ಸ್ಟಾರ್ ನಟ-ನಟಿಯರ ಅಭಿಮಾನಿಗಳಿಗೆ ಸಹಜವಾಗಿ ಒಂದಿಷ್ಟು ಕುತೂಹಲಗಳು ಇರುತ್ವೆ. ತಮ್ಮ ನೆಚ್ಚಿನ ತಾರೆಯರ ದಿನಚರಿ ಹೇಗಿರುತ್ತೆ? ಯಾವೆಲ್ಲಾ ಹವ್ಯಾಸಗಳನ್ನ ಅವರು ಮೈಗೂಡಿಸಿಕೊಂಡಿರ್ತಾರೆ. ಬೆಳಗ್ಗೆ ಬ್ರೇಕ್ ಫಾಸ್ಟ್‍ನಿಂದ ಸಂಜೆ ಡಿನ್ನರ್ ತನಕ ಏನೆಲ್ಲಾ ತಿಂತಾರೆ? ಆರೋಗ್ಯವನ್ನ ಕಾಪಾಡಿಕೊಳ್ಳಲಿಕ್ಕೆ ಏನೆನೆಲ್ಲಾ ಮಾಡ್ತಾರೆ. ಸಿನಿಮಾಗಳಲ್ಲಿ ಯಾವ್ ರೀತಿಯಾಗಿ ತೊಡಗಿಸಿಕೊಳ್ತಾರೆ, ಪ್ರತಿ ದಿನ ಶೂಟಿಂಗ್ ಸೆಟ್‍ಗೆ ಹೋಗುವಾಗ ಯಾವ್ ರೀತಿ ತಯ್ಯಾರಾಗಿ ಹೋಗ್ತಾರೆ. ಹೀಗೆ ಒಂದಿಷ್ಟು ಪ್ರಶ್ನೆಗಳು ಅಭಿಮಾನಿಗಳನ್ನ ಕಾಡೋದು ಸಹಜ. ಆ ಪ್ರಶ್ನೆಗಳಿಗೆ ಕೆಲ ಸ್ಟಾರ್ ಗಳು ಉತ್ತರ ಕೊಡುವ ಪ್ರಯತ್ನವನ್ನ ಮಾಡಿದ್ದಾರೆ, ಮಾಡ್ತಿದ್ದಾರೆ. ಈಗ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪ್ರತಿದಿನ ತನ್ನ ದಿನಚರಿ ಹೇಗಿರುತ್ತೆ ಅನ್ನೋದನ್ನ ವಿಡಿಯೋ ಮೂಲಕವೇ ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಮೊದಲಿಗೆ ಅಲ್ಲು ಅರ್ಜುನ್ ತಮ್ಮ ಮನೆಯನ್ನು ತೋರಿಸಿದ್ದಾರೆ. ಮುಂಜಾನೆ ಎದ್ದ ತಕ್ಷಣ ಅವರು ಗಾರ್ಡನ್ಗೆ ಬರುತ್ತಾರೆ. ಬಂದು ಕೆಲ ಸಮಯ ಅಲ್ಲಿ ಕಳೆಯುತ್ತಾರೆ. ಆ ಬಳಿಕ ಕಾಫಿ ಕುಡಿಯುತ್ತಾರೆ, ತಿಂಡಿ ತಿನ್ನುತ್ತಾರೆ. ನಂತರ ಶೂಟಿಂಗ್ ಗೆ ತೆರಳುತ್ತಾರೆ. ಸೆಟ್ ತಲುಪುತ್ತಿದ್ದಂತೆ ನೂರಾರು ಅಭಿಮಾನಿಗಳು ನಟನಿಗಾಗಿ ಕಾಯುತ್ತಿರುತ್ತಾರೆ. ಹೀಗಾಗಿ,ಸ್ವಲ್ಪ ಸಮಯ ಅವರೊಂದಿಗೆ ಸಮಯ ಕಳೆಯುತ್ತಾರೆ. ಚಿತ್ರೀಕರಣಕ್ಕೆ ರೆಡಿ ಆಗಲು ತಮ್ಮ ವ್ಯಾನಿಟಿ ವ್ಯಾನ್‌ಗೆ ಹೋಗುತ್ತಾರೆ. ಕಾಸ್ಟೂಮ್‌ಗಳನ್ನು ಹಾಕಿಕೊಂಡು. ಮೇಕಪ್ ಹಾಕಿಕೊಂಡು ಸೆಟ್‌ಗೆ ಹೋಗುತ್ತಾರೆ. ಅಲ್ಲಿ ಸುಕುಮಾರ್ ಅವರ ಭೇಟಿ ಆಗುತ್ತದೆ. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಪರಸ್ಪರ ಮಾತುಕತೆ ನಡೆಸುತ್ತಾರೆ. ಮಧ್ಯಾಹ್ನ 1 ಗಂಟೆಗೆ ಕುಟುಂಬದವರ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ. ಈ ರೀತಿಯಲ್ಲಿ ಅಲ್ಲು ಅರ್ಜುನ್ ದಿನಚರಿ ಇರುತ್ತದೆ.\
ಈ ವಿಡಿಯೊವನ್ನು ಅಲ್ಲು ಅರ್ಜುನ್ ತಮ್ಮ ಇನ್‌ಸ್ಟಾದಲ್ಲಿ ಆಗಸ್ಟ್ 30 ರ ಬುಧವಾರ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್‍ನಲ್ಲಿ ಅಲ್ಲುನಾ ಫಾಲೋ ಮಾಡುವವರ ಸಂಖ್ಯೆ 20 ಮಿಲಿಯನ್ ದಾಟಿದೆ. ಅವರಿಗೋಸ್ಕರ ಹಂಚಿಕೊಂಡ ದಿನಚರಿಯ ವಿಡಿಯೋ ಬರೀ 4 ಗಂಟೆಯಲ್ಲಿ 10 ಮಿಲಿಯನ್ ವೀವ್ಸ್ ಪಡೆದಿದೆ. 2 ಮಿಲಿಯನ್ ಲೈಕ್ಸ್ ಬಂದಿದ್ದು, ಲಕ್ಷ ಲಕ್ಷ ಕಮೆಂಟ್‍ಗಳು ಹರಿದು ಬರುತ್ತಿವೆ.
