Premulu: 2024ರ ಮೊದಲಾರ್ಧ ಮಾಲಿವುಡ್(Mollywood) ಸಿನಿರಂಗದ ಪಾಲಿಗೆ ಅದೃಷ್ಟ ತಂದುಕೊಟ್ಟ ವರ್ಷವೆಂದ್ರೆ ತಪ್ಪಾಗೋದಿಲ್ಲ. ಚಿತ್ರೋಧ್ಯಮದಲ್ಲಿ ಉತ್ತಮ ಕಂಟೆಂಟ್ ಸಿನಿಮಾಗಳು ಮೂಡಿ ಬರ್ತಿದ್ದು, ಒಂದಾದ ಮೇಲೊಂದು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತ ವರ್ಲ್ಡ್ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಕೇವಲ ಮೂರು ತಿಂಗಳಲ್ಲಿ ಮೂರು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನೂರು ಕೋಟಿ ಗಳಿಕೆ ಕಂಡಿವೆ.
ಫೆಬ್ರವರಿ ಆರಂಭದಲ್ಲಿ ತೆರೆಕಂಡ ‘ಪ್ರೇಮುಲು’(Premulu) ಸಿನಿಮಾ ಮಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಪ್ರೇಮುಲುಗೆ ಗಿರೀಶ್ ಎ.ಡಿ(Girish A.D)ಆಕ್ಷನ್ ಕಟ್ ಹೇಳಿದ್ದಾರೆ. ಯೂತ್ಸ್ ಗಮನ ಸೆಳೆದ ಈ ಚಿತ್ರ ಇದೀಗ ವರ್ಲ್ ವೈಡ್ 130 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ‘ಮಂಜುಮ್ಮೆಲ್ ಬಾಯ್ಸ್’(Manjummel Boys), ‘ಆಡು ಜೀವಿತಂ’ ಸಿನಿಮಾ ಸಾಲಿಗೆ ಪ್ರೇಮುಲು ಸಿನಿಮಾ ಸೇರಿಕೊಂಡಿದೆ. ಇದರೊಂದಿಗೆ 2024 ಮೊದಲಾರ್ಧದಲ್ಲೇ ಮಾಲಿವುಡ್ 3 ಸಿನಿಮಾಗಳು ನೂರು ಕೋಟಿ ಗಡಿ ದಾಟಿ ದಾಖಲೆ ಬರೆದಿದೆ.
ಬ್ಯಾಕ್ ಬ್ಯಾಕ್ ಟು ಸಿನಿಮಾಗಳ ಬ್ಲಾಕ್‌ಬಸ್ಟರ್ ಗೆಲುವು ವಿಶ್ವ ಸಿನಿಪ್ರಿಯರ ಗಮನವನ್ನು ಸೆಳೆಯುವಂತೆ ಮಾಡಿದ್ದು, ಮಾಲಿವುಡ್‌ನಲ್ಲಿ(Mollywood) ಯಾವ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಗೂಗಲ್ ಮಾಡುತ್ತಿದ್ದಾರೆ. ಸಿಂಪಲ್ ಸ್ಟೋರಿ ಲೈನ್‌ಗಳು ಈ ರೇಂಜಿಗೆ ಸೌಂಡ್ ಮಾಡ್ತಿರೋದು ಬೇರೆ ಸಿನಿರಂಗದವರ ಕಿವಿ ನೆಟ್ಟಗಾಗುವಂತೆ ಮಾಡಿದೆ. ಸೂಪರ್ ಸ್ಟಾರ್‌ಗಳ ಕೋಟಿ ಕೋಟಿ ಬಜೆಟ್ ಸಿನಿಮಾಗಳೇ ಬಾಕ್ಸ್ ಆಫೀಸ್ ಸೋತು ಸುಣ್ಣವಾಗುತ್ತಿರುವಾಗ ಮೂರು ನಾಲ್ಕು ಕೋಟಿ ಬಜೆಟ್ ಸಿನಿಮಾಗಳು ನೂರು ಕೋಟಿ ಕಲೆಕ್ಷನ್ ಮಾಡುತ್ತಿವೆ ಎಂದರೆ ಅದೆಷ್ಟು ಎಫೆಕ್ಟಿವ್ ಆಗಿ ಕಥೆಯನ್ನು ಕಟ್ಟಿಕೊಡಲಾಗುತ್ತಿದೆ ಅನ್ನೋದು ಗಮನಿಸಬೇಕಾದ ಸಂಗತಿ.