ಬಿಟೌನ್ ಕಿಂಗ್ ಖಾನ್ ಶಾರುಖ್ ಸೋಲಿಗೆ ಸೆಡ್ಡು ಹೊಡೆದಿದ್ದು, ಗೆಲುವಿನ ಗದ್ದುಗೆ ಏರಿ ಗಹಗಹಿಸಿದ್ದು ಪಠಾಣ್ ಸಿನಿಮಾದಿಂದ ಅನ್ನೋ ವಿಚಾರವನ್ನ ಹೊಸದಾಗಿ ಹೇಳಬೇಕಾಗಿಲ್ಲ. ಹ್ಯಾಪಿ ನ್ಯೂ ಇಯರ್ ನಂತರ ಬಿಟೌನ್ ಬಾದ್‌ಷಾಗೆ ಗೆಲುವು ಅನ್ನೋದು ಮರೀಚಿಕೆಯಾಗಿತ್ತು. ದಿಲ್‌ವಾಲೇ, ಫ್ಯಾನ್, ಡಿಯರ್ ಜಿಂದಗಿ, ರಯೀಸ್, ಜಬ್ ಹ್ಯಾರಿ ಮೆಟ್ ಸೀಜಲ್, ಜೀರೋ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ರೂ ಕೂಡ ಸಕ್ಸಸ್ ಸಿಗಲಿಲ್ಲ. ಅಲ್ಲಿಂದ 4 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ ಕಿಂಗ್ ಖಾನ್, ಪಠಾಣ್ ಮೂಲಕ ಕಣಕ್ಕಿಳಿದಿದ್ದು, ಫೀನಿಕ್ಸ್‌ನಂತೆ ಎದ್ದುಬಂದಿದ್ದು ಕಣ್ಣಮುಂದಿರೋ ಸತ್ಯ.
ಅಷ್ಟಕ್ಕೂ, ನಾವ್ ಇವತ್ತು ಪಠಾಣ್ ಬಗ್ಗೆ ಮತ್ತೆ ಮಾತನಾಡ್ತಿರೋದಕ್ಕೆ ಕಾರಣ ಪಠಾಣ್ ಸೀಕ್ವೆಲ್. ಯಸ್, ಈಗ ಸಿನಿದುನಿಯಾದಲ್ಲಿ ಸೀಕ್ವೆಲ್ ಟ್ರೆಂಡ್ ಶುರುವಾಗಿದೆ. ಸೌತ್-ನಾರ್ತ್ ಎಲ್ಲಾ ಸಿನಿಮಾ ಮಂದಿ ಕೂಡ ಸೀಕ್ವೆಲ್, ಪ್ರೀಕ್ವೆಲ್ ಹಿಂದೆಬಿದ್ದಿದ್ದಾರೆ. ಇದಕ್ಕೆ ಪಠಾಣ್ ಫಿಲ್ಮ್ ಟೀಮ್ ಕೂಡ ಹೊರತಾಗಿಲ್ಲ. ಬಾದ್‌ಷಾ ಕರಿಯರ್‌ಗೆ ಹಾಗೂ ಬಿಟೌನ್ ಬಾಕ್ಸ್ ಆಫೀಸ್‌ಗೆ ಬಲ ತುಂಬಿದ ಪಠಾಣ್ ಸಿನಿಮಾ, ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿ 1000 ಕೋಟಿ ಕೊಳ್ಳೆಹೊಡೆದಿತ್ತು. ಈ ಮೂಲಕ 2023ರ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು. ಆಲ್ ಓವರ್ ಇಂಡಿಯಾ ಮಾತ್ರವಲ್ಲ ಆಲ್ ಓವರ್ ವರ್ಲ್ಡ್ ಕಿಂಗ್ ಖಾನ್ ನಟನೆಯ ಸ್ಪೈ ಆಕ್ಷನ್ ಥ್ರಿಲ್ಲರ್ ಪಠಾಣ್ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿತ್ತು. ಬೇಷರಮ್ ಸಾಂಗ್ ವಿವಾದಕ್ಕೀಡಾದ್ರೂ ಕೂಡ ಪಠಾಣ್‌ಗೆ ಪ್ಲಸ್ ಆಗಿತ್ತು.
ಇದೀಗ ಪಠಾಣ್ ಫಿಲ್ಮ್ ಟೀಮ್ ಸದ್ದಿಲ್ಲದೇ ಪಾರ್ಟ್-2 ತಯಾರಿಯಲ್ಲಿ ತೊಡಗಿಸಿಕೊಂಡಿದೆಯಂತೆ. ಪ್ರಿ ಪ್ರೊಡಕ್ಷನ್ ವರ್ಕ್ ನಡೀತಿದ್ದು, ಇದೇ ವರ್ಷ ಕೊನೆಗೆ ತೆರೆಕಂಡರೂ ಅಚ್ಚರಿಯಿಲ್ಲ ಎನ್ನುವ ಸುದ್ದಿ ಓಡಾಡ್ತಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ, ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣಗೊಂಡಿತ್ತು. ಇದೀಗ ಪಾರ್ಟ್2 ಕೂಡ ಪಾರ್ಟ್1ಗಿಂತ ರಿಚ್ ಆಗಿ ತಯಾರಾಗೋದ್ರಲ್ಲಿ ನೋ ಡೌಟ್. ಸದ್ಯ, ಬಿಟೌನ್ ಬಜಾರ್‌ನಲ್ಲಿ ಪಠಾಣ್ ಪಾರ್ಟ್2 ಬಗ್ಗೆ ಜೋರಾಗಿ ಸುದ್ದಿಯಾಗ್ತಿದೆ. ಚಿತ್ರತಂಡದ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.