ರೌಡಿಬೇಬಿ ರಶ್ಮಿಕಾ ಹಾಗೂ ರೌಡಿಬಾಯ್ ವಿಜಯ್ ಇಬ್ಬರು ಫ್ರೆಂಡ್ಸಾ ಅಥವಾ ಲವ್ವರ್ಸ್ ಹೀಗೊಂದು ಪ್ರಶ್ನೆ ಅವರಿಬ್ಬರ ಅಭಿಮಾನಿಗಳನ್ನ ಮಾತ್ರವಲ್ಲ ಸಿನಿಮಾ ಪ್ರೇಮಿಗಳನ್ನು ಕೂಡ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಇವರಿಬ್ಬರು ಒಟ್ಟಿಗೆ ಓಡಾಡೋದು, ಪಾರ್ಟಿ ಮಾಡೋದು, ಫಾರಿನ್-ಗೀರಿನ್ ಅಂತ ಸುತ್ತಾಡೋದನ್ನ ನೋಡಿದವರು ಇವರಿಬ್ಬರು ಜಸ್ಟ್ ಫ್ರೆಂಡ್ಸ್ ಆಗಿರಲಿಕ್ಕೆ ಸಾಧ್ಯವಿಲ್ಲ ಬಿಡಿ ಎಂದ್ರೂ ಕೂಡ, ಗೀತಗೋವಿಂದಂ ಜೋಡಿ ಮಾತ್ರ ನೋ ನೋ ವೀ ಆರ್ ಜಸ್ಟ್ ಫ್ರೆಂಡ್ಸ್ ಎನ್ನುತ್ತಾ ನಕ್ಕು ಮುಂದಕ್ಕೆ ಹೋಗ್ತಿದ್ದಾರೆ. ಹೀಗಾಗಿ, ಲಿಲ್ಲಿ ಬಾಬಿ ನಡುವಿರೋದು ಬರೀ ಸ್ನೇಹನಾ ಅಥವಾ ಸ್ನೇಹಕ್ಕೂ ಮೀರಿದ ಸಂಬಂಧನಾ ಅನ್ನೋದಕ್ಕೆ ಕ್ಲ್ಯಾರಿಟಿ ಸಿಗ್ತಿಲ್ಲ. ಹೀಗಿರುವಾಗ ಸಾನ್ವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ‘ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು ಹೇಳಲು ಬಯಸುತ್ತೇನೆ’ ಎಂದಿದ್ದಾರೆ
ಅಷ್ಟಕ್ಕೂ, ರಶ್ಮಿಕಾ ಈ ರೀತಿ ಹೇಳಿದ್ಯಾರಿಗೆ?ಸಾನ್ವಿ ಜೀವನದಲ್ಲಿ ಬಂದವರ್ಯಾರು? ಯಾರ ಆಗಮನದಿಂದ ಶ್ರೀವಲ್ಲಿ ದಿಲ್ ಖುಷ್ ಆಗಿದ್ದಾಳೆ? ಅದ್ಯಾರಿಗೆ ಥ್ಯಾಂಕ್ಸ್ ಹೇಳಿದಳು? ಹೀಗೆ ಕುತೂಹಲದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಇದೆ. ಅಟ್ ದಿ ಸೇಮ್ ಟೈಮ್ ರಶ್ಮಿಕಾ ಹೀಗ್ ಹೇಳಿರೋದು ರೌಡಿಬಾಯ್ಗಿರಬಹುದಾ? ಹೀಗೊಂದು ಡೌಟ್ ಕೂಡ ಶುರುವಾಗಿದೆ. ಯಾಕಂದ್ರೆ, ಲಿಲ್ಲಿ-ಬಾಬಿ ನಡುವಿನ ಬಾಡಿಂಗ್ ಬರೀ ಸ್ನೇಹಕ್ಕಷ್ಟೇ ಸೀಮಿತವಾಗಿದೆ ಅಂತನ್ಸಲ್ಲ. ಕೈ ಕೈ ಇಡ್ಕೊಂಡು ಒಟ್ಟಿಗೆ ಓಡಾಡಲ್ಲ ಅನ್ನೋದನ್ನ ಬಿಟ್ಟರೆ ಪಾರ್ಟಿ, ಫಂಕ್ಷನ್, ಫೆಸ್ಟಿವಲ್, ಫಾರಿನ್ ಟ್ರಿಪ್ ವಿಚಾರದಲ್ಲಿ ಸಾಕಷ್ಟು ಭಾರಿ ಇಬ್ಬರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಬೇರೆ ಬೇರೆ ಬ್ಯಾಕ್ ಡ್ರಾಪ್ನಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟರು ಕೂಡ ನೆಟ್ಟಿಗರ ಕೈಗೆ ಎಷ್ಟೋ ಭಾರಿ ತಗಲಾಕಿಕೊಂಡಿದ್ದಾರೆ. ಇಷ್ಟಾದ್ರೂ ಕೂಡ ರಶ್ಮಿಕಾ ಹಾಗೂ ವಿಜಯ್ ತಮ್ಮ ಸ್ನೇಹ-ಸಂಬಂಧದ ಬಗ್ಗೆ ಓಪನ್ನಾಗಿ ಮಾತನಾಡ್ತಿಲ್ಲ. ಹಾಗಂತ, ಅವರ ಫ್ಯಾನ್ಸ್ ಪ್ಲಸ್ ನೆಟ್ಟಿಗರು ಸುಮ್ನೆ ಕೂತಿಲ್ಲ. ಅವರಿಬ್ಬರ ಫೋಟೋಗೆ ಲೈಕ್, ಕಮೆಂಟ್ ಮಾಡ್ತಾ ನೀವಿಬ್ಬರು ರಿಯಲ್ ಲೈಫ್ ನಲ್ಲಿ ಒಂದಾದರೆ ಚೆನ್ನಾಗಿರುತ್ತೆ ನೋಡಿ ಯೋಚನೆ ಮಾಡಿ ಅಂತಿದ್ದಾರೆ.
ಸದ್ಯಕ್ಕೆ ಈ ಜೋಡಿ ಪ್ರೊಫೆಷನಲ್ ಲೈಫ್ಗೆ ತುಂಬಾ ಒತ್ತು ಕೊಡ್ತಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರೌಡಿಬಾಯ್ ವಿಜಯ್ ಬಿಗ್ ಬ್ರೇಕ್ಗಾಗಿ ಎದುರುನೋಡ್ತಿದ್ದಾರೆ. ಇತ್ತ ರಶ್ಮಿಕಾ ಅನಿಮಲ್ ಸಿನಿಮಾ ಮೂಲಕ ದೊಡ್ಡ ಸಕ್ಸಸ್ ಕಂಡು ಬೀಗುತ್ತಿದ್ದಾರೆ. ನ್ಯಾಷನಲ್ ಕ್ರಷ್ ಆಗಿ ಕೇಕೆ ಹೊಡೆಯುತ್ತಿರೋ ಕಿರಿಕ್ ಬ್ಯೂಟಿಗೆ ಅದೃಷ್ಟ ಮತ್ತೆ ಕೈ ಹಿಡಿದಿದೆ. ಬಾಲಿವುಡ್ ಅಂಗಳದಲ್ಲಿ ನೆಲೆ ಕಂಡುಕೊಳ್ಳೋಕೆ ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸಾಥ್ ಕೊಟ್ಟಿದೆ. ಸದ್ಯ ಸಾನ್ವಿ ಪುಷ್ಪ ಪಾರ್ಟ್ 2 ನಲ್ಲಿ ತೊಡಗಿಸಿಕೊಂಡಿದ್ದಾಳೆ. ಇದರ ಜೊತೆಗೆ ರೈನೋ ಹಾಗೂ ದಿ ಗರ್ಲ್ ಫ್ರೆಂಡ್ ಸಿನಿಮಾ ಕೂಡ ಶ್ರೀವಲ್ಲಿ ಕೈಯಲ್ಲಿವೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ಚಮಕ್ ಚೆಲುವೆ, ವೈಯಕ್ತಿಕ ಜೀವನದ ಕಡೆ ಯಾವಾಗ ಗಮನ ಕೊಡ್ತಾರೋ? ಅದ್ಯಾರನ್ನ ಲೈಫ್ ಪಾರ್ಟನರ್ ಆಗಿ ಬರಮಾಡಿಕೊಳ್ತಾರೋ>? ಜಸ್ಟ್ ವೇಯ್ಟ್ ಅಂಡ್ ಸೀ