ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Vijay Deverakonda: ವಿಜಯ್‌ ದೇವರಕೊಂಡ ನಯಾ ವರಸೆ – ರಕ್ತದ ಹಿಂದೆ ಬಿದ್ದ ರೌಡಿ ಬಾಯ್

Bharathi Javalliby Bharathi Javalli
09/05/2024
in Majja Special
Reading Time: 1 min read
Vijay Deverakonda: ವಿಜಯ್‌ ದೇವರಕೊಂಡ ನಯಾ ವರಸೆ – ರಕ್ತದ ಹಿಂದೆ ಬಿದ್ದ ರೌಡಿ ಬಾಯ್

Vijay Deverakonda: ಸೆನ್ಸೇಶನಲ್‌ ಸ್ಟಾರ್‌ ವಿಜಯ್‌ ದೇವರಕೊಂಡ(Vijay Deverakonda).. ಅರ್ಜುನ್‌ ರೆಡ್ಡಿ ಸಿನಿಮಾ ಮೂಲಕ ಸೆನ್ಸೇಶನ್‌ ಕ್ರಿಯೇಟ್‌ ಮಾಡಿದವರು. ಪೆಲ್ಲಿ ಚೂಪುಲು ಸಿನಿಮಾ ಬಂದಾಗ ಯಾರೂ ಎಂದೇ ತಿಳಿಯದ ಹುಡುಗ ಅರ್ಜುನ್‌ ರೆಡ್ಡಿ ಮೂಲಕ ಸ್ಟಾರ್‌ ಪಟ್ಟಕ್ಕೇರಿದವರು. ನಸೀಬು ಬದಲಿಸಿದ ಅರ್ಜುನ್‌ ರೆಡ್ಡಿ ಟಿಟೌನ್‌ನಲ್ಲಿ  ಸ್ಥಾನಮಾನ ತಂದುಕೊಡ್ತು. ಇದೀಗ ರೌಡಿ ಬಾಯ್ ಟ್ರೆಂಡ್‌ ಹಿಂದೆ ಓಡಲು ನಿರ್ಧರಿಸಿದ್ದಾರೆ. ಇದಕ್ಕೆ ಸಾಕ್ಷಿ ಅವ್ರ ಹೊಸ ಸಿನಿಮಾ.

ಸೆನ್ಸೇಶನ್‌ ಸ್ಟಾರ್‌, ರೌಡಿ ಬಾಯ್‌, ಅರ್ಜುನ್‌ ರೆಡ್ಡಿ ಹೀಗೆ ಅಭಿಮಾನಿಗಳಿಂದದ ಪ್ರೀತಿಯಿಂದ ಕರೆಯಿಸಿಕೊಳ್ಳೋ ನಟ ವಿಜಯ್‌ ದೇವರಕೊಂಡ(Vijay Deverakonda). ಹುಡುಗಿಯರಿಗಂತೂ ಈ ನಟನೆಂದರೇ ಎಲ್ಲಿಲ್ಲದ ಕ್ರೇಜು಼. ನಸೀಬು ಬದಲಿದ ಅರ್ಜುನ್‌ ರೆಡ್ಡಿ ಶೇಡ್‌ ಬಿಡದ ವಿಜಯ್‌ ತಮ್ಮ ಮುಂದಿನ ಸಿನಿಮಾಗಳಲ್ಲೂ ರೋಮ್ಯಾಂಟಿಕ್‌ ಹೀರೋ ಆಗಿಯೇ ತೆರೆಮೇಲೆ ಬಂದರು. ರಶ್ಮಿಕಾ ಮಂದಣ್ಣ ಜೊತೆಗೂಡಿ ನಟಿಸಿದ ಗೀತಾ ಗೋವಿಂದಂ ಮತ್ತೊಂದು ಸೆನ್ಸೇಶನಲ್‌ ಬ್ರೇಕ್‌ ತಂದು ಕೊಡ್ತು. ಗೆದ್ದೆತ್ತಿನ ಬಾಲ ಹಿಡಿದ ರೌಡಿ ಬಾಯ್‌ ಆ ತರಹದ್ದೇ ಸಿನಿಮಾಗಳಿಗೆ ಸಹಿ ಮಾಡಿದ್ರು. ಪರಿಣಾಮ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಕಮಾಯಿ ಮಾಡೋದ್ರಲ್ಲಿ ಮಂಕಾಗಿದೆ. ಡಿಯರ್‌ ಕಾಮ್ರೆಡ್‌, ವರ್ಲ್ಡ್‌ ಫೇಮಸ್‌ ಲವರ್‌, ಲೈಗರ್‌, ಖುಷಿ, ಫ್ಯಾಮಿಲಿ ಸ್ಟಾರ್‌ ಇದಕ್ಕೆಲ್ಲಾ ಸಾಕ್ಷಿ.

