Vidya Balan: ಬಾಲಿವುಡ್ ಚಿತ್ರರಂಗ, ಬಾಲಿವುಡ್ ಸಿನಿಮಾ ಅಂತ ಬಂದ್ರೆ ಅದರ ಜೊತೆಗೆ ತಳುಕು ಹಾಕಿಕೊಂಡ ಒಂದು ಪದ ‘ನೆಪೋಟಿಸಂ’. ಎಲ್ಲೇ ಹೋದ್ರು ಪ್ರತಿ ಬಾರಿ ಈ ವಿಚಾರಕ್ಕೆ ಸ್ಟಾರ್ ನಟ-ನಟಿಯರ ಮಕ್ಕಳು ಪ್ರಶ್ನಿಸಲ್ಪಡುತ್ತಾರೆ. ಆಗಾಗ ಈ ಪ್ರಶ್ನೆಗೆ ಸ್ಟಾರ್ ನಟ-ನಟಿಯರು ಕೊಟ್ಟ ಉತ್ತರಗಳು ʼನೆಪೋಟಿಸಂʼ ಪದದಷ್ಟೇ ಸೌಂಡ್ ಮಾಡಿವೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ವಿದ್ಯಾ ಬಾಲನ್(Vidya Balan).
ವಿದ್ಯಾಬಾಲನ್ ಬಿಟೌನ್(Vidya Balan) ಖ್ಯಾತ ನಟಿ. ಪ್ರತಿ ಬಾರಿ ಡಿಫ್ರೆಂಟ್ ಸಬ್ಜೆಕ್ಟ್ ಸಿನಿಮಾ ಕೈಗೆತ್ತಿಕೊಳ್ಳೊ ಈ ನಟಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಜೀವ ತುಂಬುತ್ತಾ ಸಕ್ಸಸ್ ಕಂಡವರು. ಬಿಟೌನ್‌ನಲ್ಲಿ ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ಡರ್ಟಿ ಪಿಕ್ಚರ್ ಬೆಡಗಿ ‘ನೆಪೋಟಿಸಂ’ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ʼನೆಪೋಟಿಸಂ ಇರ್ಲಿ, ಇರ್ದೇ ಇರಲಿ ನಾನಂತೂ ಇಲ್ಲೇ ಇದ್ದೇನೆ. ಇಂಡಸ್ಟ್ರೀ ಯಾರಪ್ಪನ ಸ್ವತ್ತಲ್ಲ. ಒಂದು ವೇಳೆ ಹಾಗಾಗಿದ್ರೆ ಎಲ್ಲಾ ಸ್ಟಾರ್ ಮಕ್ಕಳ ಸಿನಿಮಾಗಳು ಸೂಪರ್ ಹಿಟ್ ಆಗಬೇಕಿತ್ತುʼ ಎಂದು ಖಾರವಾಗಿ ಪ್ರತಿಕ್ರಿಯೆಸಿದ್ದಾರೆ.
‘ನಾನು ನನ್ನ ಕೆಲಸಗಳನ್ನು ಸಂತೋಷದಿಂದ ಮಾಡಿಕೊಂಡು ಹೋಗುತ್ತಿದ್ದೇನೆ. ಕೆಲ ಹಂತಗಳಲ್ಲಿ ನನಗೂ ರಕ್ಷಣೆ ಇದ್ದಿದ್ದರೆ ಕೆಲವರು ನನ್ನ ಮೇಲೆ ದಯೆ ತೋರುತ್ತಿದ್ದರು ಎಂದು ಅನಿಸಿದ ಸಂದರ್ಭಗಳಿದೆ. ಆದರೆ ಸಿನಿಮಾ ಅವಕಾಶಗಳ ವಿಚಾರದಲ್ಲಿ ಹಾಗಾಗಿಲ್ಲ, ನನಗೆ ಸಿಗಬೇಕಾದ ಸಿನಿಮಾಗಳನ್ನು ನಿರಾಕರಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ನಾನು ಭಾವಿಸಿದ್ದೇನೆ’ ಎಂದಿದ್ದಾರೆ ವಿದ್ಯಾಬಾಲನ್(Vidya Balan).