Ramayana: ಬಿಟೌನ್ ಅಂಗಳದಲ್ಲಿ ಬಹು ಕೋಟಿ ವೆಚ್ಚದ ರಾಮಾಯಣ(Ramayana) ಸಿನಿಮಾದೇ ಸದ್ದು, ಸುದ್ದಿ. ದಿನಕ್ಕೊಂದು ಅಂತೆ ಕಂತೆ ಸುದ್ದಿ ಈ ಸಿನಿಮಾದ ಸುತ್ತ ಸುತ್ತಿಕೊಂಡಿರುತ್ತೆ. ದಿನದಿಂದ ದಿನಕ್ಕೆ ಸಿನಿಮಾದ ಮೇಲಿರುವ ಹೈಪ್ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಕಾರಣ ಸಿನಿಮಾದ ಬಜೆಟ್, ಸ್ಟಾರ್ ಕಾಸ್ಟ್ ಹಾಗೆಯೇ ನಿರ್ದೇಶಕರು.. ಬಿಟೌನ್ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಈ ಸಿನಿಮಾದ ಬಗ್ಗೆ ಕ್ಯೂರಿಯಾಸ್‌ಗೊಂಡಿದೆ. ಈ ಕ್ಯೂರಿಯಸ್ ಪ್ರಪಂಚದಿಂದ ಹೊಸ ಸುದ್ದಿ ತೇಲಿ ಬಂದಿದೆ.
ದಂಗಲ್ ಸಿನಿಮಾ ಖ್ಯಾತಿಯ ನಿತೇಶ್ ತಿವಾರಿ(Nitesh Tiwari) ನಿರ್ದೇಶನದಲ್ಲಿ ಮೂಡಿ ಬರಲಿರುವ ರಾಮಾಯಣ(Ramayana) ಸಿನಿಮಾ ಶೂಟಿಂಗ್ ಫೈನಲಿ ಆರಂಭವಾಗಿದೆ. ಹಾಗಂತ ಸಿನಿಮಾದ ನಾಯಕನಟ ರಣಬೀರ್ ಕಪೂರ್(Ranbeer Kapoor) ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಬಾಲನಟ ಪಾತ್ರಧಾರಿಗಳ ಚಿತ್ರೀಕರಣ ನಿನ್ನೆಯಿಂದ(ಏಪ್ರಿಲ್ ೨) ಆರಂಭವಾಗಿದೆ. ಮುಂಬೈನ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣಕ್ಕಾಗಿ ಬೃಹತ್ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಗುರುಕುಲ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಸದ್ಯದಲ್ಲೇ ರಣಬೀರ್ ಚಿತ್ರೀಕರಣ್ಕಕೆ ಹಾಜರ್ ಆಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರ್ತಿವೆ.
ರಾಮನ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗಿರುವ ರಣಬೀರ್(Ranbeer Kapoor) ಪಾತ್ರಕ್ಕೆ ಬೇಕಾದ ತಯಾರಿಗಾಗಿ ಲಾಸ್ ಎಂಜಲೀಸ್‌ನಲ್ಲಿ ತರಭೇತಿ ಪಡೆಯುತ್ತಿದ್ದಾರೆ. ಚಿತ್ರದ ತಾರಾಬಳಗ ಸ್ಟಾರ್ ನಟ-ನಟಿ ಮಣಿಯರಿಂದ ಕೂಡಿರಲಿದೆ. ರಾಕಿಂಗ್ ಸ್ಟಾರ್ ಯಶ್(Yash), ಸಾಯಿ ಪಲ್ಲವಿ(Sai Pallavi) ಈ ಸಿನಿಮಾದ ಭಾಗವಾಗಲಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿಗಳು ಜೋರಾಗಿ ಸೌಂಡ್ ಮಾಡ್ತಿವೆ. ಸಿನಿಮಾ ಬಗ್ಗೆ ಇಲ್ಲಿವರೆಗೂ ಗುಟ್ಟು ಬಿಟ್ಟು ಕೊಡದ ಚಿತ್ರತಂಡ ರಾಮನವಮಿಯಂದು ಫಸ್ಟ್ ಲುಕ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.