Upendra: ಉಪೇಂದ್ರ ಅಭಿಮಾನಿಗಣಕ್ಕೆ, ಸಿನಿಮಾ ಭಕ್ತರಿಗೆ ನಾಳೆ ಬಹಳ ಪ್ರಿಯವಾದ ದಿನ. ಕಾರಣ ರಿಯಲ್ ಸ್ಟಾರ್ ಉಪೇಂದ್ರೆ. ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ ‘A’ ಸಿನಿಮಾ ನಾಳೆ ರಾಜ್ಯಾದ್ಯಂತ ಮರು ಬಿಡುಗಡೆಯಾಗ್ತಿದೆ. ಈ ಮೂಲಕ ಚಿತ್ರರಂಗದಲ್ಲಿ ಚರಿತ್ರೆ ಸೃಷ್ಟಿಸಿದ ‘ಎ’ ಸಿನಿಮಾ ಹೊಸ ಟೆಕ್ನಾಲಜಿಯೊಂದಿಗೆ ಬರ್ತಿದೆ.
ಚಿತ್ರರಂದದಲ್ಲಿ ಸಿನಿಮಾಗಳ ಮರು ಬಿಡುಗಡೆ ಪರ್ವ ಆರಂಭವಾಗಿದೆ. ಜಾಕಿ ಸಿನಿಮಾ ಮರು ಬಿಡುಗಡೆಯಾಗಿ ದಾಖಲೆ ಬರೆದ ಬೆನ್ನಲ್ಲೇ ನಿರ್ಮಾಪಕರು ಸೂಪರ್ ಹಿಟ್ ಸಿನಿಮಾಗಳ ಮರು ಬಿಡುಗಡೆಗೆ ಆರಂಭಿಸಿದ್ದಾರೆ. ಉಪೇಂದ್ರ(Upendra) ಹಾಗೂ ತಂಡ ಕೂಡ ಈ ಟ್ರೆಂಡ್‌ಗೆ ಸಾಥ್ ನೀಡಿದ್ದು ‘ಎ’ ಸಿನಿಮಾವನ್ನು ಹೊಸ ತಾಂತ್ರಿಕ ಸ್ಪರ್ಶದೊಂದಿಗೆ ತೆರೆ ಮೇಲೆ ತರ್ತಿದೆ. ನಾಳೆ ಮರು ಬಿಡುಗಡೆಯಾಗ್ತಿರುವ ‘ಎ’ ಸಿನಿಮಾ ನೋಡಲು ಅದೆಷ್ಟೋ ಭಕ್ತಗಣ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಚಿತ್ರದ ನಾಯಕಿ ಕೂಡ ಈ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.
‘ಎ’ ಚಿತ್ರದ ಮೂಲಕ ಕನ್ನಡಿಗರ ಮನಸ್ಸಿಗೆ ಲೂಟಿ ಇಟ್ಟ ನಟಿ ಚಾಂದಿನಿ(Chanadhini). ಮೊದಲ ಸಿನಿಮಾದ ಭರ್ಜರಿ ಯಶಸ್ಸು, ಕೀರ್ತಿ, ಅಭಿಮಾನ ಎಲ್ಲವೂ ನಾಯಕಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿತ್ತು. ಆ ಪ್ರೀತಿ, ಅಭಿಮಾನವನ್ನು ಇನ್ನೂ ಮರೆತಿಲ್ಲ ನಟಿ. ‘ಎ’ ಸಿನಿಮಾ ನನ್ನ ಬದುಕಿನ ಚಿತ್ರಣ ಬದಲಿಸಿತು. ಈ ಚಿತ್ರದಲ್ಲಿರುವ ‘ಗಾಡ್ ಈಸ್ ಗ್ರೇಟ್’ ಡೈಲಾಗ್ ಸ್ಮರಿಸಿರುವ ಚಾಂದಿನಿ ಆ ಡೈಲಾಗ್‌ನಂತೆ ದೇವರ ಆಶೀರ್ವಾದವೂ ಸಿಕ್ಕಿದೆ. ನಾನು ಇವತ್ತಿಗೂ ‘ಎ’ ಚಾಂದಿನಿ ರೀತಿಯಲ್ಲೇ ಇದ್ದೀನಿ. ಎಲ್ಲಾ ಕಾಲಘಟ್ಟವನ್ನು ಮೀರಿದ ಒಂದು ಅಪ್ರತಿಮ ಪ್ರೇಮಕಥೆ ಈ ಸಿನಿಮಾ ಎಂದಿದ್ದಾರೆ. ಉಪೇಂದ್ರ(Upendra) ಒಬ್ಬ ಪ್ರಬುದ್ದ ನಿರ್ದೇಶಕ ಎಂದು ಬಣ್ಣಿಸಿದ್ದಾರೆ.