ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

tigers story: ಹೆದರಿಸೋ ಹುಲಿಗಳ ಇಂಟರೆಸ್ಟಿಂಗ್ ವಿಷಯ!

Majja Webdeskby Majja Webdesk
10/02/2025
in Majja Special
Reading Time: 1 min read
tigers story: ಹೆದರಿಸೋ ಹುಲಿಗಳ ಇಂಟರೆಸ್ಟಿಂಗ್ ವಿಷಯ!

-ಹುಲಿಗಳೇಗೆ ನಾಡಿಗೆ ನುಗ್ಗುತ್ತವೆ ಗೊತ್ತಾ?

-ಅವುಗಳ ಜೀವನ ಕ್ರಮ ಕಂಡ್ರೆ ಅಚ್ಚರಿಯಾಗುತ್ತೆ!

 

ಈಗಂತೂ ದೇಶದ ನಾನಾ ಭಾಗಗಳಲ್ಲಿ ಮತ್ತು ನಮ್ಮದೇ ಕರ್ನಾಟಕದಲ್ಲಿ ಚಿರತೆ ಹಾವಳಿ ವಿಪರಿತಕ್ಕಿಟ್ಟುಕೊಂಡಿದೆ. ಒಮ್ಮೊಮ್ಮೆ ಅವು ರೊಚ್ಚಿಗೆದ್ದು ನರ ಬಲಿ ಪಡೆಯೋದೂ ಇದೆ. ಅರಣ್ಯ ಇಲಾಖೆ ಪ್ರಯಾಸ ಪಟ್ಟು ಅಂಥಾ ಚಿರತೆಗಳನ್ನು ಹಿಡಿದು ಮತ್ಯಾವುದೋ ಜನವಸತಿ ಪ್ರದೇಶದ ಇಕ್ಕೆಲದಲ್ಲಿರೋ ಕಾಡಿ ಬಿಟ್ಟಿ ಬರುತ್ತದೆ. ಮತ್ತೆ ಆ ಊರಿನಲ್ಲಿ ಚಿgಚಿve ಹಾವಳಿ ಶುರುವಾಗುತ್ತೆ. ಈ ಚಿರತೆಗಳು ನರಭಕ್ಷಕಗಳಾಗೋದು ವಿರಳ. ಆದರೆ ಹುಲಿಯೇನಾದರೂ ನಾಡಿಗೆ ನುಗ್ಗಲು ಶುರುವಿಟ್ಟರೆ ಸಾಲು ಸಾಲು ನರ ಬಲಿ ಪಡೆಯದೇ ಬಿಡೀದಿಲ್ಲ. ವರ್ಷಗಳ ಹಿಂದೆ ಕರ್ನಾಟಕದಲ್ಲಿಯೇ ಒಂದಷ್ಟು ಮಂದಿ ಹುಲಿಗೆ ಆಹಾರವಾಗಿದ್ದರು. ಸಾಮಾನ್ಯವಾಗಿ ಹುಲಿ ಎಂಬುದು ಎಂಥವರನ್ನೂ ಬೆಚ್ಚಿ ಬೀಳಿಸುವಂಥಾ ಬಲಿಷ್ಟ ಪ್ರಾಣಿ. ಅಂಥಾ ಪ್ರಾಣಿಗಳು ಕಾಡಿನಲ್ಲಿ ತಮ್ಮ ವಿಶೇಷ ಆವಾಸ ಸ್ಥಾನಗಳಲ್ಲಿ ಮಾತ್ರವೇ ವಾಸಿಸುತ್ತವೆ. ಇಂಥಾ ಹುಲಿಗಳು ಏಕೆ ಏಕಾಏಕಿ ನಾಡಿಗೆ ನುಗ್ಗುತ್ತವೆ? ಅವೇಕೆ ನರಭಕ್ಷಕಗಳಾಗಿ ಕುಖ್ಯಾತಿ ಪಡೆಯುತ್ತವೆ? ಅವುಗಳ ಜೀವನ ಕ್ರಮ ಹೇಗಿರುತ್ತದೆ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ಹುಲಿಗಳ ಜಗತ್ಚತಿನತ್ತ ಮುಖ ಮಾಡಿದರೆ ನಿಜಕ್ಕೂ ಇಂಟರೆಸ್ಟಿಂಗ್ ಎಂಬಂಥಾ ಒಂದಷ್ಟು ವಿಚಾರಗಳು ಜಾಹೀರಾಗುತ್ತವೆ!