ರೌಡಿ ಬಾಯ್‌ ಸಿನಿಮಾಗಳ ಸಾಲು ಸೋಲು ಸ್ಟಾರ್‌ ಡಂಗೆ ಬಲವಾದ ಪೆಟ್ಟು ನೀಡಿದೆ. ಏನಪ್ಪಾ ಹೀಗಾಗ್ತಿದೆ ಎಂದು ಆಲೋಚಿಸಿ ವಿಜಿ ಹೊಸ ಆಲೋಚನೆ ಮಾಡಿದ್ದಾರೆ. ಟ್ರೆಂಡ್‌ನಲ್ಲಿ ಏನ್‌ ಆಗ್ತಿದೆ ಅದರ ಜೊತೆಗೆ ತಾನು ಹೋಗುವ ನಿರ್ಧಾರ ಮಾಡಿದ್ದಾರೆ. ಕಿಸ್ಸು- ಗಿಸ್ಸು ಸಾಕು ಅಂತೇಳಿ ಕೈಯಲ್ಲಿ ಕತ್ತಿ ಹಿಡಿಯಲು ತೀರ್ಮಾನ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಹುಟ್ಟುಹಬ್ಬದಂದೇ ಬಿಡುಗಡೆಯಾದ ನಯಾ ಸಿನಿಮಾ ಪೋಸ್ಟರ್‌ಗಳು.‌

ರಕ್ತದೋಕುಳಿಯಲ್ಲಿ ಮಿಂದ ಕತ್ತಿ ಹಿಡಿದ ನಯಾ ಸಿನಿಮಾ ಪೋಸ್ಟರ್‌ ಬಿಡುಗಡೆಯಾಗಿದೆ. ಕತ್ತಿ ನಾನೇ, ರಕ್ತ ನನ್ನದೇ, ಯುದ್ದ ನನ್ನೊಂದಿಗೆ ಎಂದಿರುವ ಪೋಸ್ಟರ್‌ ವಿಜಯ್‌(Vijay Deverakonda) ಸದ್ಯದ ಪರಿಸ್ಥಿತಿಗೂ ಆಫ್ಟ್‌ ಆಗಿದೆ. ಇದರ ಜೊತೆಗೆ ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣದ ಹೊಸ ಸಿನಿಮಾಗೂ ರೌಡಿ ಬಾಯ್‌ ಓಕೆ ಎಂದಿದ್ದಾರೆ. ಈ ಸಿನಿಮಾ ಪೋಸ್ಟರ್‌ ಕೂಡ ಡಿಫ್ರೆಂಟ್‌ ಆಗಿದ್ದು, ‘ದಿ ಲೆಜೆಂಡ್‌ ಆಫ್‌ ದಿ ಕರ್ಸಡ್‌ ಲ್ಯಾಂಡ್‌’ ಎಂದಿರುವ ಫೋಸ್ಟರ್‌ ಐತಿಹಾಸಿಕ ಸಿನಿಮಾದ ಕುರುಹ ನೀಡಿದೆ.

ಹೊಸ ಪಯಣ ಆರಂಭಿಸಿರುವ ವಿಜಯ್‌ ಶತಾಯ ಗತಾಯ ಗೆಲುವಿನ ಹಂಬಲದಲ್ಲಿದ್ದಾರೆ. ಅದಕ್ಕಾಗಿ ಟ್ರೆಂಡ್‌ ಜೊತೆ ಸಾಗುವ ನಿರ್ಧಾರ ಮಾಡಿ ದಿಕ್ಕು ಬದಲಿದ್ದಾರೆ. ಈ ಎರಡೂ ಪ್ಯಾನ್‌ ಇಂಡಿಯಾ ಸಿನಿಮಾಗಳು ದೇವರಕೊಂಡಗೆ ರೀಬರ್ತ್‌ ನೀಡುತ್ತಾ ಕಾದು ನೋಡ್ಬೇಕು.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Rashmika Mandanna:  ದೀಪಿಕಾ ಅಲ್ಲ‌ ರಶ್ಮಿಕಾ ‘ಸಿಕಂದರ್‌’ ನಟಿ – ಸಲ್ಮಾನ್‌ ಜೋಡಿಯಾದ ನ್ಯಾಶನಲ್‌ ಕ್ರಶ್‌

Rashmika Mandanna: ದೀಪಿಕಾ ಅಲ್ಲ‌ ರಶ್ಮಿಕಾ ‘ಸಿಕಂದರ್‌’ ನಟಿ - ಸಲ್ಮಾನ್‌ ಜೋಡಿಯಾದ ನ್ಯಾಶನಲ್‌ ಕ್ರಶ್‌

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.