ಇತ್ತೀಚೆಗೆ ದುಬೈಯಲ್ಲಿ ನಡೆದ ‘ಆಟಿದೊಂಜಿ ದಿನ’ ಸಮಾರಂಭದಲ್ಲಿ ‘ಕುದ್ರು’ ಸಿನಿಮಾದ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಯಿತು. ಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕರಾದ ಭಾಸ್ಕರ್ ನಾಯ್ಕ್, ನಾಯಕ ನಟ ಹರ್ಷಿತ್ ಶೆಟ್ಟಿ, ನಾಯಕಿರಾದ ಪ್ರಿಯಾ ಹೆಗ್ಡೆ, ಡೈನ ಡಿಸೋಜಾ ಮೊದಲಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ದಕ್ಷಿಣ ಕನ್ನಡದ ಸಂಸ್ಕೃತಿಯನ್ನು UAE ಯಲ್ಲಿ ಬಿಂಬಿಸುವ ಹಬ್ಬದಾಚರಣೆ (ಆಟಿದೊಂಜಿ ದಿನ) ಎಲ್ಲರ ಮನ ಗೆದ್ದಿತು. ಈ ಸಮಾರಂಭದಲ್ಲಿ ‘ಕುದ್ರು’ ಸಿನಿಮಾದ ಟೈಟಲ್ ಸಾಂಗ್ ಹಾಗೂ ಫೇರ್ವೆಲ್ ಪಾರ್ಟಿ ಸಾಂಗ್ ಬಿಡುಗಡೆ ಮಾಡಲಾಯಿತು. ನಮ್ರಿತ ಮಲ್ಲ ರವರ ಈ ಹಾಡುಗಳಿಗೆ ಹೆಜ್ಜೆ ಹಾಕಿದರು.
ನಿರ್ದೇಶಕ ಕಂ ನಿರ್ಮಾಪಕ ಭಾಸ್ಕರ್ ನಾಯ್ಕ್ ಮಾತನಾಡಿ, ‘’ಕುದ್ರು’ ಒಂದು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ. ‘ಆಯಿಲ್ ರಿಗ್’ನಲ್ಲಿ ಶೂಟ್ ಮಾಡಿದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ಶೀಘ್ರದಲ್ಲಿಯೇ ಸಿನಿಮಾದ ಬಿಡುಗಡೆಯಾಗಲಿದೆ’ ಎಂದರು.
ನಾಯಕ ನಟ ಹರ್ಷಿತ್ ಶೆಟ್ಟಿ, ಪ್ರಿಯಾ ಹೆಗ್ಡೆ ಹಾಗೂ ಡೈನ ಡಿಸೋಜಾ ಮಾತನಾಡಿ ತಮ್ಮ ಪರಿಚಯದೊಂದಿಗೆ ಸಿನಿಮಾ ಕುರಿತಾದ ಅನುಭವ ಹಂಚಿಕೊಂಡರು. ‘ಕುದ್ರು’ ಚಿತ್ರದಲ್ಲಿ ದಕ್ಷಿಣ ಕನ್ನಡದ ಸುಂದರ ತಾಣಗಳನ್ನು ಹಾಗೂ ಕೋಲ, ಕಂಬಳ, ಯಕ್ಷಗಾನ ದಂತಹ ಕಲೆಗಳನ್ನು ಪರಿಚಯ ಮಾಡಿಸಲಾಗಿದ್ದು, ಇದೇ ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗವ ಸಾಧ್ಯತೆಯಿದೆ.