ಕ್ರೇಜಿಬಾಯ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಈಗ ಚುಟು ಚುಟು ಬೆಡಗಿ ಅಂತಲೇ ಫೇಮಸ್ ಆಗಿರೋ ಚಂದನವನದ ಕ್ಯೂಟ್ ಮುಖದ ನಾಯಕಿ ಆಶಿಕಾ ರಂಗನಾಥ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಪ್ರತಿವರ್ಷ ಅಭಿಮಾನಿಗಳ ಜೊತೆ ತಮ್ಮ ಬರ್ತಡೇ ಆಚರಿಸಿಕೊಳ್ತಿದ್ದ ಆಶಿಕಾ ಈ ಬಾರಿ ಹುಟ್ಟುಹಬ್ಬದ ದಿನ ತಮ್ಮ ‘ಮನೆ ಬಳಿ ಬರಬೇಡಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ‘ಕ್ಷಮಿಸಿ, ಈ ಬಾರಿಯ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಪ್ಲ್ಯಾನ್ ಮಾಡೋಣ’ ಎಂದು ಆಶಿಕಾ ರಂಗನಾಥ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸದ್ಯ ಚಂದನವನದ ಬಹು ಬೇಡಿಕೆಯ ನಟಿಯಾಗಿರೋ ನಗು ಮೊಗದ ಸುಂದರಿ ಆಶಿಕಾಗೆ ಪರಭಾಷೆಯಲ್ಲೂಆಫರ್ಸ್ ಗಳು ಬಂದಿವೆ. ಈಗಾಗಲೇ ತೆಲುಗು ಮತ್ತು ತಮಿಳಿನಲ್ಲಿ ಮೂಲಕ ಟಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲೂ ತಮ್ಮ ಮೇನಿಯಾಕ್ಕೆ ನಾಂದಿ ಹಾಡಿದ್ದಾರೆ. ನಟನೆ, ನೃತ್ಯ, ಫಿಟ್ ನೆಸ್ ಹೀಗೆ ಪ್ರತಿಯೊಂದರ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಮೀಪದಲ್ಲೇ ಇರುವ ಫೀಲ್ ಕೊಡುವ ಆಶಿಕಾ, ಈ ಬಾರಿಯ ಹುಟ್ಟು ಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಳ್ಳಲಾಗದಿದ್ದಕ್ಕೆ ಅಭಿಮಾನಿಗಳಿಗೂ ಕೊಂಚ ಬೇಸರವಾಗಿದೆ.
ಇನ್ಸ್ಟಾಗ್ರಾಮ್ ಸ್ಟೋರಿ ಯಲ್ಲಿ ‘ಎಲ್ಲರಿಗೂ ಹಾಯ್.. ಇದನ್ನು ನಾನು ತುಂಬು ಹೃದಯದ ಪ್ರೀತಿ ಮತ್ತು ನಗುವಿನಿಂದ ತಿಳಿಯುತ್ತಿದ್ದೇನೆ. ಈ ಬಾರಿ ನಾನು ಮನೆಯಲ್ಲಿ ಜನ್ಮದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮೊಂದಿಗೆ ಬರ್ತ್ಡೇ ಸೆಲೆಬ್ರೇಟ್ ಮಾಡುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮೊಂದಿಗೆ ಸೆಲೆಬ್ರೇಟ್ ಮಾಡಬೇಕು ಎಂಬುದೇ ನನ್ನ ಆಸೆ ಆಗಿತ್ತು. ಕಳೆದ ವರ್ಷ ನಿಮ್ಮ ಜೊತೆಗಿನ ಬರ್ತ್ಡೇ ಸೆಲೆಬ್ರೇಷನ್ ತುಂಬ ಚೆನ್ನಾಗಿತ್ತು. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಕ್ಷಮಿಸಿ, ಈ ಬಾರಿ ನಿಮ್ಮ ಜೊತೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಪ್ಲಾನ್ ಮಾಡೋಣ. ಈ ಬಾರಿ ನಮ್ಮ ಮನೆಗೆ ಬಂದು ಸುಮ್ಮನೆ ಕಾಯಬೇಡಿ. ಅಲ್ಲಿ ನಾನು ನಿಮಗೆ ಸಿಗುವುದಿಲ್ಲ. ಅದರ ಬದಲು ವರ್ಚುವಲ್ ಆಗಿ ಸಂಪರ್ಕದಲ್ಲಿ ಇರೋಣ. ತುಂಬ ಅದ್ಭುತವಾದ ಅಭಿಮಾನಿಗಳಾಗಿ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹವು ನನಗೆ ಖುಷಿ ನೀಡುತ್ತದೆ ಹಾಗೂ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿ ನೀಡುತ್ತದೆ. ನಿಮ್ಮೊಂದಿಗೆ ಸೆಲೆಬ್ರೇಟ್ ಮಾಡಲು ಕಾಯುತ್ತಿದ್ದೇನೆ’ ಎಂದು ಆಶಿಕಾ ರಂಗನಾಥ್ ಅವರು ಬರೆದು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಆಶಿಕಾ ರಂಗನಾಥ್ ಗೆ ತಮಿಳು ತೆಲುಗಿನಲ್ಲೂ ಅಭಿಮಾನಿಗಳಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರೋ ನಟಿಯ ಇನ್ನಷ್ಟು ಚಿತ್ರಗಳು ರಿಲೀಸ್ ಗೆ ಬಾಕಿ ಇದ್ರೆ, ಕೆಲವು ಅಧಿಕೃತ ಘೋಷಣೆಗೂ ಬ್ಯಾಲೆನ್ಸ್ ಇದೆ. 2016ರಲ್ಲಿ ತೆರೆಕಂಡ ‘ಕ್ರೇಜಿ ಬಾಯ್’ ಸಿನಿಮಾ ಮೂಲಕ ವಿನಂತಿ ಮಾಡಲಿಲ್ಲ .. ಅಂತ ಹಾಡುತ್ತಾ ಚಿತ್ರರಂಗಕ್ಕೆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ‘ಮುಗುಳುನಗೆ’ ,ಶಿವಣ್ಣನ ‘ಮಾಸ್ ಲೀಡರ್’ ಶರಣ್ ಜೊತೆ ‘ರ‍್ಯಾಂಬೋ 2’,ಅವತಾರ ಪುರುಷ ,ಅಜಯ್ ರಾವ್ ನಟನೆಯ ತಾಯಿಗೆ ತಕ್ಕ ಮಗ,ಶ್ರೀ ಮುರುಳಿ ಅಬಿನಯದ ಮದಗಜ, ರೆಮೊ‘ ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸಧ್ಯ ಪಿಆರ್ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಒ2’ ಸಿನಿಮಾದಲ್ಲೂ ಆಶಿಕಾ ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿಂಪಲ್ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅನಿ ಹೌ, ಇನ್ನೂ ಸಾಕಷ್ಟು ಆಫರ್ಸ್ ಗಳು ಈ ಚೆಂದದ ನಟಿಯ ಅರಸಿ ಬರ್ಲಿ ಅನ್ನೋ ಆಶಯದೊಂದಿಗೆ ಆಶಿಕಾ ರಂಗನಾಥ್ ರಿಗೆ ಹ್ಯಾಪಿ ಬರ್ತಡೆಯ ಶುಭ ಹಾರೈಕೆಗಳು.