Chiyaan Vikram: ಚಿಯಾನ್ ವಿಕ್ರಮ್ ಸೌತ್ ಚಿತ್ರರಂಗದ ಅದ್ಭುತ ನಟರಲೊಬ್ಬರು. ‘ಅನ್ನಿಯನ್’, ‘ಐ’ ಸಿನಿಮಾಗಳು ಚಿಯಾನ್(Chiyaan Vikram) ನಟನೆಗೆ ಹಿಡಿದ ಕೈಗನ್ನಡಿ. 60ರ ಆಸುಪಾಸಿನಲ್ಲೂ ಅದೇ ಫಿಟ್ನೆಸ್, ಅದೇ ಚಾರ್ಮ್. ಅದೇ ಎನರ್ಜಿ. ಈ ಸ್ಟಾರ ನಟ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಚಿಯಾನ್(Chiyaan Vikram) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ತಂಗಳನ್’(Thangalaan). ಚಿತ್ರತಂಡ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ವಿಶೇಷ ವೀಡಿಯೋ ಬಿಡುಗಡೆ ಮಾಡಿದೆ. ಚಿತ್ರೀಕರಣದ ಕೆಲ ಮ್ಯಾಸಿವ್ ತುಣುಕುಗಳನ್ನು ಶೇರ್ ಮಾಡಿದೆ ಪಂ.ರಂಜಿತ್(Pa Ranjith) ಅಂಡ್ ಟೀಂ. ಚಿತ್ರದಲ್ಲಿ ಚಿಯಾನ್ ರೂಪಾಂತರ ಕಂಡು ಸಿನಿಲೋಕ ಬೆರಗಾಗಿದೆ. ವೇಷ-ಭೂಷಣ, ಮೇಕಪ್ ಎಲ್ಲವೂ ಕಿಕ್ಕೇರಿಸುವಂತಿದ್ದು, ಅವರೊಳಗಿರುವ ಅದ್ಭುತ ನಟ ಇಲ್ಲಿ ರಾಕ್ಷಸನಂತೆ ಅಬ್ಬರಿಸಿದ್ದಾನೆ. ವೀಡಿಯೋ ಕಂಡು ಸಿನಿರಸಿಕರು ಬಾಯ್ ಮೇಲೆ ಬೆರಳಿಟ್ಟು ಬೆಕ್ಕಸ ಬೆರಗಾಗಿದ್ದಾರೆ. ಚಿಯಾನ್ ವಿಕ್ರಮ್ ಅವತಾರಕ್ಕೆ ಫಿದಾ ಆಗಿದ್ದಾರೆ.
ಕೋಲಾರ ಗಣಿ ಕಾರ್ಮಿಕರ ಜೀವನದ ಸುತ್ತ ಹೆಣೆದ ನೈಜ ಘಟನೆ ಆಧರಿಸಿದ ಸಿನಿಮಾ ‘ತಂಗಳನ್’(Thangalaan) ಪ್ಯಾನ್ ಇಂಡಿಯಾ ಸಿನಿಮಾಗೆ ಯಂಗ್ ಅಂಡ್ ಟ್ಯಾಲೆಂಟೆಡ್ ಜಿ.ವಿ ಪ್ರಕಾಶ್ ಕುಮಾರ್(G V Prakash Kumar) ಸಂಗೀತ ನಿರ್ದೇಶನವಿದೆ. ಮೇ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.