ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಲಾರ್ ಸಿನಿಮಾ ಇದೇ ಶುಭ ಶುಕ್ರವಾರದಿಂದ ಬೆಳ್ಳಿಭೂಮಿಯಲ್ಲಿ ಅಖಾಡಕ್ಕಿಳಿಯುತ್ತಿದೆ. ಡಾರ್ಲಿಂಗ್ ಪಡೆ ಡೇಂಜರ್ ಡೈನೋಸಾರ್ ಸ್ವಾಗತಕ್ಕೆ ಒಂಟಿಗಾಲಲ್ಲಿ ನಿಂತಿದೆ. ಅದ್ಯಾವಾಗಪ್ಪ ಖಾನ್ಸರ್ ಪ್ರಪಂಚವನ್ನು ಕೆಂಪಾಗಿಸುವ ದೇವನನ್ನು ಕಣ್ತುಂಬಿಕೊಳ್ತೇವೆ ಅಂತಾ ಎಕ್ಸೈಟ್ ಆಗಿದೆ. ಇಂತಹ ಹೊತ್ತಲ್ಲೇ ಸಲಾರ್ ಸೂತ್ರಧಾರ ಪ್ರಶಾಂತ್ ನೀಲ್ ಬಾಹುಬಲಿ ಸೂತ್ರಧಾರ ರಾಜಮೌಳಿ ಎದುರು ಖಾನ್ಸರ್ ಕೋಟೆಯ ರಣರೋಚಕ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ.
ಸಲಾರ್ ಗೂ ಕೆಜಿಎಫ್ ಗೂ ಲಿಂಕ್ ಇದೆ ಎಂಬ ಬಡಾ ಬ್ರೇಕಿಂಗ್ ಸಮಾಚಾರ ರಾಕಿಭಾಯ್ ಹಾಗೂ ಡಾರ್ಲಿಂಗ್ ಭಕ್ತಗಣವನ್ನು ಬೆರಗುಗೊಳಿಸಿತ್ತು. ಈ ವಿಷ್ಯ ಕೇಳಿ ಇಬ್ಬರು ಸೂಪರ್ ಸ್ಟಾರ್ ಫ್ಯಾನ್ಸ್ ಥ್ರಿಲ್ ಆಗಿದ್ದರು. ಪ್ರಭಾಸ್ ಹಾಗೂ ಯಶ್..ಅಬ್ಬಾ! ನೀಲ್ ಬಿರುಗಾಳಿ ಸೃಷ್ಟಿಸೋದು ನಿಜ ಅಂತಾ ದಿಲ್ ಖುಷ್ ಆಗಿದ್ರು. ಆದ್ರೀಗ ಸಲಾರ್ ಸಾರಥಿ ಪ್ರಶಾಂತ್ ನೀಲ್ ಕೆಜಿಎಫ್ ಹಾಗೂ ಸಲಾರ್ ಗೆ ಯಾವುದೇ ಲಿಂಕ್ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ರೀತಿ ಐಡಿಯಾ ಇದ್ದಿದ್ದು ನಿಜವೇ. ಆದ್ರೆ ಅದನ್ನು ಎಕ್ಸಿಬ್ಯೂಟ್ ಮಾಡೋದೇ ಇರೋದಿಕ್ಕೆ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಪ್ರಶಾಂತ್ ನೀಲ್ ಅದ್ಭುತ ಸಿನಿಮಾ ಮೇಕರ್.. ಆದ್ರೆ ಅವರ ಮೇಲೊಂದು ಆರೋಪವಿದೆ. ನೀಲ್ ಎಲ್ಲಾ ಸಿನಿಮಾಗಳಲ್ಲಿ ಧೂಳು, ಕಪ್ಪು ಬಿಳುಪಿ ಆಟವೇ ಹೈಲೆಟ್..ಅದ್ಯಾಕೆ ತಮ್ಮ ಸಿನಿಮಾಗಳು ಡಾರ್ಕ್ ಶೇಡ್ ಆಗಿರಲಿವೆ ಎಂಬುದನ್ನು ಡಿಟೇಲ್ ಆಗಿ ನೀಲ್ ವಿವರಿಸಿದ್ದಾರೆ. ಕೆಜಿಎಫ್ ಹಾಗೂ ಸಲಾರ್ ಒಂದೇ ರೀತಿ ಕಾಣಲು ಕಾರಣ ನನಗಿರುವ ಒಸಿಡಿ ಎಂದಿದ್ದಾರೆ, ನಾನು ಹೆಚ್ಚು ಬಣ್ಣವಿರುವ ಬಟ್ಟೆ ಧರಿಸಲು ಇಷ್ಟಪಡವುದಿಲ್ಲ. ನನ್ನ ವ್ಯಕ್ತಿತ್ವದ ಪ್ರತಿಬಿಂಬವೇ ಪದೆಯ ಮೇಲೆಯೂ ಕಾಣುತ್ತದೆ ಎಂದಿದ್ದಾರೆ.