ಚಿರತೆಯಂಥಾ ಪ್ರಾಣಿಗಳು ಅಭ್ಯಾಸವಾದರೆ ಜನವಸತಿ ಪ್ರದೇಶದ ಅಂಚಿನ ಕಾಡಲ್ಲಿದ್ದುಕೊಂಡೇ ಹಾವಳಿ ಇಡಬಲ್ಲವು. ದನ ಕರು, ನಾಯಿಯಂಥಾ ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಾ ಒಂದಷ್ಟು ಕಾಲ ಕಾಲ ತಳ್ಳಬಲ್ಲವು. ಆದರೆ ಹುಲಿ ಎಂಬುದು ತನ್ನದೇ ಶಿಸ್ತು, ಗಾಂಭೀರ್ಯ ಹೊಂದಿರುವ ವಿಶಿಷ್ಟವಾದ ಪ್ರಾಣಿ. ಬೇಟೆಯೂ ಸೇರಿದಂತೆ ಎಲ್ಲದರಲ್ಲಿಯೂ ಈ ಹುಲಿರಾಯನದ್ದು ಡಿಫರೆಂಟಾದ ನಡೆ. ಹುಲಿ ಎಂಬುದು ತೀರಾ ಸಂಘ ಜೀವಿಯಲ್ಲಿ. ಹುಟ್ಟಿ ಕೈ ಕಾಲು ಬಲಿಯುತ್ತಲೇ ಪ್ರಕೃತಿದತ್ತವಾಗಿಯೇ ಅದಕ್ಕೆ ಸ್ವಾವಲಂಬನೆ ದಕ್ಕುತ್ತದೆ. ಮಿಲನದ ವಯಸ್ಸು ಬಂದಾಗ ಸಂಗಾತಿಗಾಗಿ ಹಾತೊರೆಯುವ ಹುಲಿಗಳು ಆ ಪ್ರಕ್ರಿಯೆ ಮತ್ತು ಮರಿಗಳ ಲಾಲನೆ ಪಾಲನೆಯಲ್ಲಿ ಮಾತ್ರವೇ ಒಂದಷ್ಟು ಕಾಲ ಜೊತೆಯಾಗಿರುತ್ತವೆ. ಆ ನಂತರ ದಟ್ಟ ಕಾಡೊಳಗೆ ತಮ್ಮದೇ ಆದ ಕಿಲೋಮೀಟರು ಗಟ್ಟಲೆ ಸರಹದ್ದಿನಲ್ಲಿ ರಾಜರಂತೆ ಬದುಕುತ್ತವೆ. ತಮ್ಮ ಸರಹದ್ದಿನಲ್ಲಿ ಮತ್ತೊಂದು ಹುಲಿ ಎಂಟ್ರಿ ಕೊಟ್ಟರೂ ಕದನ ಖಾಯಂ. ಇಂಥಾ ಹುಲಿಗಳು ಒಮ್ಮೊಮ್ಮೆ ಊರಿಗೆ ನುಉಗ್ಗಿ ದಾಂಗುಡಿ ಇಡೋದಿದೆ!

ಮನುಷ್ಯರಂದ್ರೆ ಭಯ


ಸಾಮಾನ್ಯವಾಗಿ ಹುಲಿ ಅದೆಷ್ಟೇ ಧೈರ್ಯಶಾಲಿ ಪ್ರಾಣಿಯಾದರೂ ಅದು ಮನುಷ್ಯನನ್ನು ಕಂಡರೆ ಹೆದರುತ್ತದೆ. ಅಂಥಾದ್ದೊಂದು ಪ್ರಾಕೃತಿಕ ವಿಸ್ಮಯ ಇಲ್ಲದೇ ಹೋಗಿದ್ದರೆ ಹುಲಿ ವಾಸವಿರುವ ಪ್ರದೇಶಗಳಲ್ಲಿ ಜನವಸತಿ ಇರುವುದು ಸಾಧ್ಯವೇ ಇಲ್ಲವಾಗುತ್ತಿತ್ತೇನೋ. ಆದರೆ, ಅಂಥಾ ಹುಲಿ ಸೀದಾ ಊರಿಗೇ ನುಗ್ಗಿ ಮನುಷ್ಯರನ್ನು ಬಲ ಬೀಳಿಸೋದಕ್ಕೆ ಪರಿಸರ ನಾಶವೇ ಕಾರಣ ಅಂತ ಏಕಮುಖವಾಗಿ ಗಂಟಲು ಹರಿದುಕೊಳ್ಳುವುದು ಸಿನಿಕತನವಾಗುತ್ತದೆ. ಯಾಕೆಂದರೆ ಹುಲಿಯ ಜೀವನ ಚಕ್ರದಲ್ಲಿಯೇ ಅಂಥಾದ್ದೊಂದು ವಿಸ್ಮಯವಿದೆ. ಹುಲಿಗಳ ಜೀವನಕ್ರಮವನ್ನು ಸರಿಯಾಗಿ ಅಭ್ಯಸಿಸಿದರೆ ಹುಲಿಗಳು ಸಿಟ್ಟಿಗೇಳುವ ವರ್ತನೆ ಸಾಮಾನ್ಯ ಎಂಬಂತೆ ಕಂಡುಬರುತ್ತದೆ. ಈ ಹಿಂದೆ ಸರ್ವವ್ಯಾಪಿಯಾಗಿದ್ದ ಹುಲಿಗಳು ರಕ್ಷಿತಾರಣ್ಯ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಅಲ್ಲದೆ ರಕ್ಷಿತಾರಣ್ಯದಲ್ಲಿ ಇರುವ ಹುಲಿಗಳ ಬಗ್ಗೆ ಸರಕಾರಕ್ಕೆ ನಿಖರವಾದ ಲೆಕ್ಕಗಳಿಲ್ಲ. ಇಂಟರೆಸ್ಟಿಂಗ್ ವಿಚಾರವೆಂದರೆ, ಈ ಹುಲಿಗಳು ಯಾವಾಗಲೂ ಒಚಿಟಿ ಜೀವಿಗಳು. ಹೆಣ್ಣು ಹುಲಿ ಮಾತ್ರವೇ ಕೆಲ ಕಾಲ ಮರಿಗಳೊಂದಿಗೆ ಸಹ ಜೀವನ ನಡೆಸುತ್ತದೆ. ಆದರೆ ಮರಿಗಳು ಬಲಿತ ಮೇಲೆ ಸಂಬಂಧ ಮಾಸಲಾಗಿ ಅವವುಗಳದ್ದೇ ಬೇರೆ ಲೋಕ ತೆರೆದು ಕೊಳ್ಳುತ್ತದೆ. ಒಂ ಹೆಣ್ಣು ಹುಲಿ ಸಾಮಾನ್ಯವಾಗಿ ಇತ್ತು ಚದರ ಅಡಿಗಳಷ್ಟು ದೂರವನ್ನು ತನ್ನ ಸರಹದ್ದಾಗಿಸಿಕೊಳ್ಳುತ್ತದೆ ಆದರೆ ಒಂದು ಗಂಡು ಹುಲಿಯ ಸರಹದ್ದು ಇಂಥಾ ಅನೇಕ ಹೆಣ್ಣು ಹುಲಿಗಳ ಸರಹದ್ದನ್ನು ಒಳಗೊಂಡಿರುತ್ತದೆ. ಆ ವ್ಯಾಪ್ತಿಗೆ ಇನ್ನೊಂದು ಹುಲಿಯ ಪ್ರವೇಶವನ್ನು ಇವುಗಳು ಖಂಡಿತಾ ಸಹಿಸೋದಿಲ್ಲ.

