Vicky Kaushal: ವಿಕ್ಕಿ ಕೌಶಾಲ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಛಾವಾ’(Chaava)….ಛತ್ರಪತಿ ಸಾಂಭಜಿ ಮಹಾರಾಜ ಪಾತ್ರಕ್ಕೆ ಈ ಚಿತ್ರದಲ್ಲಿ ಜೀವ ತುಂಬಲಿದ್ದು. ಛತ್ರಪತಿ ಸಾಂಭಜಿ ಮಹಾರಾಜ ಲುಕ್‌ನಲ್ಲಿರುವ ವಿಕ್ಕಿ(Vicky Kaushal) ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಲಕ್ಷಣ್ ಉಟೆಕಾರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಐತಿಹಾಸಿಕ ಸಿನಿಮಾ ‘ಛಾವಾ’(Chaava). ಬಿಟೌನ್ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಸದಾ ಎಕ್ಸ್‌ಪಿರಿಮೆಂಟ್ ಸಿನಿಮಾಗಳ ಭಾಗವಾಗುವ, ಪ್ರತಿ ಸಿನಿಮಾದಲ್ಲಿ ವಿಭಿನ್ನತೆಗೆ ಹಾತೊರೆಯವ ನಟ ವಿಕ್ಕಿ ಕೌಶಾಲ್(Vicky Kaushal) ಈ ಚಿತ್ರದ ನಾಯಕನಟ. ಛತ್ರಪತಿ ಸಾಂಭಜಿ ಮಹಾರಾಜನ ಜೀವನಗಾಥೆಯನ್ನು ತೆರೆದಿಡುವ ಈ ಚಿತ್ರಕ್ಕೆ ವಿಕ್ಕಿ ಕೌಶಾಲ್ ಮೈ ಹುರಿಗೊಳಿಸಿ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ಲುಕ್, ಗೆಟಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಥೇಟ್ ಸಾಂಭಜಿ ಮಹಾರಾಜನೇ ಆಗಿದ್ದಾರೆ ಉರಿ ನಟ. ಸದ್ಯ ಫೋಟೋಗಳು ವೈರಲ್ ಆಗಿದ್ದು, ವಿಕ್ಕಿ ಡೆಡಿಕೇಶನ್‌ಗೆ ಶಬ್ಬಾಸ್ ಹೇಳುತ್ತಿದ್ದಾರೆ ಫ್ಯಾನ್ಸ್.
ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಡಿಸೆಂಬರ್ 6ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಐತಿಹಾಸಿಕ ಸಿನಿಮಾದಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ವಿಕ್ಕಿ ಕುಶಾಲ್(Vicky Kaushal) ಜೊತೆ ಸ್ಕ್ರೀನ್ ಶೆರ್ ಮಾಡ್ತಿದ್ದಾರೆ. ರಶ್ಮಿಕಾ ಕೆರಿಯರ್‌ಗೆ ಹೊಸ ಇಮೇಜ್ ತಂದುಕೊಡುವ ಸಿನಿಮಾ ಇದಾಗಿದ್ದು, ರಶ್ ‘ಯೇಸುಬಾಯಿ ಬೋನ್ಸಾಲೆ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಂಭಜಿ ಮಹಾರಾಜ ಪತ್ನಿ ಪಾತ್ರಕ್ಕೆ ಜೀವ ತುಂಬಿರುವ ರಶ್ಮಿಕಾ ಇತ್ತೀಚೆಗಷ್ಟೇ ತಮ್ಮ ಭಾಗದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದಾರೆ.