Sanju Weds Geetha2: 2011ರಲ್ಲಿ ತೆರೆಕಂಡ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಶ್ರೀನಗರ ಕಿಟ್ಟಿಗೆ ದೊಡ್ಡ ಬ್ರೇಕ್ ತಂದುಕೊಟ್ಟ ಚಿತ್ರವಿದು. ಶ್ರೀನಗರ ಕಿಟ್ಟಿ(Srinagar Kitty), ರಮ್ಯಾ(Ramya), ನಿರ್ದೇಶಕ ನಾಗಶೇಖರ್(Nagashekar) ಕಾಂಬಿನೇಶನ್‌ನಲ್ಲಿ ಬಂದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದೇ ನಾಗಶೇಖರ್, ಶ್ರೀನಗರ ಕಿಟ್ಟಿ ಮತ್ತೆ ಒಂದಾಗಿರೋ ಸಿನಿಮಾ ‘ಸಂಜು ವೆಡ್ಸ್ ಗೀತಾ-2’ (SanjuWedsGeetha2).
‘ಸಂಜು ವೆಡ್ಸ್ ಗೀತಾ’2(SanjuWedsGeetha2) ಸೆಟ್ಟೇರಿರೋದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿ ಚಿತ್ರತಂಡ ಡಬ್ಬಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದೆ. ಸಾಧುಕೋಕಿಲ ಸ್ಟುಡಿಯೋದಲ್ಲಿ ಸಿನಿಮಾತಂಡ ಡಬ್ಬಿಂಗ್ ಆರಂಭಿಸಿದೆ. ಮೊದಲ ಭಾಗದಲ್ಲಿ ಶ್ರೀನಗರ ಕಿಟ್ಟಿ(Srinagar Kitty) ಜೋಡಿಯಾಗಿ ಮೋಹಕ ತಾರೆ ರಮ್ಯಾ ನಟಿಸಿದ್ರೆ, ಇಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಜೊತೆಯಾಗಿದ್ದಾರೆ.
ನಾಗಶೇಖರ್(Nagashekar) ಸಿನಿಮಾ ಅಂದ್ರೆ ಕೇಳಬೇಕಾ, ಅವರದ್ದೇ ಒಂದು ಸ್ಟೈಲ್ ಇದೆ. ಅದ್ದೂರಿತನ, ಬ್ಯೂಟಿಫುಲ್ ಹಾಡುಗಳು, ಇಂಪಾದ ಮ್ಯೂಸಿಕ್ ಜೊತೆಗೆ ಬ್ಯೂಟಿಫುಲ್ ಲವ್ ಸ್ಟೋರಿ ಇವರ ಬೆಂಚ್ ಮಾರ್ಕ್. ಸಂಜು ವೆಡ್ಸ್ ಗೀತಾ-2(SanjuWedsGeetha2) ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿಯೇ ಈ ಸಿನಿಮಾ ಮೇಲಿನ ನಿರೀಕ್ಷೆ ಕೂಡ ಹೆಚ್ಚಿದೆ.ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬರ್ತಿದ್ದು, ಸ್ವಿಟ್ಜರ್ಲೆಂಡ್‌ನ ಬ್ಯೂಟಿಫುಲ್ ಲೊಕೇಶನ್‌ಗಳಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಜೂನ್‌ನಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್‌ನಲ್ಲಿದೆ ಚಿತ್ರತಂಡ.