Appaji: ಸರಿಸುಮಾರು ಮೂರು ದಶಕಗಳ ಹಿಂದೆ ವಿಷ್ಣುದಾದ ಅಭಿನಯಸಿದ್ದ ‘ಅಪ್ಪಾಜಿ’ ಸಿನಿಮಾ ಎಲ್ಲರಿಗೂ ನೆನಪಿದ್ದೇ ಇರುತ್ತೆ. ಈಗ್ಯಾಕೆ ಆ ಸಿನಿಮಾ ಮಾತು ಅಂತಿದ್ರೆ ಅದಕ್ಕೆ ಉತ್ತರ ಈ ಹೆಸರಲ್ಲಿ ಈಗ ಸಿನಿಮಾ ಸೆಟ್ಟೇರಿದೆ. ‘ಪ್ರೀತಿಗೆ ಕಡಲು ಕೋಪಕ್ಕೆ ಸಿಡಿಲು’ ಅಡಿಬರಹವಿರುವ ‘ಅಪ್ಪಾಜಿ’(Appaji) ಚಿತ್ರ ತೆರೆಮೇಲೆ ಹೊಸ ಕಥೆ ಹೇಳಲು ಬರ್ತಿದೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್(Pratham), ಹಿರಿಯ ನಟ ಸ್ವಸ್ತಿಕ್ ಶಂಕರ್ ಅಪ್ಪಾಜಿ ಸಿನಿಮಾಗೆ ಶುಭ ಹಾರೈಸಿದ್ದಾರೆ. ಓಂಪ್ರತಾಪ್.ಹೆಚ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷ ನಿರ್ದೇಶನ ವಿಭಾಗದಲ್ಲಿ ದುಡಿದ ಇವರು ಕಥೆ ಚಿತ್ರಕಥೆ, ಸಂಭಾಷಣೆ ಬರೆದು ‘ಅಪ್ಪಾಜಿ’(Appaji) ಟೈಟಲ್ ಹೊತ್ತು ಹೊಸ ಕಥೆ ಹೇಳಲು ಬಂದಿದ್ದಾರೆ.
ಅಪ್ಪನಾದವನು ಮಕ್ಕಳ ಮೇಲೆ ತೋರಿಸುವ ಪ್ರೀತಿ, ಆತನ ಜವಾಬ್ದಾರಿ ಒಂದ್ಕಡೆಯಾದ್ರೆ, ತನಗಾದ ನೋವು, ಅನ್ಯಾಯಗಳನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರದ ಮೂಲಕ ಭಾವನಾತ್ಮಕವಾಗಿ ಕಟ್ಟಿಕೊಡಲಾಗುತ್ತಿದೆ. ವೃತ್ತಿಯಲ್ಲಿ ವಕೀಲರಾಗಿರುವ ಬಿ.ಚಂದಿರಧರ ಪಿನ್ನೇನಹಳ್ಳಿ-ಹೊನ್ನೇನಹಳ್ಳಿ, ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಸುಚಂದು ನೂಶಿತ ಕ್ರಿಯೇಶನ್ಸ್ ಅಡಿಯಲ್ಲಿ ಚಿತ್ರ್ಕಕೆ ಬಂಡವಾಳ ಕೂಡ ಹೂಡಿದ್ದಾರೆ.
ಕೋರಿಯೋಗ್ರಾಫರ್ ಆಗಿರುವ ಶ್ರೀವೆಂಕಿ ಚಿತ್ರದಲ್ಲಿ ನಾಯಕನಾಗಿ ಬಣ್ಣಹಚ್ಚಿದ್ದು, ಪೂಜಾರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಭವ್ಯ. ನಾಗೇಂದ್ರಅರಸ್, ಮಹೇಶ್ಸಿದ್ದು, ಜಗದೀಶ್ಕೊಪ್ಪ, ಅಭಿಷೇಕ್, ಸುನಿಲ್, ಕರ್ಣ, ಯಶಸ್ ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಕುಶಾಲ್ ರಾಜ್ ಸಂಗೀತ, ಜಿ.ವಿ.ರಮೇಶ್-ಕೇಶವ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.