ಟಾಲಿವುಡ್ ಸ್ಟಾರ್ ವಿಜಯ್ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಇದೀಗ ಇವರಿಬ್ಬರು ಎಂಗೇಜ್ ಆಗುವ ಕುರಿತಾಗಿ ಸುದ್ದಿಯೊಂದು ಹೊರಬಿದ್ದಿದೆ. ಫೆಬ್ರವರಿ ಎರಡನೇ ವಾರದಲ್ಲಿ ಗೀತಗೋವಿಂದಂ ಜೋಡಿಯ ನಿಶ್ಚಿತಾರ್ಥ ನೆರವೇರುವ ಬಗ್ಗೆ ತಾಜಾ ಸಮಾಚಾರವೊಂದು ಕೇಳಿಬಂದಿದೆ. ಅಷ್ಟಕ್ಕೂ, ಈ ಸುದ್ದಿನಾ ನಿಜಾನಾ ಅಥವಾ ಗಲ್ಲಿ ಗಾಸಿಪ್ಪೋ ಗೊತ್ತಿಲ್ಲ. ಆದರೆ, ಸೌತ್-ನಾರ್ತ್ ಸಿನಿದುನಿಯಾ ತುಂಬೆಲ್ಲಾ ಹೀಗೊಂದು ರೂಮರ್ ಹಬ್ಬಿದೆ. ಇದಕ್ಕೆ ವಿಜಯ್ ಆಗ್ಲೀ, ರಶ್ಮಿಕಾ ಆಗ್ಲೀ ಪ್ರತಿಕ್ರಿಯಿಸಿಲ್ಲ. ಅಷ್ಟಕ್ಕೂ, ಇಲ್ಲಿವರೆಗೂ ಈ ಜೋಡಿ ನಾವಿಬ್ಬರು ಜಸ್ಟ್ ಫ್ರೆಂಡ್ಸ್… ಜಸ್ಟ್ ಫ್ರೆಂಡ್ಸ್ ಅಂತೇಳುತ್ತಲೇ ಮುನ್ನಡೆದಿದ್ದಾರೆ. ಆದರೆ, ಈ ಕ್ಯೂಟ್ ಕಪಲ್ಸ್ ನಡುವಿನ ಒಡನಾಟ ನೋಡಿದರೆ ಇವರಿಬ್ಬರು ಬರೀ ಸ್ನೇಹಿತರಾಗಿ ಉಳಿದಿಲ್ಲ ಅನ್ನೋ ಪ್ರಶ್ನೆ ಕಾಡೋದಂತೂ ಸಹಜ.
ಇನ್ನೂ ಇತ್ತೀಚೆಗಷ್ಟೇ ಈ ಜೋಡಿ ಬಗ್ಗೆ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ವಿಜಯ್ ಹಾಗೂ ರಶ್ಮಿಕಾ ಮದುವೆಯಾದರೆ ಡಿವೋರ್ಸ್‌ಗ್ಯಾರಂಟಿ ಎಂದಿದ್ದರು. ಹೌದು, ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ವೇಣು ಸ್ವಾಮಿ, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ. ಅವರಿಬ್ಬರು ವಿವಾಹ ಆಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ. ಇದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಮಂದಣ್ಣ ಸಮಾಜಕ್ಕೆ ನಾಯಕಿ ಆಗಿರಬಹುದು ಆದರೆ ನನಗೆ ಕೇವಲ ಕ್ಲೈಂಟ್ ಅಷ್ಟೆ. ಅವರ ಜನಪ್ರಿಯತೆ ನೋಡಿ ನಾನು ಭವಿಷ್ಯ ಹೇಳುವುದಿಲ್ಲ, ಅವರ ಗ್ರಹಗತಿ ನೋಡಿ ಭವಿಷ್ಯ ಹೇಳುತ್ತೇನೆ. ನಾನು ಹೇಳಿದ ನಿಜ ಅವರಿಗೆ ಹಿಡಿಸಲಿಲ್ಲ, ಇರಲಿ ಪರವಾಗಿಲ್ಲ, ಆದರೆ ಅವರಿಬ್ಬರು ಮದುವೆಯಾಗಿ ದೂರಾಗುವುದು ಖಚಿತ ಎಂದು ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ಮುಕ್ತವಾಗಿ ಮಾತನಾಡಿದ್ದರು.
ವೇಣು ಸ್ವಾಮಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂತಲೇ ಫೇಮಸ್. ಇಲ್ಲಿತನಕ ಯಾವೆಲ್ಲಾ ಸೆಲೆಬ್ರಿಟಿಗಳ ಬಗ್ಗೆ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೋ ಅದೆಲ್ಲವೂ ನಿಜವಾಗಿದೆ. ಅವರ ನುಡಿದಂತೆಯೇ ಹಲವು ತಾರೆಯರ ಬದುಕು ಸಾಗುತ್ತಿದೆ. ಹೌದು, ಸಮಂತಾ-ನಾಗಚೈತನ್ಯ ಪ್ರೀತಿಸಿ ಮದುವೆಯಾದ್ರೂ ಕೂಡ ವಿಚ್ಛೇದನ ಪಡೀತಾರೆ ಅಂತ ಭವಿಷ್ಯ ನುಡಿದಿದ್ದರು. ಬಾಹುಬಲಿ ಆದ್ಮೇಲೆ ಪ್ರಭಾಸ್ ಸೋಲಿನ ಸುಳಿಗೆ ಸಿಲುಕಿ ಒದ್ದಾಡ್ತಾರೆ ಎಂದಿದ್ದರು. ನರೇಶ್ ಹಾಗೂ ಪವಿತ್ರ ಲೋಕೇಶ್ ಮದುವೆ ಬಗ್ಗೆಯೂ ಮೊದಲೇ ತಿಳಿಸಿದ್ದರು. ಇತ್ತೀಚೆಗೆ ವಿಜಯ್ ಹಾಗೂ ರಶ್ಮಿಕಾ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಅಂತ ಹೇಳಿಕೆ ಕೊಟ್ಟಿದ್ದಾರೆ. ಈ ಮಧ್ಯೆ ಟಿಟೌನ್ ಫಿಲ್ಮ್ ನಗರದಲ್ಲಿ ಲಿಲ್ಲಿ-ಬಾಬಿ ಫೆಬ್ರವರಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳೋಕೆ ಸಿದ್ದತೆ ನಡೆಸಿದ್ದಾರೆ ಅಂತ ಸುದ್ದಿ ಓಡಾಡ್ತಿದೆ.
ಸದ್ಯ, ರಶ್ಮಿಕಾ ಅನಿಮಲ್ ಸಿನಿಮಾ ಮೂಲಕ ದೊಡ್ಡ ಸಕ್ಸಸ್ ಕಂಡು ಬೀಗುತ್ತಿದ್ದಾರೆ. ನ್ಯಾಷನಲ್ ಕ್ರಷ್ ಆಗಿ ಕೇಕೆ ಹೊಡೆಯುತ್ತಿರೋ ಕಿರಿಕ್ ಬ್ಯೂಟಿಗೆ ಅದೃಷ್ಟ ಮತ್ತೆ ಕೈ ಹಿಡಿದಿದೆ. ಬಾಲಿವುಡ್ ಅಂಗಳದಲ್ಲಿ ನೆಲೆ ಕಂಡುಕೊಳ್ಳೋಕೆ ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸಾಥ್ ಕೊಟ್ಟಿದೆ. ಸದ್ಯ ಸಾನ್ವಿ ಪುಷ್ಪ ಪಾರ್ಟ್2 ನಲ್ಲಿ ತೊಡಗಿಸಿಕೊಂಡಿದ್ದಾಳೆ. ಇದರ ಜೊತೆಗೆ ರೈನೋ ಹಾಗೂ ದಿ ಗರ್ಲ್‌ಫ್ರೆಂಡ್‌ಸಿನಿಮಾ ಕೂಡ ಶ್ರೀವಲ್ಲಿ ಕೈಯಲ್ಲಿವೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ಚಮಕ್ ಚೆಲುವೆ, ವೈಯಕ್ತಿಕ ಜೀವನದ ಕಡೆ ಗಮನ ಕೊಡಲು ಶುರುಮಾಡಿದ್ರಾ? ವಲ್ರ್ಡ್ ಫೇಮಸ್ ಲವ್ವರ್ ವಿಜಯ್‍ನ ಲೈಫ್ ಪಾರ್ಟನರ್ ಆಗಿ ಬರಮಾಡಿಕೊಳ್ಳಲು ಸಜ್ಜಾದ್ರಾ ? ಫೆಬ್ರವರಿ ಸೆಕೆಂಡ್ ವೀಕ್‍ವರೆಗೂ ಕಾದು ನೋಡಬೇಕು