Jr.NTR: ಜೂ.ಎನ್‌ಟಿಆರ್(Jr.NTR) ಅಭಿನಯದ ‘ದೇವರ’ ಸಿನಿಮಾ ದಿನದಿಂದ ದಿನಕ್ಕೆ ಸಖತ್ ಕ್ರೇಜ಼್ ಕ್ರಿಯೇಟ್ ಮಾಡುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಉತ್ತರ ಭಾರತದ ವಿತರಣೆ ಹಕ್ಕನ್ನು ದಾಖಲೆ ಮೊತ್ತಕ್ಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು ಚಿತ್ರತಂಡ. ಇದೀಗ ಟಾಲಿವುಡ್ ನೆಲದಲ್ಲೇ ಈ ಚಿತ್ರಕ್ಕಾಗಿ ಪೈಪೋಟಿ ನಡೆಯುತ್ತಿದೆ.
ಖ್ಯಾತ ನಿರ್ಮಾಪಕ ಕರಣ್ ಜೋಹಾರ್(Karan Johar) ಹಿಂದಿ ವಿತರಣೆ ರೈಟ್ಸ್ ಪಡೆದ ಬೆನ್ನಲ್ಲೆ ತವರು ನೆಲದಲ್ಲೇ ‘ದೇವರ’(Devara) ವಿತರಣೆ ರೈಟ್ಸ್ ಪಡೆಯಲು ಕಾಂಪಿಟೇಶನ್ ಜೋರಾಗಿದೆ. ದೇವರ ಸಿನಿಮಾ ಹಾಡಿನ ಚಿತ್ರಕರಣ ಹೊರತು ಪಡಿಸಿ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ. ಇದರ ನಡುವೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿದ್ದು, ಅಕ್ಟೋಬರ್ 10ಕ್ಕೆ ಸಿನಿಮಾ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿದೆ. ಈಗ ದೇವರ ಪ್ರಿರಿಲೀಸ್ ಬ್ಯುಸಿನೆಸ್ ಜೋರಾಗಿ ನಡೆಯುತ್ತಿದ್ದು ಟಾಲಿವುಡ್ ಟಾಪ್ ವಿತರಕರು ಸಿನಿಮಾ ವಿತರಣೆ ಹಕ್ಕು ಪಡೆಯಲು ರೇಸ್‌ನಲ್ಲಿದ್ದಾರೆ.
ಮೈತ್ರಿ ಮೂವೀಸ್, ಸೀತಾರ ಎಂಟಟೈನ್ಮೆಂಟ್ಸ್, ಎಸ್‌ವಿಸಿ ಸಂಸ್ಥೆ ನಡುವೆ ಪೈಪೋಟಿ ಎದ್ದಿದೆಯಂತೆ. ಮೂಲಗಳ ಪ್ರಕಾರ ಸೀತಾರ ಎಂಟಟೈನ್ಮೆಂಟ್ಸ್ ತೆಲುಗು ಡಿಸ್ಟ್ರಿಬ್ಯುಶನ್ ರೈಟ್ಸ್ ದಾಖಲೆ ಮೊತ್ತ ಕೊಟ್ಟು ಪಡೆಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗ್ತಿದ್ದು, ಸದ್ಯದಲ್ಲೇ ಚಿತ್ರತಂಡ ಕನ್ಫರ್ಮ್ ಮಾಡಲಿದೆ. ಆದ್ರೆ ತೆಲುಗಿನ ಟಾಪ್ ನಿರ್ಮಾಪಕರು ‘ದೇವರ’(Devara) ಹಿಂದೆ ಬಿದ್ದಿರೋದು ಸಿನಿಮಾದ ಕ್ರೇಜ಼್ ಹೆಚ್ಚಿಸಿರೋದಂತೂ ಸುಳ್ಳಲ್ಲ.
ಪೋಸ್ಟರ್‌ಗಳಲ್ಲಿ ಮ್ಯಾನ್ ಆಫ್ ಮಾಸಸ್ ಲುಕ್, ಕೊರಟಾಲ ಶಿವ(Koratala siva) ನಿರ್ದೇಶನದ ಗತ್ತು, ಜೂ.ಎನ್‌ಟಿಆರ್(Jr.NTR) ಫೇಮ್ ಎಲ್ಲವೂ ‘ದೇವರ’ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಚಿತ್ರದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್(Janhvi Kapoor) ನಟಿಸುತ್ತಿದ್ದು ಅಕ್ಟೋಬರ್ 10ಕ್ಕೆ ಸಿನಿಮಾ ತೆರೆ ಕಾಣುತ್ತಿದೆ.