ಕೆಜಿಎಫ್, ಕಾಂತಾರದಂತಹ ಮೆಗಾ ಹಿಟ್ ಕೊಟ್ಟಿರುವ ಹೊಂಬಾಳೆಯ ಮತ್ತೊಂದು ಮಹಾಯಾಗವೇ ಸಲಾರ್..ಬರೋಬ್ಬರಿ 200 ಕೋಟಿ ಹಣ ಸುರಿದ ನೀಲ್ ಖಾನ್ಸರ್ ಪ್ರಪಂಚವನ್ನು ದುಬಾರಿಯಾಗಿ ಕಟ್ಟಿಕೊಟ್ಟಿದೆ. ಸೌತ್ ದಿಗ್ಗಜ ಸಂಗಮದ ಸಲಾರ್ ಫೀವರ್ ವರ್ಲ್ಡ್ ವೈಡ್ ಜೋರಾಗಿದೆ. ನೀಲ್ ಡಾರ್ಲಿಂಗ್ ಸಿನಿಮಾದ 5 ಲಕ್ಷ 54 ಸಾವಿರದ 200 ಟಿಕೆಟ್ ಬಿಕರಿಯಾಗಿವೆ. ಟಿಕೆಟ್ ಬುಕ್ಕಿಂಗ್ ನಲ್ಲಿ ಕಮಾಲ್ ಮಾಡ್ತಿರುವ ಈ ಚಿತ್ರ ರಿಲೀಸ್ ಗೂ ಮೊದ್ಲೇ ಕೋಟಿ ಕೋಟಿ ಹಣ ಬಾಚಿಕೊಳ್ತಿದೆ.
ಟಾಲಿವುಡ್ ಅಂಗಳದಲ್ಲಿಯೂ ಸಲಾರ್ ಹಂಗಾಮ ಶುರುವಾಗಿದೆ. ಹೈದ್ರಾಬಾದ್ನ ಮೇನ್ ಥಿಯೇಟರ್ ನಲ್ಲಿ ಸಾಗರೋಪಾದಿಯಲ್ಲಿಯೇ ಟಿಕೆಟ್ ಬುಕಿಂಗ್ ಗೆ ಫ್ಯಾನ್ಸ್ ಮುಗಿಬಿದಿದ್ದಾರೆ. ಆ ಒಂದು ವೈಭವವನ್ನ ಕಂಡವ್ರು ಶಾಕ್ ಆಗಬೇಕು. ಡಾರ್ಲಿಂಗ್ ಫ್ಯಾನ್ಸ್ ಮತ್ತು ಸಿನಿಮಾ ಪ್ರೇಮಿಗಳು ಮುಗಿಬಿದ್ದು ಸಲಾರ್ ಟಿಕೆಟ್ ಕೊಂಡುಕೊಂಡಿದ್ದಾರೆ. ಈ ಮಟ್ಟಿಗೆ ಸಲಾರ್’ ಸಿನಿಮಾ ರಿಲೀಸ್ ಗೆ ಮೊದಲೇ ‘ಕ್ರೇಜ್’ ಕಿಚ್ಚು ಹೊತ್ತಿಸಿದೆ. ಇನ್ನು ರಿಲೀಸ್ ಆದ್ಮೇಲೆ ಅದ್ಯಾವಾಗ ದಾಖಲೆಗಳನ್ನು ಉಡೀಸ್ ಮಾಡುತ್ತೋ ಕಾದು ನೋಡ್ಬೇಕು..