Vijay Deverakonda: ಟಾಲಿವುಡ್ ಸೆನ್ಸೇಶನಲ್ ಸ್ಟಾರ್ ವಿಜಯ್ ದೇವರಕೊಂಡ ಅದೃಷ್ಟ ಕೈ ಕೊಟ್ಟಿದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡೋದ್ರಲ್ಲಿ ಸೋತಿವೆ. ಕಂ ಬ್ಯಾಕ್ ಸೂಚನೆ ಕೊಟ್ಟ ‘ಫ್ಯಾಮಿಲಿ ಸ್ಟಾರ್’(Family Star) ಹೇಳ ಹೆಸರಿಲ್ಲದೇ ಚಿತ್ರಮಂದಿರದಿಂದ ಎತ್ತಂಗಡಿಯಾಗಿದೆ. ನಿರ್ಮಾಪಕ ದಿಲ್ ರಾಜು(Dil Raju) ಈ ಸಿನಿಮಾಗಾಗಿ ಸುರಿದ ಬಂಡವಾಳದ ಕಾಲು ಭಾಗವೂ ವಾಪಸ್ಸ್ ಬಂದಿಲ್ಲ. ಹೀಗಿದಾಗ್ಯೂ ಈ ಜೋಡಿ ಮತ್ತೆ ಒಂದಾಗ್ತಾರೆ ಅನ್ನೋ ಸುದ್ದಿ ಈಗ ಸಖತ್ ಆಗಿ ವೈರಲ್ ಆಗಿದೆ.
‘ಫ್ಯಾಮಿಲಿ ಸ್ಟಾರ್’(Family Star) ಜೊತೆಗೆ ದಿಲ್ ರಾಜು(Dil Raju) ವಿಜಯ್ ಜೊತೆ ಇನ್ನೊಂದು ಸಿನಿಮಾ ಮಾಡೋದಾಗಿ ತಿಳಿಸಿದ್ರು. ಅದರಂತೆ ನಿರ್ದೇಶಕ ರವಿ ಕಿರಣ್ ಕೊಲ ವಿಜಯ್ಗಾಗಿ ಒಂದು ಕಥೆ ರೆಡಿ ಮಾಡಿಕೊಂಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ವಿಭಿನ್ನ ಕಥಾಹಂದರ ಚಿತ್ರ ಇದಾಗಿದೆ. ಈ ಚಿತ್ರವನ್ನು ಫೈನಲ್ ಮಾಡೋದೊಂದು ಬಾಕಿ ಇದೆ. ಇದರ ಜೊತೆಗೆ ಸ್ಟಾರ್ ನಿರ್ದೇಶಕರೊಬ್ಬರು ವಿಜಯ್ ಹಾಗೂ ದಿಲ್ ರಾಜು ಜೊತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರಂತೆ. ಕಥೆ ಕೂಡ ರೆಡಿಯಿದ್ದು, ಬಿಗ್ ಬಜೆಟ್ನಲ್ಲಿ ನಿರ್ಮಿಸುವ ತಯಾರಿ ಮಾಡಿಕೊಂಡಿದ್ದಾರಂತೆ.
ದಿಲ್ ರಾಜು(Dil Raju) ‘ಫ್ಯಾಮಿಲಿ ಸ್ಟಾರ್’ ಸಿನಿಮಾವನ್ನು ದೊಡ್ಡ ಬಜೆಟ್ನಲ್ಲೇ ನಿರ್ಮಾಣ ಮಾಡಿದ್ರು. ಗೀತಾ ಗೋವಿಂದಂ ಸಿನಿಮಾ ನಂತರ ವಿಜಯ್(Vijay Deverakonda) ಸಿನಿಮಾಗಳು ಸಾಲು ಸಾಲು ಸೋಲು ಕಂಡರೂ ಈ ಸಿನಿಮಾ ಮೇಲೆ ಭರವಸೆ ಇಟ್ಟು ಕೋಟಿ ಕೋಟಿ ಸುರಿದಿದ್ರು, ಪ್ರಮೋಷನ್ ಕೂಡ ಅಷ್ಟೇ ಜಬರ್ದಸ್ತ್ ಆಗಿ ಮಾಡಿದ್ರು. ಆದ್ರೆ ಸಿನಿಮಾ ಖಾತೆ ತೆರೆಯದೇ ಹೀನಾಯವಾಗಿ ಸೋತಿದೆ. ಹೀಗಿದ್ರೂ ಸತತ ಐದು ಸೋಲು ಕಂಡ ನಟನ ಜೊತೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡ್ತಾರಾ ಅನ್ನೋದೇ ಈಗ ಸದ್ಯದ ಪ್ರಶ್ನೆ.