Vaishnavi Gowda: ರೀಲ್ ಇರ್ಲಿ ರಿಯಲ್ ಇರ್ಲಿ ಹೆಲ್ಮೆಟ್ ಹಾಕ್ಲೇಬೇಕಪ್ಪ, ಸಿನಿಮಾನಾದ್ರು ಶೂಟ್ ಮಾಡಿ, ಸೀರಿಯಲ್ ಆದ್ರೂ ಶೂಟ್ ಮಾಡಿ, ರೂಲ್ಸ್ ಮಾತ್ರ ಫಾಲೋ ಮಾಡಿ ಅಂತಿದ್ದಾರೆ ಟ್ರಾಫಿಕ್ ಪೊಲೀಸ್. ಇದು ಸದ್ಯ ಕಿರುತೆರೆ ಖ್ಯಾತ ನಟಿ ವೈಷ್ಣವಿ ಗೌಡ(Vaishnavi Gowda)ಗೆ ಎದುರಾದ ಪರಿಸ್ಥಿತಿ.
ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಕಣ್ಣಿಗೆ ರೂಲ್ಸ್ ಬ್ರೇಕ್ ಮಾಡಿ, ಹೆಲ್ಮೆಟ್ ಹಾಕ್ದೆ ಏನಾದ್ರು ನೀವು ಸಿಕ್ಕಾಕೊಂಡ್ರೆ ಗೊತ್ತಲ್ಲ ಕಥೆ. ಅದನ್ನು ಬಿಡಿಸಿ ಹೇಳಬೇಕಿಲ್ಲ. ಆದ್ರೆ ಶೂಟಿಂಗ್ ಟೈಂನಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರೆ, ಹೆಲ್ಮೆಟ್ ಹಾಕದೇ ಇದ್ರೆ ನಡೆಯುತ್ತಾ..? ಹೀಗೊಂದು ಪ್ರಶ್ನೆ ನಿಮ್ಮನ್ನು ಎದುರಾದ್ರೆ ಇದಕ್ಕೆ ಆನ್ಸರ್ ನೊ ವೇ ಚಾನ್ಸೇ ಇಲ್ಲ.. ಇದಕ್ಕೆ ಸಾಕ್ಷಿ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ(Vaishnavi Gowda).
ಹೌದು, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ನಟಿ ವೈಷ್ಣವಿ ಗೌಡ. ಸದ್ಯ ಖಾಸಗೀವಾಹಿನಿಯ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳಾಗಿ ಮಿಂಚುತ್ತಿದ್ದಾರೆ. ಸೀತಾ ರಾಮ ಶೂಟಿಂಗ್ ವೇಳೆ ಹೆಲ್ಮೆಟ್ ಧರಿಸದೇ ಗಾಡಿಯಲ್ಲಿ ಪ್ರಯಾಣ ಮಾಡಿದಕ್ಕೆ ವೈಷ್ಣವಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ., ಶೂಟಿಂಗ್ ಸರ್ ರಿಯಲ್ ಅಲ್ಲ ಅಂತ ಅವಲತ್ತುಕೊಂಡ್ರು ಬಿಡದೇ ಪೋಲೀಸರು ರಿಯಲ್ ಆಗಿ ವೈಷ್ಣವಿಗೆ ಫೈನ್ ಹಾಕಿದ್ದಾರೆ. ಮಂಗಳೂರಿನಲ್ಲಿ ನಡೆದ ಶೂಟಿಂಗ್ ದೃಶ್ಯವನ್ನು ಸಾಮಾಜಿಕ ಹೋರಾಟಗಾರರೊಬ್ಬರು ಮೊಬೈಲ್‌ನಲ್ಲಿ ಚಿತ್ರಿಸಿ ದೂರು ದಾಖಲಿಸಿದ್ದು, ಆ ಕೇಸ್ ಬೆಂಗಳೂರಿನ ರಾಜಾಜಿನಗರಕ್ಕೆ ವರ್ಗಾವಣೆಯಾಗಿ ಬೆಂಗಳೂರು ಟ್ರಾಫಿಕ್ ಪೋಲೀಸರು ವೈಷ್ಣವಿಗೆ 500ರೂ ದಂಡ ವಿಧಿಸಿದ್ದಾರೆ. ಈ ಮೂಲಕ ಸಿನಿಮಾ, ಸೀರಿಯಲ್ ಯಾವುದೇ ಚಿತ್ರೀಕರಣವಿರಲಿ ನಿಯಮ ಪಾಲನೆಯಾಗಲೇಬೇಕೆಂಬ ಸ್ಟ್ರಾಂಗ್ ಮೆಸೇಜ್ ಪಾಸ್ ಮಾಡಿದ್ದಾರೆ.
ಇನ್ಮುಂದೆ, ಸೀರಿಯಲ್, ಸಿನಿಮಾ ಸೀನ್ ಡಿಮ್ಯಾಂಡ್ ಮಾಡುತ್ತೆ ನಂಗೆ ಹೆಲ್ಮೆಟ್ ಇಲ್ದೆ ಸೀನ್ ಬೇಕು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋ ಸೀನ್ ಬೇಕು ಅಂತ ಕ್ಯಾಮೆರಾ ಹಿಡಿದು ರೋಡ್‌ಗೆ ಇಳಿದ್ರೋ, ಟ್ರಾಫಿಕ್ ಪೋಲೀಸ್ರಾ ಕಣ್ಣಿಗೆ ಬಿದ್ರೋ ಗೊತ್ತಲ್ಲ,,, ವೈಷ್ಣವಿ(Vaishnavi Gowda)ಗೆ ಆದ ಗತಿಯೇ ಆಗೋದು.