ಶಿಸ್ತಿನ ಪ್ರಾಣಿಗಳು


ಬೇಟೆಯೂ ಸೇರಿದಂತೆ ಎಲ್ಲವೂ ನಿಯತ್ತಾಗಿ ಈ ಏರಿಯಾದಲ್ಲೇ ನಡೆಯಬೇಕೆಂಬುದು ಅವುಗಳ ಅಘೋಶಿತ ನಿಯಮ. ಬೇಟೆಯ ವಿಚಾರದಲ್ಲಿಯೂ ಇವು ಕಟ್ಟು ನಿಟ್ಟು. ಬೇರೆ ಹುಲಿ ಬೇಟೆಯಾಡಿದ್ದನ್ನು ಹಸಿವಿನ ಸಂದರ್ಭದಲ್ಲಿಯೂ ಮುಟ್ಟುವುದಿಲ್ಲ. ಆದರೆ ಹೀಗೆ ರಾಜನಂತೆ ಮೆರೆದಾಡುವ ಹುಲಿ ವಯಸ್ಸಾಗಿಯೋ, ಗಾಯಗೊಂಡೋ ನಿಶಕ್ತವಾದಾಗ ಬೇರೆ ಹುಲಿ ಆ ಸರಹದ್ದನ್ನು ವಶಕ್ಕೆ ತೆಗೆದುಕೊಳ್ಳುತ್ತವೆ. ಶಕ್ತಿಹೀನ ಹುಲಿಯನ್ನು ಅತ್ಯಂತ ನಿರ್ಧಯವಾಗಿ ದುರ್ಬಲ ಹುಲಿಯನ್ನು ದೂರ ಅಟ್ಟುತ್ತವೆ. ಇಂಥ ಸಂದರ್ಭದಲ್ಲಿ ಅಶಕ್ತ ಹುಲಿಗಳು ಕಾಡಂಚಿಗೆ ಬಂದು ಸುಲಭ ಬೇಟೆ ನಿರೀಕ್ಷೆಯಲ್ಲಿಲ್ಲಿರುತ್ತವೆ. ಅಂಥಾ ಹುಲಿಗಳಿಗೆ ಮೊದಲು ಆಹಾರವಾಗೋದು ನಾಯಿ ಮತ್ತು ಜಾನುವಾರುಗಳು. ಸಾಮಾನ್ಯವಾಗಿ ಜಾನುವಾರುಗಳು ನಾಪತ್ತೆಯಾದಾಗ ಇದು ಹುಲಿಯದ್ದೇ ಕೆಲಸ ಅಂತ ತಿಳಿದಾಕ್ಷಣ ಜನ ಹಟ್ಟಿಯಲ್ಲೇ ಕಟ್ಟಿ ಹಾಕಿಯೋ, ಪಹರೆ ಕಾದೋ ರಕ್ಷಿಸುತ್ತಾರೆ. ಅಶಕ್ತ ಹುಲಿಯ ಹಸಿದ ಹೊಟ್ಟೆ ನಿರ್ಧಯವಾಗುವುದು, ಅದರ ಮನಸಿಂದ ಮನುಷ್ಯರೆಡೆಗಿನ ಸಹಜ ಭಯ ಮಾಯವಾಗಿ ನರಬೇಟೆಗೆ ಆ ಸಂದರ್ಭದಲ್ಲಿಯೇ!

