Ravi Basrur: ಕೆಜಿಎಫ್ ಸಿನಿಮಾ ಮೂಲಕ ಭಾರತದಾದ್ಯಂತ ಖ್ಯಾತಿ ಗಳಿಸಿದವರು ಸಂಗೀತ ನಿರ್ದೇಶಕ ರವಿ ಬಸ್ರೂರು. ಯಶ್(Yash), ಪ್ರಶಾಂತ್ ನೀಲ್(Prashanth Neel) ರಷ್ಟೇ ಪ್ರಖ್ಯಾತಿ, ಕ್ರೇಜ಼್ ಇವರಿಗೂ ಸಿಕ್ಕಿತ್ತು. ಕೆಜಿಎಫ್ ಸೀಕ್ವೆಲ್, ಸಲಾರ್, ಕಬ್ಜ ಸಿನಿಮಾ ನಂತರ ಸ್ಯಾಂಡಲ್ ವುಡ್ ಮಾತ್ರವಲ್ಲ ಬೇರೆ ಇಂಡಸ್ಟ್ರಿಯವರು ಇವರ ಸಂಗೀತ ನಿರ್ದೇಶನಬೇಕೆಂದು ಕ್ಯೂ ನಿಂತಿದ್ದಾರೆ. ಹೀಗಿರುವಾಗ ಇಂಟ್ರಸ್ಟಿಂಗ್ ಸಂಗತಿಯನ್ನು ರವಿ ಬಸ್ರೂರ್ ರಿವೀಲ್ ಮಾಡಿದ್ದಾರೆ.
ಸ್ಯಾಂಡಲ್ ವುಡ್, ಟಿಟೌನ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ನಟ, ನಿರ್ದೇಶಕರು ರವಿ ಬಸ್ರೂರು(Ravi Basrur) ಸಂಗೀತ ನಿರ್ದೇಶನಬೇಕೆಂದು ದುಂಬಾಲು ಬೀಳ್ತಿದ್ದಾರೆ. ಸಖತ್ ಬ್ಯುಸಿಯಾಗಿರುವ ರವಿ ಬಸ್ರೂರು ಸಂದರ್ಶನವೊಂದರಲ್ಲಿ ಬಾಲಿವುಡ್ ಮಂದಿ ಆರಂಭದಲ್ಲಿ ಇವರ ಸಂಗೀತಕ್ಕೆ ಮಾಡುತ್ತಿದ್ದ ಗೇಲಿಯನ್ನು ಮೆಲುಕು ಹಾಕಿದ್ದಾರೆ. ಆರಂಭದಲ್ಲಿ ಹಿಂದಿ ಉದ್ಯಮದವರು ನನ್ನ ಸಂಗೀತ ಕೇಳಿ ನಿಮ್ಮದು ಜಂಗ್ ಚಕರೆ ಚಕರೆ ಮ್ಯೂಸಿಕ್ ಎಂದು ಅಣಕಿಸುತ್ತಿದ್ದರು ಎಂದಿದ್ದಾರೆ. ಆ ನಂತರದ ದಿನಗಳಲ್ಲಿ ಅವರೆ ಉದ್ಯಮದವರೇ ಹಲವು ಸಿನಿಮಾಗಳಿಗೆ ನನ್ನನ್ನು ಸಂಗೀತ ನಿರ್ದೇಶನಕ್ಕೆ ಕರೆದರು ಎಂದಿದ್ದಾರೆ.
ಸಲ್ಮಾನ್ ಖಾನ್(Salman Khan) ನಟನೆಯ ಅಂತಿಮ್, ಅಜಯ್ ದೇವಗನ್(Ajay Devgan) ನಟನೆಯ ಭೋಲಾ ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಈಗಲೂ ಬಿಟೌನ್ ಅಂಗಳದಿಂದ ಸಾಲು ಸಾಲು ಆಫರ್‌ಗಳು ಬರ್ತಿವೆ. ಹೀಗೆ ಆರಂಭದ ದಿನಗಳನ್ನು ತಮ್ಮ ಸಂಗೀತವನ್ನು ದೂರಿದವರೇ ಇಂದು ತಮ್ಮನ್ನು ಸಿನಿಮಾಗಾಗಿ ಸಂಪರ್ಕಿಸುತ್ತಿದ್ದಾರೆ ಎಂದು ಹಳೆಯ ದಿನಗಳನ್ನು ನೆನೆದಿದ್ದಾರೆ.