ಬಿಗ್ ಬಾಸ್ ಸೀಸನ್ ನ ಖ್ಯಾತಿ ಯ ದಿವ್ಯ ಸುರೇಶ್ ಲವ್ ನಲ್ಲಿ ಬಿದ್ದಿದ್ದಾರೆ. ಎಸ್ ನಾವ್ ಹೇಳ್ತಿರೋದು,ನೀವ್ ಓದ್ತಿರೋದು ಎರಡೂ ಸತ್ಯ. ಈ ಬಗ್ಗೆ ದಿವ್ಯ ಸುರೇಶ್ ಅವರೇ ಸುಳಿವು ಕೊಟ್ಟಿದ್ದಾರೆ.ಸಧ್ಯ ತ್ರಿಪುರ ಸುಂದರಿ ದಾರಾವಾಹಿಯಲ್ಲಿ ನಟಿಸ್ತಿರೋ ದಿವ್ಯ ಸುರೇಶ್ ಕಳೆದ ವರ್ಷ ರೌಡಿ ಬೇಬಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಿಗ್ ಬಾಸ್ ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಸಖತ್ ಆಕ್ಟೀವ್ ಅಂಡ್ ಪಟ ಪಟ ಮಾತಾಡೋ ಈ ಸುಂದರಿಗೆ ಸಾಕಷ್ಟು ಅಭಿಮಾನಿ ಬಳಗ ಈ ಮೂಲಕವೂ ಹುಟ್ಟಿಕೊಂಡಿತ್ತು.
ದಿವ್ಯಾ ಸುರೇಶ್ ಈ ಹಿಂದೆ ರಾಕೇಶ್ ಅಡಿಗ ಜೊತೆ ಎಂಗೇಜ್ ಆಗಿದ್ದರು. ಕಾರಣಾಂತರಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಈ ಬಗ್ಗೆ ಈಗಾಗಲೇ ಸುದ್ದಿ ಹರಿದಾಡಿತ್ತು. ಬ್ರೇಕಪ್ ನಂತ್ರ ಇಬ್ಬರು ತಮ್ಮ ತಮ್ಮ ಲೈಫ್‌ನಲ್ಲಿ ಮೂವ್ ಆನ್ ಆಗಿದ್ದಾರೆ. ಇದೆಲ್ಲ ಗೊತ್ತಿರೋದೆ ಅಲ್ವಾ? ಹೊಸ ಬಾಯ್ ಫ್ರೆಂಡ್ ಯಾರು ಅಂತ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಇತ್ತೀಚಿಗೆ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೌದು ದಿವ್ಯಾ ಅವರ ಬಾಯ್‌ಫ್ರೆಂಡ್ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಹುಡುಗನ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನ ನಟಿ ಹಂಚಿಕೊಂಡಿಲ್ಲ. ಆದ್ರೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಹ್ಯಾಪಿ ಬರ್ತ್‌ಡೇ ಲವ್’ ಎಂದು ಗೆಳೆಯನಿಗೆ ದಿವ್ಯಾ ಶುಭಕೋರುವ ಮೂಲಕ ತಾವು ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದಾರೆ. ಇನ್ನು ಯಾವಾಗ ಅಧಿಕೃತ ವಾಗಿ ಎಂಗೇಜ್ ಆಗ್ತಾರೆ,ಮದ್ವೆ ಯಾವಾಗ ಅಂತ ಗುಡ್ ನ್ಯೂಸ್ ಕೊಡ್ತಾರೆ ಅಂತ ಕಾಯ್ತಿದ್ದಾರೆ ದಿವ್ಯಾ ಸುರೇಶ್ ಅಭಿಮಾನಿಗಳು.