ಹಾಗಾದರೆ ಇಂಥಾದ್ದೊಂದು ಹುಲಿಯ ಜೀವನ ಚಕ್ರದ ಬಗ್ಗೆ ಗೊತ್ತಿದ್ದರೂ ಒಂದು ನರಭಕ್ಷಕ ಹುಲಿಯನ್ನು ಸೆರೆ ಹಿಡಿದ ಮೇಲೆ ಅದನ್ನು ಮೃಗಾಲಯಕ್ಕೆ ಬಿಡದೆ ಯಾಕೆ ಮತ್ತೊಂದು ಕಾಡಿಗೆ ಬಡಲಾಗಿದೆ ಎಂಬ ಪ್ರಶ್ನೆ ಕಾಡುತ್ತದೆ. ನರಭಕ್ಷಕ ಹುಲಿ ಎಂಥಾ ಅಪಾಯಕಾರಿ ಎಂಬುದನ್ನು ಅರಣ್ಯಾಧಿಕಾರಿಗಳಿಗೆ ಯಾರೂ ತಿಳಿಸಿ ಹೇಳುವ ಅಗತ್ಯವಿಲ್ಲ. ಆದರೆ ಚಿಕ್ಕಮಗಳೂರಿನಲ್ಲಿ ಮಹಿಳೆಯನ್ನು ಕೊಂದ ಹುಲಿಯ ಮುಖದಲ್ಲಿ ನೆತ್ತರ ಕಲೆ ಮಾಸುವ ಮುನ್ನವೇ ಬೆಳಗಾವಿಗೆ ಬಿಟ್ಟಿದ್ದರ ಹಿಂದೆ ಯಾವ ಕುತಂತ್ರ ಅಡಗಿದೆ ಎಂಬ ಜಿಜ್ಞಾಸೆ ನಾಗರಿಕರಲ್ಲಿ ಎದ್ದಿದೆ. ಆದುದರಿಂದಲೇ ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ವರ್ತನೆಯ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ಒಂದು ಸಾರಿ ಮನುಷ್ಯ ಬೇಟೆಯಾಡಿದ ಹುಲಿ ಯಾವ ರೀತಿ ನಿರ್ಧಯಿಯಾಗುತ್ತದೆ ಮತ್ತು ಅದರ ಮನಸ್ಥಿತಿ ಎಂಥಾದ್ದಿರುತ್ತದೆ ಎಂಬುದಕ್ಕೊಂದು ಭಯಾನಕ ಹಿನ್ನೆಲೆಯೇ ಇದೆ. ಕೇವಲ ವಯಸ್ಸಾದ ಹುಲಿಗಳು ಮಾತ್ರವಲ್ಲದೇ ಮನುಷ್ಯನ ದುರಾಕ್ರಮಣದಿಂದ ಕಂಗಾಲಾದ ಹುಲಿಗಳೂ ನರಭಕ್ಷಕಗಳಾಗಿ ಪ್ರತಿಕಾರ ತೀರಿಸಿಕೊಳ್ಳುತ್ತವೆ.

ನಮ್ಮದೇ ತಪ್ಪು


ಈವತ್ತು ಹುಲಿಗಳು ಮನುಷ್ಯರನ್ನೇ ಕೊಂದು ಅಟ್ಟಹಾಸ ಮೆರೆಯುವಾಗ ಎಲ್ಲರೂ ಕಂಗಾಲಾಗಿದ್ದೇವಲ್ಲ. ಇದಕ್ಕೆ ಬೇರೇನೇ ಕಾರಣಗಳಿದ್ದರೂ ಅದರಲ್ಲಿ ನಮ್ಮದೂ ಸಿಂಹ ಪಾಲಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಕಾಡಲ್ಲಿ ವಾಸಿಸುವ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಅಪ್ಪಿತಪ್ಪಿಯೂ ಯೋಚಿಸದೆ ಅವುಗಳ ವಾಸ ಸ್ಥಾನವನ್ನೂ ಆಕ್ರಮಿಸುತ್ತಾ ಸಾಗುತ್ತಿದ್ದೇವಲ್ಲಾ? ಇದು ಹೀಗೆಯೇ ಮುಂದುವರೆದರೆ ಪರಿಣಾಮ ಮತ್ತಷ್ಟು ಭೀಕರವಾಗಲಿದೆ. ಹುಲಿಗಳ ಸಂಖ್ಯೆಯಂತೂ ದಿನೇ ದಿನೆ ಕುಸಿಯುತ್ತಿದೆ.
ಇದನ್ನೇ ಬಂಡವಾಳವಾಗಿಸಿಕೊಂಡು ಪ್ರಾಣಿ ಪ್ರೀತಿಯ ಸೋಗಿನೊಂದಿಗೆ ಎನ್‌ಜಿಒಗಳು ನಾಯಿಕೊಡೆಗಳಿಗಿಂತಲೂ ಕಡೆಯಾಗಿ ಹುಟ್ಟಿಕೊಳ್ಳುತ್ತಿವೆ. ಇದರಲ್ಲೇ ಕೆಲವರು ಕಂಗಾಗಾಲಾದ ಹುಲಿಯ ಕತ್ತಿಗೆ ಅದೇನೋ ರೇಡಿಯೋ ಕಾಲರ್ ಕಟ್ಟಿ ಸಂಶೋದನೆ ನಡೆಸುತ್ತಿದ್ದೇವೆ ಅಂತ ಪೋಸು ಕೊಡುತ್ತಿದ್ದಾರೆ. ಆದರೆ ಈಗ ಇಂಥಾ ಸಂಶೋದನೆಗಳಿಂದ ಫಂಡು ಪಡೆದು ಯಾರ್‍ಯಾರೋ ಉದ್ದಾರಾಗಬಹುದಷ್ಟೇ. ಆದರೆ ಅದರಿಂದ ಹುಲಿಗಳಿಗಾಗಲೀ ಅವುಗಳಿಗೆ ಬಲಿಯಾಗೋ ನರಮಾನವರಿಗಾಗಲಿ ಕಿಲುಬು ಕಾಸಿನ ಪ್ರಯೋಜನವೂ ಇಲ್ಲ. ಆದರೀಗ ಹುಲಿ ಮತ್ತು ಮನುಷ್ಯ ಸಂಘರ್ಷ ಮತ್ತು ಅದರಿಂದಾಗುವ ಸಾವು ನೋವುಗಳನ್ನು ತಪ್ಪಿಸಲು ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣಕ್ಕೆ ಮುಂದಾಗಬೇಕಿದೆ.

