2020ರಲ್ಲಿ ಪ್ರಮೋದ್ ಶೆಟ್ಟಿ ಅಭಿನಯದ ‘ಒಂದು ಶಿಕಾರಿಯ ಕಥೆ’ ಸಿನಿಮಾವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸಚಿನ್ ಶೆಟ್ಟಿ, ಈ ಬಾರಿ ಹದಿಹರೆಯದ ಪ್ರೇಮಕಥೆಯೊಂದನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. ಸಚಿನ್ ಶೆಟ್ಟಿ ನಿರ್ದೇಶನದ ಈ ಹೊಸ ಸಿನಿಮಾಕ್ಕೆ ‘ವಸಂತಕಾಲದ ಹೂಗಳು’ ಎಂದು ಹೆಸರಿಡಲಾಗಿದ್ದು, ಸದ್ದಿಲ್ಲದೆ ಈ ಸಿನಿಮಾದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ.
‘ವಸಂತಕಾಲದ ಹೂಗಳು’ ಸಿನಿಮಾದಲ್ಲಿ ನಾಯಕನಾಗಿ ಸಚಿನ್ ರಾಠೋಡ್, ನಾಯಕಿಯಾಗಿ ರಾಧಾ ಭಗವತಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು,ಉಳಿದಂತೆ ರಮೇಶ್ ರೈ, ಗುರುರಾಜ್ ಶೆಟ್ಟಿ, ಪವನ್, ನಂದೀಶ್ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶೋಕ್ ರಾಠೋಡ್, ಸಿದ್ದು ರಾಸುರೆ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಬಿಜಾಪುರ ಜಿಲ್ಲೆಯ ಕನಮಡಿ ಎಂಬ ಗ್ರಾಮದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆಸಲಾಗಿದೆ. ಶಿವಶಂಕರ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನವಿದೆ