ಕನ್ನಡದ ರ್ಯಾಪರ್ ಕಂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಸೂತ್ರಧಾರಿ’ ಸಿನಿಮಾದ ‘ಡ್ಯಾಶ್…’ ಎಂಬ ಹಾಡು ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 17 ಮಿಲಿಯನ್ ವೀಕ್ಷಣೆಯಾಗಿತ್ತು. ಅದಾದ ನಂತರ ಈಗ ಇದೇ ‘ಸೂತ್ರಧಾರಿ’ ಸಿನಿಮಾದ ಅಂಥದ್ದೇ ಮತ್ತೊಂದು ಹಾಡು ಬಿಡುಗಡೆಯಾಗಿದೆ.
‘ಸೂತ್ರಧಾರಿ’ ಸಿನಿಮಾಕ್ಕಾಗಿ ವಿಜಯ್ ಈಶ್ವರ್ ಬರೆದಿರುವ ‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು…’ ಎಂಬ ಹಾಡು ಇತ್ತೀಚೆಗೆ ಯು-ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ.
ಈ ಹಾಡಿನಲ್ಲಿ ನಾಯಕ ನಟ ಚಂದನ್ ಶೆಟ್ಟಿ ಮತ್ತು ನಾಯಕಿ ಅಪೂರ್ವಾ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಇನ್ನೊಂದು ಹಾಡು ಮುಗಿದರೆ, ‘ಸೂತ್ರಧಾರಿ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗುತ್ತದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎನ್ನುವುದು ನಟ ಚಂದನ್ ಶೆಟ್ಟಿ ಮತ್ತು ನಿರ್ಮಾಪಕ ನವರಸನ್ ಮಾತು.