ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದು ನಿಂತ್ರೂ ಕೂಡ ಸರಳತೆಯ ವಿಚಾರದಲ್ಲಿ ಸಾಕಾರ ಮೂರ್ತಿ ಅನ್ನೋದನ್ನ ಆಗಾಗ ಸಾಬೀತುಪಡಿಸುತ್ತಲೇ ಇರ್ತಾರೆ. ಇದೀಗ ಮತ್ತೊಮ್ಮೆ ತಾವೆಷ್ಟು ಸಿಂಪಲ್ ಅನ್ನೋದನ್ನ ಪ್ರೂ ಮಾಡಿದ್ದಾರೆ. ಹೌದು, ಫ್ಯಾಮಿಲಿ ಜೊತೆ ಭಟ್ಕಳದ ಚಿತ್ರಾಪುರಕ್ಕೆ ಭೇಟಿ ನೀಡಿರುವ ರಾಕಿಭಾಯ್ ಕಿರಾಣಿ ಅಂಗಡಿಯಲ್ಲಿ ಮಕ್ಕಳಿಗೆ ತಿಂಡಿ-ತಿನಿಸು ಕೊಡಿಸಿದ್ದಾರೆ. ಈ ವೇಳೆ, ರಾಧಿಕಾ ಪಂಡಿತ್ ಐಸ್ಕ್ಯಾಂಡಿ ಸವಿಯುತ್ತಾ ಕಟ್ಟೆ ಮೇಲೆ ಕುಳಿತಿದ್ದಾರೆ. ಸದ್ಯ, ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿ ಕುಳಿತಿದ್ರೂ ಕೂಡ ಸರಳತೆಯಲ್ಲಿ ಸಾಕಾರ ಮೂರ್ತಿಯಾಗಿರೋ ಮಾನ್ಸ್ಟಾರ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಅಂದ್ಹಾಗೇ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ಇರುವ ಮಠ ತುಂಬಾ ಪ್ರಸಿದ್ಧವಾಗಿದ್ದು, ದೂರದೂರುಗಳಿಂದಲೂ ಭಕ್ತರು ಬರುತ್ತಾರೆ. ಯಶ್ ಅವರು ಚಿತ್ರಾಪುರ ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಲು ನಿನ್ನೆಯಷ್ಟೇ ಚಿತ್ರಾಪುರಕ್ಕೆ ಆಗಮಿಸಿದ್ದರು. ಈ ವೇಳೆ ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಸೇರಿದ್ದರಿಂದ ಅವ್ರನ್ನ ನಿಯಂತ್ರಿಸೋಕೆ ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿತ್ತು.
ಸದ್ಯ ರಾಕಿಭಾಯ್ ʻಟಾಕ್ಸಿಕ್ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಎದುರುನೋಡ್ತಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಚಿತ್ರಕ್ಕಿದ್ದು, ಇತ್ತೀಚೆಗಷ್ಟೇ ಯಶ್ ಭಾಯ್ ಮಾತನಾಡಿದ್ದರು. ‘ಟಾಕ್ಸಿಕ್’ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡ್ತೇವೆ. ಅಂದ್ಹಾಗೇ, ಟಾಕ್ಸಿಕ್ ಚಿತ್ರದಲ್ಲಿ ಕಿಂಗ್ ಖಾನ್ ಶಾರುಖ್ ನಟಿಸ್ತಾರೆನ್ನುವ ಸುದ್ದಿ ಸುಳ್ಳು. ಹಾಗೇನಾದ್ರೂ ಇದ್ದರೆ ನಾವೇ ತಿಳಿಸ್ತೇವೆ ಎಂದಿದ್ದರು.