ಅರಣ್ಯ ಸಚಿವರು, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಎಪಿಸಿಸಿಎಫ್, ನಿಷ್ಠಾವಂತ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರಕ್ಷಿತಾರಣ್ಯದದೊಳಗೆ ಅರಣ್ಯ ಸಿಬ್ಬಂದಿಯೆ ಕಾಸಿನಾಸೆಗೆ ಬಿದ್ದು ಅನೈತಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡುತ್ತಿರುವ ಪ್ರಕರಣಗಳೂ ಆಗಾಗ ನಡೆಯುತ್ತಿವೆ. ಬೇಟೆಗಾರರು, ಹುಲಿಯುಗುರು ಚೋರರ ಸಂತತಿಯೂ ಅಧಿಕವಾಗುತ್ತಿದೆ. ಇದರಿಂದಲೇ ಹುಲಿಗಳು ಸೇರಿದಂತೆ ಪ್ರಾಣಿಗಳ ಬದುಕು ತಲ್ಲಣಿಸುತ್ತಿದೆ. ಅದರ ಪರಿಣಾಮವಾಗಿ ನರಬಲಿಗಳೂ ನಡೆಯುತ್ತಿವೆ. ರಕ್ಷಿತಾರಣ್ಯವನ್ನಾದರೂ ನೆಟ್ಟಗೆ ಸಂಭಾಳಿಸಿದರೆ ಇಂಥಾ ಘಟನೆಗಳು ಮರುಕಳಿಸಲಾರವೇನೋ. ಆದರೆ ಮಾನವನ ಅತಿ ಆಸೆ ಮತ್ತು ಅರಣ್ಯದೊಳಗಿನ ಅತಿಕ್ರಮ ಪ್ರವೇಶದಿಂದ ಹುಲಿಯೂ ಸೇರಿದಂತೆ ಅನೇಕ ಪ್ರಾಣಿಗಳು ಕಂಗಾಲಾಗಿವೆ. ಇಲ್ಲಿ ನಮಗೆ ಮಾತ್ರವಲ್ಲದೆ ಸಕಲ ಚರಾಚರಗಳಿಗೂ ನಮ್ಮಷ್ಟೇ ಬದುಕುವ ಹಕ್ಕಿದೆ ಎಂಬಂಥಾ ತಿಳುವಳಿಕೆ ಮಾತ್ರವೇ ಈ ಸಂಘರ್ಷವನ್ನು ಸಹನೀಯವಾಗಿಸಬಲ್ಲದು.

ಅದು ನರಭಕ್ಷಕ ಹುಲಿ!


ಈ ಹುಲಿ ಮತ್ತು ಮನುಷ್ಯ ಸಂಘರ್ಷಕ್ಕೆ ಸುಧೀರ್ಘವಾದೊಂದು ಇತಿಹಾಸವೇ ಇದೆ. ಈವರೆಗೆ ದೇಶದ ನಾನಾ ಕಡೆಗಳಲ್ಲಿ ಇಂಥಾ ನರಭಕ್ಷಕ ಹುಲಿಗಳು ಭಾರೀ ಸಂಚಲನವನ್ನೇ ಎಬ್ಬಿಸಿವೆ. ಅಂಥಾ ಹುಲಿಗಳಲ್ಲಿ ಭಾರೀ ಸದ್ದು ಮಾಡಿದ್ದು ಚಂಪಾವತ್ ಎಂಬ ಹುಲಿ. ಅದು ಬರೋಬ್ಬರಿ  ಜನರನ್ನು ಕೊಂದು ತಿಂದಿತ್ತು. ಮತ್ತೊಂದು ಪ್ರಕರಣದಲ್ಲಿ ಉತ್ತರಾಖಂಡ್‌ನ ದಟ್ಟ ಅರಣ್ಯದಲ್ಲಿದ್ದ ಈ ಹುಲಿ ೧೯೨೦ರ ಆಸುಪಾಸಲ್ಲಿ ಆ ಭಾಗದ ಮನುಷ್ಯ ಸಂಕುಲವೇ ನಡುಗುವಂತೆ ಮಾಡಿ ಹಾಕಿತ್ತು. ಅದು ಎಂಥಾ ಚಾಣಾಕ್ಷ ಹುಲಿಯೆಂದರೆ ಸ್ಥಳೀಯರು ಅದನ್ನು ಬೇಟೆಯಾಡಲು ಪಾರಂಪರಿಕ ಖತಾರ್‍ನಾಕ್ ಪಟ್ಟುಗಳನ್ನು ಅದೆಷ್ಟೇ ಪ್ರಯೋಗಿಸಿದರೂ ವ್ಯರ್ಥವಾಗುತ್ತಿತ್ತು. ಆದರೆ ಗ್ರಾಮಸ್ಥರು ಹುಲಿ ಹಿಡಿಯಲು ಹೊಸಾ ಐಡಿಯಾ ಹೊಸೆಯುತ್ತಲೇ ಚಂಪಾವತ್ ಮತ್ತೊಂದು ಬಲಿ ಹಾಕುತ್ತಿತ್ತು.

