ.
ದಳಪತಿ ಕಂಠದಲ್ಲಿ ಎರಡು ಸಾಂಗ್ ಮೂಡಿ ಬರ್ತಿದೆ ಎಂದು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದು, ಸೆಲೆಬ್ರೇಟ್ ಮಾಡಲು ಆರಂಭಿಸಿದ್ದಾರೆ. ಸಿನಿಮಾದ ಆಡಿಯೋ ಬಗ್ಗೆ ಕ್ಯೂರಿಯಸ್ ಆಗುವಂತೆ ಮಾಡಿದೆ. ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿರೋ ಈ ಚಿತ್ರದಲ್ಲಿ ಡ್ಯುಯೆಲ್ ರೋಲ್ ಪ್ಲೇ ಮಾಡಿದ್ದಾರೆ ವಿಜಯ್(Thalapathy Vijay). ‘ಗೋಟ್’ ಚಿತ್ರದ ಪೆಪ್ಪಿ ನಂಬರ್ ಸಾಂಗ್‌ಗೆ ವಿಜಯ್ ಜೊತೆ ಇಂಡಿಯನ್ ಮೈಕಲ್ ಜಾಕ್ಸನ್ ಪಭುದೇವ(Prabhudheva) ಕೂಡ ಹೆಜ್ಜೆ ಹಾಕ್ತಿರೋದು ಚಿತ್ರದ ಥ್ರಿಲ್ಲಿಂಗ್ ಸಂಗತಿ.