https://www.instagram.com/p/CwjcwvwSlxO/?hl=en
ಅಷ್ಟಕ್ಕೂ, ಅಲ್ಲು ಅರ್ಜುನ್ ಈಗ ಬರೀ ಸೌತ್ ಸೂಪರ್ ಸ್ಟಾರ್ ಅಲ್ಲ ಬದಲಾಗಿ ನ್ಯಾಷನಲ್ ಸ್ಟಾರ್. ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿ ಕುಳಿತ ಪುಷ್ಪರಾಜ್, ನ್ಯಾಷನಲ್ ಮಾತ್ರವಲ್ಲ ಇಂಟರ್ ನ್ಯಾಷನಲ್ ಲೆವೆಲ್‍ನಲ್ಲೂ ಖ್ಯಾತಿ ಗಳಿಸಿಕೊಂಡಿದ್ದಾರೆ. ವಲ್ಡ್ ವೈಡ್ ತುಂಬೆಲ್ಲಾ ಹೊಸದೊಂದು ಕ್ರೇಜ್ ಸೃಷ್ಟಿಸಿರೋ ಬನ್ನಿ, ದೇಶದ ಮೂಲೆಮೂಲೆಯಲ್ಲೂ ಅಭಿಮಾನಿ ಬಳಗವನ್ನ ಸಂಪಾದನೆ ಮಾಡಿದ್ದಾರೆ. ಹೀಗಾಗಿ ಅವರೆಲ್ಲರೂ ಪುಷ್ಪ-2 ಆಗಮನಕ್ಕಾಗಿ ಎದುರುನೋಡ್ತಿದ್ದಾರೆ. ಇತ್ತೀಚೆಗಷ್ಟೇ ಪುಷ್ಪ ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್‍ಗೆ ನ್ಯಾಷನಲ್ ಅವಾರ್ಡ್ ಬಂದಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿರೋ ಅಲ್ಲು ಮೇಲೆ ಜವಬ್ದಾರಿಯೂ ಹೆಚ್ಚಿದ್ದು, ಪುಷ್ಪ-2 ಮೇಲೆ ನಿರೀಕ್ಷೆ ಜಾಸ್ತಿನೆಯಿದೆ.
ಏಪ್ರಿಲ್‌ನಲ್ಲಿ ಪುಷ್ಪ 2 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಚಿತ್ರತಂಡ ಹಂಚಿಕೊಂಡಿತ್ತು. ಮೂಲಗಳ ಪ್ರಕಾರ ಸಿನಿಮಾದ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳು ಹಾಗೂ ಫೈಟ್ ಚಿತ್ರೀಕರಣದಲ್ಲಿ ಫಿಲ್ಮ್‍ಟೀಮ್ ತೊಡಗಿಸಿಕೊಂಡಿದೆ. ಇದೇ ಕಾರಣಕ್ಕೆ ರಾಮೋಜಿ ರಾವ್ ಫಿಲ್ಮ್ಂ ಸಿಟಿಯಲ್ಲಿ ಸೆಟ್‌ಗಳನ್ನು ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ.ಇನ್ನೂ ಎರಡನೇ ಹಂತದ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಅವರುಗಳ ಜತೆಗೆ ಡಾಲಿ ಧನಂಜಯ್ ಸಹ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಮೋಜಿ ರಾವ್ ಫಿಲ್ಮ್ಂ ಸಿಟಿಯಲ್ಲಿ ಚಿತ್ರೀಕರಣ ಮುಗಿದ ಬಳಿಕ ಹೊರಾಂಗಣದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಮಾಡಲಿದೆ. ಆ ನಂತರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭವಾಗಲಿದೆ. ಪುಷ್ಪ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.