Vijay Deverakonda: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಹಾಗೂ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ(Vijay Deverakonda) ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಸಿನಿ ದುನಿಯಾದಲ್ಲಿ ಕೇಳಿ ಬರ್ತಿದೆ. ಈ ಸುದ್ದಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಸುಳಿದಾಡುತ್ತಿದ್ದರು ಈ ಜೋಡಿ ಮಾತ್ರ ಕ್ಯಾರೆ ಅಂತಿಲ್ಲ. ಇದೀಗ ವಿಜಯ್ ದೇವರಕೊಂಡ ದುಬೈ ಪಯಣ ಮತ್ತದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಏಪ್ರಿಲ್ 5 ರಶ್ಮಿಕಾ ಮಂದಣ್ಣ(Rashmika Mandanna) ಹುಟ್ಟುಹಬ್ಬ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ ನ್ಯಾಶನಲ್ ಕ್ರಶ್. ರಶ್ ಬರ್ತ್‌ಡೇ ಸೆಲೆಬ್ರೆಶನ್‌ಗೆ ಹಾಜರ್ ಆಗಲು ವಿಜಯ್ ದೇವರಕೊಂಡ(Vijay Deverakonda) ಕೂಡ ದುಬೈ ಫ್ಲೈಟ್ ಹತ್ತಿದ್ದಾರೆ ಎನ್ನಲಾಗ್ತಿದೆ. ಟಾಲಿವುಡ್ ಅಂಗಳದಲ್ಲಿ ಈ ಸುದ್ದಿ ಬಲವಾಗಿ ಕೇಳಿ ಬರ್ತಿದ್ದು, ಈಗಾಗಲೇ ವಿಜಯ್ ದೇವರಕೊಂಡ ದುಬೈನತ್ತ ಪಯಣ ಬೆಳೆಸಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಪಸರ್ ಆದಲಿಂದ ರಶ್, ವಿಜಯ್ ಕಾದಲ್ ವಿಚಾರವೂ ಚಾಲ್ತಿಯಲ್ಲಿದ್ದು, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಲೆಕ್ಕಾಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಸಿನಿಮಾ ಸಂದರ್ಶನದ ವೇಳೆ ʻಫ್ಯಾಮಿಲಿ ಸ್ಟಾರ್ʼ ಸಿನಿಮಾ ಏಪ್ರಿಲ್ 5ರಂದು ಬಿಡುಗಡೆಯಾಗುತ್ತಿದೆ ಅಂದೇ ರಶ್ಮಿಕಾ ಹುಟ್ಟುಹಬ್ಬ ಕೂಡ ಇದೆ ಎಂದು ಕೇಳಿದಕ್ಕೆ ವಿಜಯ್(Vijay Deverakonda)ʻಲಕ್ಕಿʼ ಎಂದು ಉತ್ತರ ನೀಡಿದ್ದಾರೆ. ಇತ್ತ ʻಫ್ಯಾಮಿಲಿ ಸ್ಟಾರ್́(Family Star) ಬಿಡುಗಡೆ ದಿನವೇ ವಿಜಯ್ ದುಬೈ ಹಾರಿದ್ದಾರೆ. ಈ ಎಲ್ಲವೂ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನೋ ಸುಳಿವು ನೀಡ್ತಿದೆ ಎನ್ನೋದು ಟಾಲಿವುಡ್ ಸಿನಿ ಪಂಡಿತರ ಸದ್ಯದ ಲೆಕ್ಕಾಚಾರ.