ಇನ್ನೇನು ಈ ಹುಲಿಯ ಹಾವಳಿಗೆ ಆಸುಪಾಸಿನ ಗ್ರಾಮವೆಲ್ಲಾ ಖಾಲಿಯಾಗುತ್ತದೆ ಎಂಬ ವಾತಾವರಣ ವಿರುವಾಗಲೇ ಅಲ್ಲಿಗೆ ಅಡಿಯಿರಿಸಿದಾತ ಪ್ರಖ್ಯಾತ ಬೇಟೆಗಾರ ಜಿಮ್ ಕಾರ್ಬೆಟ್. ಆತ ತನ್ನ ನಾಜೂಕು ಶೈಲಿಯಿಂದ ಅನಾಯಾಸವಾಗಿ ಈ ನರಭಕ್ಷಕ ಹುಲಿಯನ್ನು ಕೊಂದಿದ್ದ. ಆ ಕಾಡಿನ ಸುತ್ತಲ ಹತ್ತೂರಿನ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಹೀಗೆ ಒಂದು ಕಾಲದಲ್ಲಿ ಸಾಲು ಸಾಲಾಗಿ ಹುಲಿಗಳನ್ನು ಬೇಟೆಯಾಡಿದ ಕಾರಣದಿಂದಲೇ ಇಂದು ಅವುಗಳ ಸಂತತಿ ಕಡಿಮೆಯಾಗಿದೆ. ಈಗ ಒಂದಷ್ಟು ಮೃಗಾಲಯದಲ್ಲಿದ್ದರೆ ಮತ್ತೊಂದಷ್ಟು ಕಾಡೊಳಗಿವೆ. ಅವುಗಳಿಗೆ ಬೇಕಾದ ಕಾಡಿನ ಪ್ರಮಾಣವೂ ಕ್ಷೀಣಿಸುತ್ತಿದೆ.

ಆತ ಜಿಮ್ ಕಾರ್ಬೆಟ್!


ಹುಲಿಗಳ ಹಾವಳಿ ಹೆಚ್ಚಾದಾಗ ಬೇಟೆಯೊಂದೇ ಪರಿಹಾರ ಎಂದಾಗ ಅನೇಕ ಅಪಸ್ವರಗಳು ಏಳುತ್ತವೆ. ಪ್ರಾಣಿ ದಯಾ ಸಂಘಗಳು ಬೀದಿಗಿಳಿದು ಹೋರಾಟ ನಡೆಸುತ್ತವೆ. ಆದರೆ ನರಭಕ್ಷಕ ಹುಲಿಗಳ ಹಾವಳಿಗೆ ಬೇಟೆಯೊಂದೇ ಪರಿಹಾರ ಎಂಬುದಕ್ಕೆ ಬ್ರಿಟಿಷರ ಕಾಲದ ಪ್ರಖ್ಯಾತ ಬೇಟೆಗಾರ ಜಿಮ್ ಕಾರ್ಬೆಟ್‌ನ ಬದುಕು ಸೂಕ್ತ ಉದಾಹರಣೆಯಾಗಬಲ್ಲುದು. ಬೇಟೆಗಾರನಾಗಿದ್ದರೂ ಪರಿಸರ ಪ್ರೇಮಿಯಾಗಾಗಿದ್ದ ಒಂದು ರೋಚಕ ವ್ಯಕ್ತಿತ್ವ ಕಾರ್ಬೆಟ್‌ನದ್ದು. ಆತನ ಪೂರ್ತಿ ಹೆಸರು ಎಡ್ವರ್ಡ್ ಜೇಮ್ಸ್ ಜಿಮ್ ಕಾರ್ಬೆಟ್. ಐರಿಶ್ ಮನೆತನಕ್ಕೆ ಸೇರಿದ ಕಾರ್ಬೆಟ್ ಯಾವ ಪ್ರಾಣಿ, ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಸಪ್ಪಳಗಳ ಮೂಲಕವೇ ಪತ್ತೆಹಚ್ಚವುದನ್ನು ರೂಢಿಸಿಕೊಂಡಿದ್ದ. ನಿರಂತರ ಅಲೆಮಾರಿಯಾಗಿದ್ದ ಆತನಲ್ಲಿ ಕ್ರಮೇಣವಾಗಿ ಅನ್ವೇಷಕ ಪ್ರವೃತ್ತಿಯ ಭೇಟೆಗಾರನೊಬ್ಬ ರೂಪುಗೊಂಡಿದ್ದ.
ನಂತರದ ದಿನಗಳಲ್ಲಿ ಬ್ರಿಟಿಷ್ ಸೇನೆಯಲ್ಲಿ ಕರ್ನಲ್ಲರಾಗಿದ್ದ ಜಿಮ್ ಕಾರ್ಬೆಟ್ ತನ್ನ ಬೆಟೆಗಾರಿಕೆಯ ಪ್ರಸಿದ್ಧಿಗಳಿಂದಾಗಿ, ಅಂದಿನ ಉತ್ತರ ಪ್ರದೇಶ ಮತ್ತು ಉತ್ತರಾಖಾಂಡ್ ಪ್ರದೇಶಗಳಲ್ಲಿ ಮನುಷ್ಯರ ಪ್ರಾಣಕ್ಕೆ ಎರವಾದ ನರಭಕ್ಷಕ ಹುಲಿಗಳು ಮತ್ತು ಚಿರತೆಗಳ ಬೇಟೆಗಾಗಿ ಆಹ್ವಾನ ಪಡೆಯುತ್ತಿದ್ದ. ಈ ರಾಜ್ಯಗಳ ಘರವಾಲ್ ಮತ್ತು ಕುಮಾನ್ ಪ್ರದೇಶಗಳ ಗ್ರಾಮಗಳಲ್ಲಿ ಅಂದಿನ ದಿನಗಳಲ್ಲಿ ಹುಲಿ ಚಿರತೆಗಳು ಅಪಾರವಾಗಿದ್ದವು. ಭೇಟೆಯಲ್ಲಿ ನಿಪುಣನಾದ ಕಾರ್ಬೆಟ್ ಅಂದಿನ ಜನರ ಕಣ್ಣಲ್ಲಿ ಒಬ್ಬ ಹೀರೋ ಎನಿಸಿದ್ದ. ಅಂದಿನ ಕ್ರೂರ ಪ್ರಾಣಿಗಳಿಗೆ ಕಾರ್ಬೆಟ್ ಅವರ ಕೈಚಳಕ ಮೃತ್ಯುಸದೃಶವಾಗಿತ್ತಾದರೂ ತಮ್ಮ ಸಜ್ಜನಿಕೆಯಿಂದ ಜನರ ಕಣ್ಣಲ್ಲಿ ಅವರು ಪ್ರೀತಿ ವಿಶ್ವಾಸಗಳು ತುಂಬಿದ್ದ ಸಾಧು ಸಂತನೆಂದು ಗೌರವ ಪಡೆದಿದ್ದ. ಈವತ್ತಿಗೂ ಆತನ ಕಥೆಗಳು ರೋಮಾಂಚನ ಮೂಡಿಸುತ್ತವೆ.

