Prabhas: ಡಾರ್ಲಿಂಗ್ ಪ್ರಭಾಸ್(Prabhas) ಮುಖ್ಯ ಭೂಮಿಕೆಯ ಬಹು ತಾರಾಗಣದ ಸಿನಿಮಾ ʻಕಲ್ಕಿʼ(Kalki2898). ಭಾರತೀಯ ಚಿತ್ರರಂಗವೇ ಈ ಸಿನಿಮಾಗಾಗಿ ಎದುರು ನೋಡುತ್ತಿದೆ. ಸಿನಿ ದುನಿಯಾದ ದಿಗ್ಗಜರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿರುವ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದ್ರೆ ಚುನಾವಣೆ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತಿದೆ.
ಪ್ರಭಾಸ್(Prabhas) ನಟನೆಯ ʻಕಲ್ಕಿʼ(Kalki2898) ಸಿನಿಮಾ ಮೇ 9ರಂದು ತೆರೆ ಕಾಣಲಿದೆ ಎಂದ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿದೆ. ಆದರೆ ಇದೀಗ ಚಿತ್ರತಂಡಕ್ಕೆ ಲೋಕಸಭೆ ಚುನಾವಣೆ ದೊಡ್ಡ ತಲೆ ನೋವಾಗಿದೆ. ಇಡೀ ದೇಶವೇ ಚುನಾವಣೆ ಗುಂಗಲ್ಲಿದೆ ಇಂತಹ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ದೊಡ್ಡ ಹೊಡೆತ ಬೀಳುತ್ತೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಆದ್ರಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡುವ ಆಲೋಚನೆಯಲ್ಲಿದೆ ಸಿನಿಮಾ ತಂಡ. ಈ ಬಗ್ಗೆ ಚರ್ಚೆ ನಡೆಸಯುತ್ತಿದ್ದು ಸದ್ಯದಲ್ಲೇ ಅಧೀಕೃತ ಮಾಹಿತಿ ಹೊರ ಬೀಳಲಿದೆ.
ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್(Nag Ashwin) ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಬಿಗ್ ಬಿ ಅಮಿತಾಬ್ ಬಚ್ಚನ್(Amitabh Bachchan), ದೀಪಿಕಾ ಪಡುಕೋಣೆ(Deepika Padukone), ಕಮಲ್ ಹಾಸನ್(Kamal Haasan) ಒಳಗೊಂಡ ಸಿನಿ ದಿಗ್ಗಜರ ಬಳಗವೇ ಈ ಚಿತ್ರದಲ್ಲಿದೆ. ಬಿಗ್ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರವನ್ನು ನೋಡಲು ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದೆ.