ಅಭಿನಯ ಚಕ್ರವರ್ತಿ ಹುಟ್ಟುಹಬ್ಬಕ್ಕೆ `ಕಿಚ್ಚ-46′ ಟೀಮ್ ಸರ್ ಪ್ರೈಸ್‍ಕೊಟ್ಟಿದೆ. ಟೆಂಟೆಟೀವ್ ಟೈಟಲ್‍ನಲ್ಲಿ ಸಿನಿಮಾ ಶುರು ಮಾಡಿದ್ದ `ಕಿಚ್ಚ-46′ ಬಳಗ ಚಿತ್ರಕ್ಕೆ `ಮ್ಯಾಕ್ಸ್’ ಅಂತ ಶೀರ್ಷಿಕೆ ಫೈನಲ್ ಮಾಡಿದೆ. ಬಾದ್‍ಷಾ ಬರ್ತ್‍ಡೇಗೆ ವಿಶೇಷವಾಗಿ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಸುದೀಪಿಯನ್ಸ್ ಗೆ ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳಿಗೆ ಕಿಕ್ ಕೊಟ್ಟಿದೆ. ಯೂಟ್ಯೂಬ್‍ನಲ್ಲಿ `ಮ್ಯಾಕ್ಸ್’ ಟೀಸರ್‍ನ ಪ್ರೇಕ್ಷಕರು ಮುಗಿಬಿದ್ದು ನೋಡ್ತಿದ್ದು ಈಗಾಗಲೇ ವೀವ್ಸ್ ಮಿಲಿಯನ್ ಕ್ರಾಸ್ ಆಗಿದೆ.
‘ಮ್ಯಾಕ್ಸ್’ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣದಿಂದಲೇ ಎಲ್ಲಾ ಭಾಷೆಗಳಿಗೂ ಹೊಂದಾಣಿಕೆ ಆಗುವಂಥ ಶೀರ್ಷಿಕೆಯನ್ನು ನೀಡಲಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ‘ಸಾಕಷ್ಟು ವಾಹನಗಳಲ್ಲಿ ವೆಪನ್ ತೆಗೆದುಕೊಂಡು ಬರಲಾಗುತ್ತಿದೆ’ ಎಂದು ಪೊಲೀಸರಿಗೆ ಮಾಹಿತಿ ಬರುತ್ತದೆ. ಆದರೆ, ಇದಕ್ಕೆ ಪೊಲೀಸರು ಹೆದರಲ್ಲ. ಏಕೆಂದರೆ ಅವರ ಬಳಿ ಮ್ಯಾಕ್ಸ್ ಇದ್ದಾನೆ.
‘ಬರುವವರು ಜ್ವಾಲಾಮುಖಿಯಿಂದ, ಚಂಡಮಾರುತದಿಂದ, ಭೂಕಂಪದಿಂದ, ಸುನಾಮಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ರ ಸಿಕ್ಕಿಬಿದ್ದರೆ ಸಾವೇ ಇಲ್ಲ ಎಂದು ವರ ಪಡೆದು ಹುಟ್ಟಿದವನಿಗೂ ಸಾವು ಗ್ಯಾರಂಟಿ’ ಎನ್ನುತ್ತಾರೆ ಪೊಲೀಸರು. ಬಳಿಕ ಸುದೀಪ್ ಲಾಟಿ ಹಿಡಿದು ಬರುತ್ತಾರೆ . ಈ ಮೂಲಕ ಮತ್ತೊಮ್ಮೆ ತೆರೆಮೇಲೆ ಸುದೀಪ್ ಪೊಲೀಸ್ ಆಗಿ ಬರುವ ಸೂಚನೆ ನೀಡಿದ್ದಾರೆ. ಅಂದ್ಹಾಗೇ, ಕಿಚ್ಚನಿಗೆ ಸೂಪರ್ ಕಾಪ್ ಪಾತ್ರ ಚೆನ್ನಾಗಿ ಹೊಂದುತ್ತದೆ. ‘ಕೆಂಪೇಗೌಡ’, ‘ವರದನಾಯಕ’, ‘ಕಬ್ಜ’ ಸಿನಿಮಾಗಳಲ್ಲಿ ಸುದೀಪ್ ಅವರು ಖಾಕಿ ಕೊಟ್ಟು ಖದರ್ ತೋರಿಸಿದ್ದಾರೆ. ಈಗ ಅವರು ‘ಮ್ಯಾಕ್ಸ್’ ಚಿತ್ರಕ್ಕಾಗಿ ಮತ್ತೆ ಖಾಕಿ ತೊಡುವ ಸುಳಿವು ನೀಡಿದ್ದಾರೆ.
`ಮ್ಯಾಕ್ಸ್’ ಸಿನಿಮಾದಲ್ಲಿ ಕನ್ನಡ ಕಲಾವಿದರಿಗೆ, ತಂತ್ರಜ್ಞಾನ ಬಳಗಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಉಗ್ರಂ ಮಂಜು, ಕಾಮಿಡಿ ಖಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ವಿಜಯ್ ಚೆಂಡೂರ್, ಸುಕೃತ ವಾಗ್ಲೆ, ಸಂಯುಕ್ತ ಬೆಳವಾಡಿ, ಶ್ರೀಶಾಂತ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಕೆಜಿಎಫ್ ಆರ್ಟ್ ಡೈರೆಕ್ಟರ್ ಶಿವುಕುಮಾರ್ ಕಲಾನಿರ್ದೇಶನ, ಅಜನೀಶ್ ಬಿ. ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಸಿನಿಮಾಗಿದೆ. ಕಾಲಿವುಡ್‌ನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರ ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ವಿಜಯ್ ಕಾರ್ತಿಕೇಯ ನಿರ್ದೇಶನ ಚಿತ್ರಕ್ಕಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು,ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇದೇ ವರ್ಷ `ಕಿಚ್ಚ-46′ ತೆರೆಗಪ್ಪಳಿಸಲಿದೆ.