ಕಾರ್ಬೆಟ್ ಒಟ್ಟು ಹತ್ತೊಂಬತ್ತು ಹುಲಿಗಳು ಮತ್ತು ಹದಿನಾಲಕ್ಕು ಚಿರತೆಗಳನ್ನು ಬೇಟೆಯಾಡಿದ ದಾಖಲೆ ಈತನಿಗಿದೆ. ಒಂದು ಅಂದಾಜಿನ ಪ್ರಕಾರ ಈ ಬೃಹತ್ ಗಾತ್ರದ ಪ್ರಾಣಿಗಳಿಂದ ಸುಮಾರು ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಜೀವಕಳೆದುಕೊಂಡಿದ್ದರು. ಅಪಾಯಕಾರಿಯಾದ ಇಂತಹ ಬೇಟೆಯ ಕ್ರೀಡೆಯನ್ನು ಕಾರ್ಬೆಟ್ ಒಬ್ಬಂಟಿಯಾಗಿ ಮತ್ತು ಕಾಲ್ನಡಿಗೆಯಲ್ಲಿಯೇ ಹೋಗಿ ನಡೆಸುತ್ತಿದ್ದದ್ದು ವಿಶೇಷ. ಈತ ಬೇಟೆಗಾಗಿ ಹೊರಡುವಾಗ ತನ್ನೊಂದಿಗೆ ರಾಬಿನ್ ಎಂಬ ಹೆಸರಿನ ಪುಟ್ಟ ನಾಯಿಯೊಂದನ್ನು ಜೊತೆಗೆ ಕರೆದೊಯ್ಯುತ್ತಿದ್ದನಂತೆ. ಬೇರೆಯವರ ಜೀವಗಳನ್ನು ಉಳಿಸಲು ಹೋಗಿ ಕಾರ್ಬೆಟ್, ಆಗಾಗ ದೊಡ್ಡ ಪ್ರಮಾಣದ ವೈಯಕ್ತಿಕ ಗಂಡಾಂತರಗಳಿಗೆ ತುತ್ತಾಗಿದ್ದೂ ಇದೆ.

ಜಿಮ್ ಕಾರ್ಬೆಟ್ ಅಜಗಜಾಂತರ ವೆತ್ಯಾಸವಿದೆ. ಆತ ಕ್ಯಾಮರಾದ ಮೂಲಕ ಅವರು ಹುಲಿಗಳ ಬಗೆಗಿನ ವಿಷಯಗಳನ್ನು ಸೆರೆ ಹಿಡಿದು ದಾಖಲಿಸಲು ಆರಂಭಿಸಿದ್ದ. ಯಾವುದಾದರೂ ಪ್ರಾಣಿ ನರಭಕ್ಷಕವಾಗಿದ್ದರೆ ಅಥವಾ ತಮ್ಮ ಸ್ವಾಭಾವಿಕ ಆಹಾರವಲ್ಲದ ಪ್ರಾಣಿ, ಪಶು ಪಕ್ಷಿಗಳಿಗೆ ಅಪಾಯಕಾರಿ ಎನಿಸಿದ್ದರೆ ಮಾತ್ರ ಅವುಗಳನ್ನು ಕೊಲ್ಲಲು ಮುಂದಾಗುತ್ತಿದ್ದ. ತೀರಾ ಮನುಷ್ಯರ ಜೀವಕ್ಕೆ ಕುತ್ತಾಗಿ ನೈಸರ್ಗಿಕ ಪದ್ಧತಿಯಾಚೆಗೆ ಆಹಾರಕ್ರಮ ಕಂಡುಕೊಳ್ಳುವ ಹುಲಿಯಂಥಾ ಪ್ರಾಣಿಗಳನ್ನು ಕೊಲ್ಲದೇ ವಿಧಿಯಿಲ್ಲ. ಆದರೆ ಅದರ ಜೊತೆಗೇ ಈ ಸಂಕುಲದ ಉಳಿವಿನ ಬಗ್ಗೆಯೂ ಯೋಚಿಸಬೇಕಿರುವುದು ಮನುಷ್ಯತ್ವದ ಲಕ್ಷಣ.

