ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶೋ ನೋಡಿದವರು, ಯಾರನ್ನು ನೆನಪಿನಲ್ಲಿಟ್ಟು ಕೊಳ್ತಾರೋ ಇಲ್ವೋ ಆದ್ರೆ ಹಾಸ್ಯನಟ ಸುನಿಲ್ ಗ್ರೋವರ್ರನ್ನ ಮಾತ್ರ ಮರೆಯೋದಿಲ್ಲ. ಯಾಕಂದ್ರೆ ಅಷ್ಟು ನಕ್ಕು ನಗಿಸಿ ನಮ್ಮ ಮನಸಲ್ಲಿ ಸುನೀಲ್ ಅಚ್ಚಾಗಿ ಉಳಿದಿದ್ದಾರೆ. ಟಿವಿ, ಲೈವ್ ಶೋಗಳ ಮೂಲಕ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುನೀಲ್ ಇಂದು ಸಾಕಷ್ಟು ಅಭಿಮಾನಿಗಳ ಜೊತೆ ಕೋಟಿ ಒಡೆಯನಾಗಿದ್ದಾರೆ.
ಕಿರುತೆರೆಗೆ ಬರುವ ಮುನ್ನ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಸುನೀಲ್ ಗ್ರೋವರ್, ರೇಡಿಯೋದಲ್ಲಿ ಜೋಕುಗಳನ್ನು ಹೇಳುವ ಮೂಲಕ ನಕ್ಕು ನಗಿಸ್ತಾ ಇದ್ರು. ಅವರ ಈ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಹಾಸ್ಯನಟ ಜಸ್ಪಾಲ್ ಭಟ್ಟಿ ಎನ್ನುತ್ತಾರೆ ಸುನಿಲ್ ಗ್ರೋವರ್.ಸುನಿಲ್ ತಮ್ಮ ಗುತ್ತಿ ಪಾತ್ರಕ್ಕೆ ಸಖತ್ ಫೇಮಸ್ ಅವರ ಕಾಲೇಜಿನ ಸಹಪಾಠಿಯಿಂದ ಈ ಪಾತ್ರಕ್ಕೆ ಸ್ಫೂರ್ತಿ ಸಿಕ್ಕಿದ್ದಂತೆ. ಗುತ್ತಿ ಜೊತೆ ಡಾ.ಗುಲಾಟಿ, ರಿಂಕು ಭಾಬಿ ಪಾತ್ರ ಮಾಡಿದ್ದ ಸುನೀಲ್ ಗ್ರೋವರ್ ಮುಂಬೈಗೆ ಬಂದಾಗ, ತಿಂಗಳಿಗೆ ಕೇವಲ 500 ರೂಪಾಯಿ ಸಂಪಾದನೆ ಮಾತ್ರ ಇತ್ತಂತೆ.ಆದ್ರೆ ಇಂದು ಈ ಕಾಮಿಡಿಯನ್ ಕೋಟಿಗಟ್ಟಲೆ ಆಸ್ತಿಯ ಮಾಲೀಕರಾಗಿದ್ದಾರಂತೆ. ವರದಿಗಳ ಪ್ರಕಾರ, ಅವರು ಸುಮಾರು 22 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಮುಂಬೈನಲ್ಲಿ ಅಂದಾಜು ಸುಮಾರು 2.5 ಕೋಟಿ ರೂ.ಬೆಲೆಬಾಳುವ ಸ್ವಂತ ಬಂಗಲೆ,ಐಷಾರಾಮಿ ಕಾರುಗಳನ್ನ ಹೊಂದಿದ್ದಾರೆ ಎನ್ನಲಾಗುತ್ತೆ.
ಮೊದಲು ೫೦೦ ರೂ ಇಂದ ಶುರುವಾದ ಇವರ ಸಂಪಾದನೆ ಇಂದು ವಾರ್ಷಿಕ ಆದಾಯ 3 ಕೋಟಿಗೂ ಹೆಚ್ಚಿದೆಯಂತೆ. ಒಂದು ಸಂಚಿಕೆಯಲ್ಲಿ ಕೆಲಸ ಮಾಡಲು 10 ರಿಂದ 15 ಲಕ್ಷ ರೂ ಚಾರ್ಜ್ ಮಾಡುವ ಸುನೀಲ್ . ಅದೇ ಸಮಯದಲ್ಲಿ, ಒಂದು ಚಿತ್ರಕ್ಕೆ ಅವರ ಸಂಭಾವನೆ ಸುಮಾರು 50 ರಿಂದ 60 ಲಕ್ಷ ರೂಪಾಯಿಗಳು ಪಡೆಯುತ್ತಾರೆ ಎನ್ನುತ್ತವೆ ಕೆಲವು ವರದಿಗಳು.
ಸುನಿಲ್ ಗ್ರೋವರ್ ಟಿವಿ ಶೋಗಳ ಜೊತೆಗೆ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡಿದ್ದು, ಅಜಯ್ ದೇವಗನ್ ಅವರ ಪ್ಯಾರ್ ತೋ ಹೋನಾ ಹಿ ಥಾ' ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ
ಗಬ್ಬರ್ ಈಸ್ ಬ್ಯಾಕ್’, `ಹೀರೋಪಂತಿ’, `ಬಾಘಿ’ ಮತ್ತು ಭಾರತ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ . ಸಧ್ಯ ಚಿತ್ರ ಶಾರುಖ್ ಖಾನ್
`ಜವಾನ್ ‘ಚಿತ್ರದಲ್ಲಿ ನಟಿಸಿದ್ದಾರೆ. ಹೀಗೆ ತಿಂಗಳಿಗೆ ೫೦೦ ರೂ ಸಂಪಾದಿಸುತ್ತಿದ್ದ ಹಾಸ್ಯ ನಟನೊಬ್ಬ ಇಂದು ಕೋಟಿ ಒಡೆಯನಾಗಿ,ಸಾಲು ಸಾಲು ಆಫರ್ಸ್ ನಲ್ಲಿ ಬ್ಯುಸಿ ಆಗಿರೋದು ಸ್ಪೂರ್ತಿದಾಯಕವೆಂದು ಅವರ ಅಭಿಮಾನಿಗಳಿಗೆ ಅನ್ನಿಸಿದ್ರೆ, ಹಾಸ್ಯ ನಟನಿಗೆ ಇಷ್ಟು ಸಂಪಾದನೆಯಾ ಅಂತ ಮೂಗು ಮುರಿಯುವವರು ಇದ್ದಾರೆ.