ಶುಕ್ರವಾರ, ಜುಲೈ 4, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Mahesh Babu: ‘ವೀರ ಮದಕರಿ’ಯ ಬಾಲನಟಿ ಚಿತ್ರರಂಗಕ್ಕೆ ಎಂಟ್ರಿ – ಮಹೇಶ್‌ ಬಾಬು ಚಿತ್ರಕ್ಕೆ ‘ಜೆರುಶಾ’ ನಾಯಕಿ

Bharathi Javalliby Bharathi Javalli
16/04/2024
in Majja Special
Reading Time: 1 min read
Mahesh Babu: ‘ವೀರ ಮದಕರಿ’ಯ ಬಾಲನಟಿ ಚಿತ್ರರಂಗಕ್ಕೆ ಎಂಟ್ರಿ – ಮಹೇಶ್‌ ಬಾಬು ಚಿತ್ರಕ್ಕೆ ‘ಜೆರುಶಾ’ ನಾಯಕಿ

Mahesh Babu: ಆಕಾಶ್‌, ಅರಸು ಸಿನಿಮಾ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಮಹೇಶ್‌ ಬಾಬು (Mahesh Babu) ಹೊಸ ಸಿನಿಮಾವೊಂದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ವೀರ ಮದಕರಿಯ ಬಾಲನಟಿ ಇವರ ಸಿನಿಮಾ ನಾಯಕಿಯಾಗಿ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ತಮ್ಮ ಸಿನಿಮಾಗಳ ಮೂಲಕ ಹೊಸ ನಾಯಕನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಮಹೇಶ್‌ ಬಾಬು (Mahesh Babu)ಅವರದ್ದು. ‘ಮೆರವಣಿಗೆ’ ಸಿನಿಮಾ ಮೂಲಕ ಐಂದ್ರಿತಾ ರೈ(Aindhrita Ray), ‘ಕ್ರೇಜಿ಼ಬಾಯ್‌’ ನಲ್ಲಿ ಆಶಿಕಾ ರಂಗನಾಥ್‌(Ashika Ranganath), ‘ಚಿರು’ ಚಿತ್ರದಲ್ಲಿ ಕೃತಿ ಕರಬಂಧ(Kriti Kharbhanda), ‘ಅಜಿತ್‌’ ಮೂಲಕ ನಿಕ್ಕಿ ಗಲ್ರಾನಿ(Nikki Galrani)ಯನ್ನು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸಿದ ಲಕ್ಕಿ ಹ್ಯಾಂಡ್ ದಿನೇಶ್‌ ಬಾಬು‌. ಇವರೆಲ್ಲರೂ ಈಗ ಚಿತ್ರರಂಗದಲ್ಲಿ ಸ್ಟಾರ್‌ ನಟಿಯರಾಗಿ ಹೆಸರು ಮಾಡಿದ್ದಾರೆ. ಇದೀಗ ತಮ್ಮ ನೂತನ ಸಿನಿಮಾ ಮೂಲಕ ಮತ್ತೋರ್ವ ನಾಯಕಿಯನ್ನು ಚಿತ್ರರಂಕ್ಕೆ ಪರಿಚಯಿಸುತ್ತಿದ್ದಾರೆ.

ಕಿಚ್ಚ ಸುದೀಪ ಅಭಿನಯದ ‘ವೀರ ಮದಕರಿ’(Veera Madakari) ಚಿತ್ರದಲ್ಲಿ ಕಿಚ್ಚನ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಬಾಲನಟಿ ಎಲ್ಲರಿಗೂ ಗೊತ್ತಿರುತ್ತೆ. ಆ ಬಾಲನಟಿಯೇ ದಿನೇಶ್‌ ಬಾಬು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆಕೆ ಹೆಸರು ಜೆರುಶಾ ಕ್ರಿಸ್ಟೋಫರ್(Jerusha Christopher)). ದಿನೇಶ್‌ ಬಾಬು ಕಿರುತೆರೆ ನಟ ಕಂ ಡಾನ್ಸರ್ ಸ್ಮೈಲ್‌ ಗುರು ರಕ್ಷಿತ್‌(Smiliguru Rakshith)ಗೆ‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಯೂತ್‌ ಫುಲ್‌ ರೋಮ್ಯಾಂಟಿಕ್‌ ಸಬ್ಜೆಕ್ಟ್‌ ಒಳಗೊಂಡ ಈ ಚಿತ್ರದಲ್ಲಿ ರಕ್ಷಿತ್‌ ಜೊತೆ ನಾಯಕಿಯಾಗಿ ಜೆರುಶಾ ಸ್ಕ್ರೀನ್‌ ಶೇರ್‌ ಮಾಡುತ್ತಿದ್ದಾರೆ.

ಅನುಭವಿ ನಿರ್ದೇಶಕರು ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿ ನಯಾ ಪ್ರೇಮ್‌ ಕಹಾನಿಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಸಿನಿಮಾ ಟೈಟಲ್‌ ರಿವೀಲ್‌ ಆಗಲಿದೆ. ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನವಿರುವ ಚಿತ್ರ ಮೇನಲ್ಲಿ ಶೂಟಿಂಗ್‌ ಆರಂಭಿಸಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Kannappa: ‘ಕಣ್ಣಪ್ಪ’ನಿಗಾಗಿ ಹೈದ್ರಾಬಾದ್‌ ಬಂದ ಬಿಟೌನ್‌ ಸ್ಟಾರ್- ತೆಲುಗು ಚಿತ್ರರಂಗಕ್ಕೆ ಅಕ್ಷಯ್‌ ಕುಮಾರ್ ಎಂಟ್ರಿ

Kannappa: 'ಕಣ್ಣಪ್ಪ'ನಿಗಾಗಿ ಹೈದ್ರಾಬಾದ್‌ ಬಂದ ಬಿಟೌನ್‌ ಸ್ಟಾರ್- ತೆಲುಗು ಚಿತ್ರರಂಗಕ್ಕೆ ಅಕ್ಷಯ್‌ ಕುಮಾರ್ ಎಂಟ್ರಿ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.