ಅರಣ್ಯ ಇಲಾಖೆ ನಿತ್ರಾಣ


ಹಾಗೆ ನೋಡಿದರೆ ರಾಜ್ಯದಲ್ಲಿ ಕಳೆದ ಹತ್ತಾರು ವರ್ಷಗಳ ಅವಧಿಯಲ್ಲಿ ಮನುಷ್ಯ ಆನೆಗೆ ಬಲಿಯಾಗಿದ್ದಕ್ಕಿಂತ ಹುಲಿಗೆ ಬಲಿಯಾಗಿದ್ದೇ ಹೆಚ್ಚು. ಆದರೆ ಇಂಥ ಸಂದರ್ಭದಲ್ಲಿ ಹುಲಿ ಮತ್ತು ಮನುಷ್ಯ ಇಬ್ಬರನ್ನೂ ರಕ್ಷಿಸಲು ಅರಣ್ಯ ಇಲಾಖೆ ಬಳಿ ಶಕ್ತಿಯೂ ಇಲ್ಲ. ಶಸ್ತ್ರಾಸ್ತ್ರಗಳೂ ಇಲ್ಲ. ಹುಲಿ ಸಂರಕ್ಷಣೆ ಹಾಗೂ ಹುಲಿ ದಾಳಿ ಘಟನೆಗಳನ್ನು ತಡೆಯಲು ಇಲ್ಲಿ ಸಿಬ್ಬಂದಿ ಮತ್ತು ಉಪಕರಣಗಳ ಕೊರತೆ ಇದೆ. ಇದನ್ನು ಸರಿಪಡಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ.ಹುಲಿ ದಾಳಿ ಪ್ರಕರಣಗಳನ್ನು ನಿರ್ವಹಿಸಲು ಶಸ್ತ್ರಸಜ್ಜಿತ ಹಾಗೂ ತರಬೇತಿ ಹೊಂದಿದ ಪ್ರತ್ಯೇಕ ತಂಡ ಸಿದ್ಧಪಡಿಸುವುದೂ ಸಹ ಸವಾಲಾಗಿಯೇ ಉಳಿದಿದೆ. ಎರಡು ಔಷಧ ಸಿರಿಂಜ್ ಲೋಡ್ ಆಗುವ ಎಂಟು ಆಧುನಿಕ ಟ್ರಾಂಕ್ಯೂಲೈಸರ್ ಖರೀದಿಸುವುದು ಕನಸಾಗಿಯೇ ಉಳಿದಿದೆ. ಉಪಟಳ ನೀಡುವ ಹುಲಿ ಹಿಡಿಯಲು ಅರಣ್ಯ ಇಲಾಖೆ ಅಲ್ಲಲ್ಲಿ ಗುಂಡಿನ ಮಾದರಿ ಔಷಧ ಹೊಡೆದು ಪ್ರಜ್ಞೆ ತಪ್ಪಿಸುವ ಟ್ರ್ಯಾಂಕುಲೈಸರ್ ಬಳಸುತ್ತಿದೆ.

ಆದರೆ ಅವು ಹಳೇ ಕಾಲದ ತಂತ್ರಜ್ಞಾನದ್ದು. ಅವು ಕೂಡ ಅಗತ್ಯ ಪ್ರಮಾಣದಷ್ಟಿಲ್ಲ. ಇದರೊಂದಿಗೆ ಟ್ರ್ಯಾಂಕುಲೈಸರ್ ಬಳಸಿ ಹುಲಿ ಹಿಡಿಯುವ ಸಿಬ್ಬಂದಿಯೂ ಕಾಣದಾಗಿದ್ದಾರೆ. ದುರಂತವೆಂದರೆ ಈಗಿರುವ ಸಿಬ್ಬಂದಿಗೆ ಔಷಧ ಹಾಕಿದ ಟ್ರ್ಯಾಂಕುಲೈಸರ್ ಬಳಸುವುದು ಗೊತ್ತಿಲ್ಲ. ವಿದ್ಯೆ ಗೊತ್ತಿರುವವರೆಲ್ಲಾ ಬಹುತೇಕ ಪಶುವೈದ್ಯರು. ಆದರೆ ಈ ಕೆಲಸ ಸುಲಭವಲ್ಲ ಎಂಬ ಕಾರಣಕ್ಕೆ ಪಶುವೈದ್ಯರು ಅರಣ್ಯ ಇಲಾಖೆಗೆ ಬರುತ್ತಿಲ್ಲ. ಹೀಗಾಗಿ ಹುಲಿ ಹಿಡಿಯಲು ಸಮರ್ಥರಾದ ಅನುಭವೀ ಹಿರಿಯ ಪಶು ವೈದ್ಯರ ಸಂಖ್ಯೆ ಐದು ಮಂದಿ ಇರಬಹುದಷ್ಟೆ. ಈ ಹುಲಿ ಹಿಡಿಯುವ ಕಾರ್ಯಕ್ಕೆ ಪಶು ವೈದ್ಯರೂ ಸೇರಿದಂತೆ ಹತ್ತು ಮಂದಿಯಾದರೂ ಬೇಕು. ಆದರೆ ಹುಲಿ ಸಂರಕ್ಷಿತ ಅರಣ್ಯ ವಿಭಾಗಗಳಲ್ಲಿ ಅಷ್ಟು ಸಂಖ್ಯೆ ಸಿಬ್ಬಂದಿ ಇಲ್ಲದೆ ಇಲಾಖೆ ನಿತ್ರಾಣಗೊಂಡಿದೆ. ಹೀಗಿರುವಾಗ ಹುಲಿ ರೊಚ್ಚಿಗೆದ್ದರೆ ಸಾವೇ ಗತಿ ಎಂಬಂತಾಗಿದೆ!

Tags: #animals#nature#tiger#tigers#wildlife

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
digital loan mafia: ನೆಮ್ಮದಿಗೆ ಶೂಲವಾಯ್ತು ಮೈಕ್ರೋ ಫೈನಾನ್ಸ್ ಮಾಯಾ ಜಾಲ!

digital loan mafia: ನೆಮ್ಮದಿಗೆ ಶೂಲವಾಯ್ತು ಮೈಕ್ರೋ ಫೈನಾನ್ಸ್ ಮಾಯಾ ಜಾಲ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.