ಸುನಾಮಿ ಗುರುಮೂರ್ತಿ ನಿರ್ದೇಶನದ, ಕೋಮಲ ನಟರಾಜ್ ನಿರ್ಮಿಸಿರುವ ‘ಮಾರಕಾಸ್ತ್ರ’ ಚಿತ್ರದ ‘ಗ್ಲಾಮರು ಗಾಡಿ…’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಮಂಜು ಕವಿ ಬರೆದು, ಸಂಗೀತ ಸಂಯೋಜಿಸಿರುವ ‘ಗ್ಲಾಮರು ಗಾಡಿ…’ ಹಾಡಿಗೆ ಗಾಯಕಿ ಅನನ್ಯಾ ಭಟ್ ಧನಿಯಾಗಿದ್ದು, ಹೀನಾ ಎಂ ಪಂಚಾಲ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಮಾರಕಾಸ್ತ್ರ’ ಸಿನಿಮಾದ ಈ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿತು. ಮಾಲಾಶ್ರೀ, ಹರ್ಷಿಕಾ ಪೂಣಚ್ಛ, ಆನಂದ್ ಆರ್ಯನ್, ರವಿಚೇತನ್, ಮೈಕೊ ನಾಗರಾಜ್, ಮನಮೋಹನ್ ರೈ, ಭರತ್ ಮುಂತಾದವರು ‘ಮಾರಕಾಸ್ತ್ರ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಮಾರಕಾಸ್ತ್ರ’ ಸಿನಿಮಾಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ವಿಶ್ವ ಸಂಕಲನವಿದೆ.
‘ಮಾರಕಾಸ್ತ್ರ’ ಒಂದು ಕೌಟುಂಬಿಕ ಕಥಾಹಂದರದ ಸಿನಿಮಾವಾಗಿದ್ದು, ಇದರಲ್ಲಿ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಚಿತ್ರದಲ್ಲಿ ಏಳು ಹಾಡುಗಳಿದೆ. ಆ ಪೈಕಿ ನಾಲ್ಕು ಹಾಡುಗಳನ್ನು ನಟರಾಜ್ ಅವರೆ ಹಾಡಿದ್ದಾರೆ. ಈಗಾಗಲೇ ಟೀಸರ್ ಎಲ್ಲರ ಮನ ಗೆದ್ದಿದೆ. ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ.