Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಗೆಸ್ಟ್ ಅಪಿಯರೆನ್ಸ್‌ನಲ್ಲಿ ಕಾಣಿಸಿಕೊಂಡ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ʻಲಾಲ್ ಸಲಾಮ್ʼ(Lal Salaam). ಪುತ್ರಿ ಐಶ್ವರ್ಯ ರಜನೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಫೆಬ್ರವರಿಯಲ್ಲಿ ಈ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ತೆರೆಗೆ ಬಂದಿತ್ತು. ಆದ್ರೆ ಆ ನಿರೀಕ್ಷೆಯೆಲ್ಲ ಬುಡಮೇಲು ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ʻಲಾಲ್ ಸಲಾಮ್ʼ ಹೀನಾಯ ಸೋಲನ್ನು ಅನುಭವಿಸಿತ್ತು.
ʻಜೈಲರ್ʼ(Jailer) ಸಿನಿಮಾ ಮೂಲಕ ಸೂಪರ್ ಡೂಪರ್ ಸಕ್ಸಸ್ ಕಂಡು ಗ್ರ್ಯಾಂಡ್ ಕಂಬ್ಯಾಕ್ ಮಾಡಿದ್ದರು ತಲೈವಾ. ಜೈಲರ್ ಸಾವಿರ ಕೋಟಿ ಕ್ಲಬ್ ಸೇರಿ ರಜನಿಕಾಂತ್(Rajinikanth) ಸಕ್ಸಸ್ ಅಲೆಯಲ್ಲಿದ್ದರು. ಅವ್ರ ಅಭಿಮಾನಿಗಳು ಈ ಸಕ್ಸಸ್ ಎಂಜಾಯ್ ಮಾಡಿದ್ದರು. ಅದರ ನಂತರ ತೆರೆಗೆ ಬಂದ ʻಲಾಲ್ ಸಲಾಮ್ (Lal Salaam) ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಹೀನಾಯ ಸೋಲನ್ನು ಕಂಡಿತ್ತು. ಚಿತ್ರ ಮಂದಿರದಿಂದ ಬೆರಳೆಣಿಕೆ ದಿನಗಳಲ್ಲಿ ಎತ್ತಂಗಡಿಯಾದ ಈ ಸಿನಿಮಾ ಇದೀಗ ಓಟಿಟಿ ರಿಲೀಸ್‌ಗೂ ಲಾಯಕ್ಕಿಲ್ಲ ಎನ್ನಲಾಗ್ತಿದೆ.
ಲಾಲ್ ಸಲಾಮ್(Lal Salaam) ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಖರೀದಿಸಿತ್ತು. ಚಿತ್ರಮಂದಿರಲ್ಲಿ ಹೀನಾಯ ಸೋಲನ್ನು ಕಂಡು, ಕಲೆಕ್ಷನ್ ಕಾಣದ ಈ ಚಿತ್ರವನ್ನು ಓಟಿಯಲ್ಲಿ ರಿಲೀಸ್ ಮಾಡಲು ನೆಟ್‌ಫಿಕ್ಸ್ ಕೂಡ ಹಿಂದೇಟು ಹಾಕುತ್ತಿದೆ ಎನ್ನಲಾಗ್ತಿದೆ. ಮಾರ್ಚ್ 8ರಂದೇ ಲಾಲ್ ಸಲಾಮ್ ತೆರೆ ಕಾಣಬೇಕಿತ್ತು ಆದ್ರೆ ಇನ್ನೂ ತೆರೆ ಕಂಡಿಲ್ಲ. ಮೂಲಗಳ ಪ್ರಕಾರ ನೆಟ್ ಫ್ಲಿಕ್ಸ್ ʻಲಾಲ್ ಸಲಾಮ್ʼ ಒಪ್ಪಂದವನ್ನು ಕ್ಯಾನ್ಸಲ್ ಮಾಡಿದೆ. ಇದೀಗ ಏಪ್ರಿಲ್ 12ರಿಂದ ಸನ್ ನೆಕ್ಸ್ಟ್ ನಲ್ಲಿ ತೆರೆಕಾಣಲಿದೆ ಎನ್ನುವ ಸುದ್ದಿಗಳು ಕಾಲಿವುಡ್‌ನಲ್ಲಿ ಹರಿದಾಡ್ತಿದೆ. ಸೂಪರ್ ಸ್ಟಾರ್ ಸಿನಿಮಾ ಈ ರೀತಿಯ ಡಿಸಾಸ್ಟರ್ ಕಂಡಿದ್ದು ಇದೇ ಮೊದಲು ಎನ್ನುತ್ತಿದ್ದಾರೆ ಕಾಲಿವುಡ್ ಸಿನಿಮಂದಿ.