ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Marigold: ಮಾಮೂಲಿ ಕಥೆಗೆ ಹೊಸತನದ ಸ್ಪರ್ಶ ತುರ್ತಾಗಿ ಬೇಕಿದೆ – ‘ಮಾರಿಗೋಲ್ಡ್‌’ನಲ್ಲಿ ಹೆಚ್ಚೇನಿಲ್ಲ ಸೊಗಸು

Bharathi Javalliby Bharathi Javalli
08/04/2024
in Majja Special
Reading Time: 1 min read
Marigold: ಮಾಮೂಲಿ ಕಥೆಗೆ ಹೊಸತನದ ಸ್ಪರ್ಶ ತುರ್ತಾಗಿ ಬೇಕಿದೆ – ‘ಮಾರಿಗೋಲ್ಡ್‌’ನಲ್ಲಿ ಹೆಚ್ಚೇನಿಲ್ಲ ಸೊಗಸು

ಸಿನಿಮಾ: ಮಾರಿ ಗೋಲ್ಡ್‌

ನಿರ್ದೇಶನ: ರಾಘವೇಂದ್ರ ಎಂ ನಾಯಕ್

ನಿರ್ಮಾಣ:‌ ರಘುವರ್ಧನ್

ತಾರಾಬಳಗ: ದಿಗಂತ್‌, ಸಂಗೀತಾ ಶೃಂಗೇರಿ, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ.

ರಾಘವೇಂದ್ರ ಎಂ ನಾಯಕ್‌ ಸಾರಥ್ಯದಲ್ಲಿ ದಿಗಂತ್‌(Diganth), ಸಂಗೀತಾ ಶೃಂಗೇರಿ(Sangeetha Sringeri) ಮುಖ್ಯ ಭೂಮಿಕೆಯ ‘ಮಾರಿಗೋಲ್ಡ್‌’(Marigold) ಸಿನಿಮಾ ಬಿಡುಗಡೆಯಾಗಿದೆ. ಚಿತ್ರದ ವಿಮರ್ಶೆ ಇಲ್ಲಿದೆ.

ಕಥೆ:

ಹಣ ಸಂಪಾದಿಸಬೇಕು, ಶ್ರೀಮಂತನಾಗಬೇಕು, ಅದಕ್ಕೆ ಯಾವ ದಾರಿಯಾದರೂ ಸರಿಯೇ ಒಟ್ನಲ್ಲಿ ದುಡ್ಡು ಮಾಡಬೇಕು ಎನ್ನುವುದು ನಾಯಕನ ಪಾಲಿಸಿ. ಅವನೊಂದಿಗೆ ಸೇರಿಕೊಂಡ ಗೆಳೆಯರ ಗ್ಯಾಂಗ್‌. ನಾಲ್ವರೂ ಸೇರಿ  ದೊಡ್ಡ ಡೀಲ್‌ಗೆ ಕೈ ಹಾಕುತ್ತಾರೆ. ಅವರ ಡೀಲ್‌ ವರ್ಕೌಟ್‌ ಆಗುತ್ತಾ..? .ಕಂಡ ಕನಸು ನಿಜವಾಗಿ ಶ್ರೀಮಂತ ಬದುಕು ಅವರದ್ದಾಗುತ್ತಾ..? ಎನ್ನುವುದರ ಸುತ್ತ ಹೆಣೆದ ಸ್ಟೋರಿ ಮಾರಿಗೋಲ್ಡ್(Marigold).‌

ನಿರ್ದೇಶನ:

ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಯನ್ನು ಸಿನಿಮಾವಾಗಿಸುವ ಪ್ರಯತ್ನಕ್ಕೆ ಬಿದ್ದ ರಾಘವೇಂದ್ರ(Raghavendra M Naik) ಅವರು ಚಿತ್ರಕಥೆಯತ್ತ ಗಮನಹರಿಸಿದ್ದರೆ ಆ ಪ್ರಯತ್ನ ಯಶಸ್ವಿಯಾಗುತ್ತಿತ್ತು. ಕೆಲ ಡೈಲಾಗ್‌ಗಳು ಇದು ಬೇಕಿತ್ತಾ ಅನ್ನೋವಷ್ಟು ಬೇಸರವನ್ನೂ ತರಿಸುತ್ತೆ. ಹಾಡುಗಳ ಬಗ್ಗೆಯೂ ಇನ್ನಷ್ಟು ಹೋಂ ವರ್ಕ್‌ ಮಾಡಬೇಕಿತ್ತು. ಅದೇ ಓಲ್ಡ್‌ ಸ್ಟೋರಿ ಆಯ್ಕೆ ಮಾಡಿಕೊಂಡ ನಿರ್ದೇಶಕರು ರಸವತ್ತಾಗಿ, ಥ್ರಿಲ್ಲಿಂಗ್‌ ಆಗಿ ಕಟ್ಟಿಕೊಡುವಲ್ಲಿ ಕೆಲಸ ಮಾಡಿದ್ರೆ ‘ಮಾರಿಗೋಲ್ಡ್‌’ ಹೆಸರಿನಷ್ಟೇ ಶ್ರೀಮಂತ್ರವಾಗುತ್ತಿತ್ತು.

ಕಲಾವಿದರ ಅಭಿನಯ:

ಒಂದೇ ರೀತಿಯ ನಟನೆಗೆ ಒಗ್ಗಿಕೊಂಡಿದ್ದ ದಿಗಂತ್‌(Diganth), ಈ ಚಿತ್ರದಲ್ಲಿ ನಟನೆ, ಮ್ಯಾನರಿಸಂ ಮೂಲಕ ಇಷ್ಟವಾಗುತ್ತಾರೆ. ಹೊಸ ಇಮೇಜ್‌ನತ್ತ ಹೊರಳುತ್ತಿರುವುದು ಅರಿವಿಗೆ ಬರುತ್ತೆ. ಸಂಗೀತಾ ಶೃಂಗೇರಿ(Sangeetha Sringeri) ಅಭಿನಯವೂ ಗಮನ ಸೆಳೆಯುತ್ತದೆ. ಯಶ್ ಶೆಟ್ಟಿ‌, ಕಾಕ್ರೋಚ್‌ ಸುಧಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸಂಪತ್‌ ಕುಮಾರ್‌ ಕೂಡ ಎಂದಿನಂತೆ ತಮ್ಮ ಅದ್ಭುತ ಅಭಿನಯದ ಮೂಲಕ ಇಷ್ಟವಾಗುತ್ತಾರೆ.

ಸಿನಿಮಾ ಹೇಗಿದೆ:

ಸಸ್ಪೆನ್ಸ್‌, ಥ್ರಿಲ್ಲರ್‌ ಎಂದ ಮಾತ್ರಕ್ಕೆ ಸೀಟಿನ ತುದಿಯಲ್ಲಿ ಕೂತು ನೋಡುವಷ್ಟು ಕೌತುಕ ಜಗತ್ತು ಮಾರಿಗೋಲ್ಡ್‌(Marigold) ಒಳಗಿಲ್ಲ. ಸಿನಿಮಾ ನಿರೂಪಣೆಯತ್ತ ಇನ್ನಷು ಹೋವರ್ಕ್‌ ಮಾಡಿ, ಒಂದಿಷ್ಟು ಕೆಟ್ಟ ಸಂಭಾಷಣೆಗೆ ಬ್ರೇಕ್‌ ಹಾಕಬೇಕಿತ್ತು. ಮಾಮೂಲಿ ಸ್ಟೋರಿ ಆಯ್ಕೆ ಮಾಡಿಕೊಂಡ ನಿರ್ದೇಶಕರು ರಸವತ್ತಾಗಿ ತೋರಿಸುವ ಪ್ರಯತ್ನದಲ್ಲಿ ಸೋತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Bharjari Gandu: ಹಳೆಯ ಸರಕಿನೊಂದಿಗೆ ಬಂದ ʼಭರ್ಜರಿ ಗಂಡುʼ ತೆರೆಮೇಲೆ ಶೈನ್‌ ಆಗೋದು ಕಷ್ಟ

Bharjari Gandu: ಹಳೆಯ ಸರಕಿನೊಂದಿಗೆ ಬಂದ ʼಭರ್ಜರಿ ಗಂಡುʼ ತೆರೆಮೇಲೆ ಶೈನ್‌ ಆಗೋದು ಕಷ್ಟ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.