Delhi Files: 2022ರಲ್ಲಿ ತೆರೆಕಂಡ ‘ಕಾಶ್ಮೀರಿ ಫೈಲ್ಸ್’ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಉತ್ತರದ ಈ ಸಿನಿಮಾ ಪೂರ್ವ ಪಶ್ಚಿಮ ದಿಕ್ಕಿನವರನ್ನು ಬಡಿದೆಬ್ಬಿಸಿ, ದಕ್ಷಿಣದ ತುತ್ತ ತುದಿಗೆ ಮುಟ್ಟಿ ಮೆಚ್ಚಿ ಕಿಚ್ಚು ಹಚ್ಚಿಸಿತ್ತು. ವಿವೇಕ್ ಅಗ್ನಹೋತ್ರಿ(Vivek Agnihotri) ಹೆಣೆದ ಸಂವೇದನೆಯುಳ್ಳ ಈ ಸಿನಿಮಾ ಕಾಶ್ಮೀರಿ ಪಂಡಿತರ ಕರಾಳ ಇತಿಹಾಸವನ್ನು ತೆರೆದಿಟ್ಟಿತ್ತು. ತೆರೆಮೇಲೆ ಆ ಘೋರತೆಯನ್ನು ಕಂಡೇ ಕೆರಳಿದ್ದರು ಜನತೆ. ಇದೀಗ ಅದೇ ನಿರ್ದೇಶಕರು ಮತ್ತೊಂದು ಘೋರ ಕಥೆಯನ್ನು ಹೇಳ ಹೊರಟಿದ್ದಾರೆ.
‘ಕಾಶ್ಮೀರಿ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ಸಿನಿಮಾಗಳತ್ತ ಪ್ರೇಕ್ಷಕರು ಗಮನ ಹರಿಸುತ್ತಿದ್ದಾರೆ. ಮತ್ಯಾವ ಸಿನಿಮಾ ಮಾಡ್ತಿದ್ದಾರೆ ಎಂದು ಗೂಗಲ್ ಮಾಡ್ತಿದ್ದಾರೆ. ಕಾಶ್ಮೀರಿ ಫೈಲ್ಸ್ ನಂತರ ಬಂದ ‘ವ್ಯಾಕ್ಸಿನ್ ವಾರ್’ ಹೇಳಿಕೊಳ್ಳುವ ಹೆಸರು ಮಾಡಲಿಲ್ಲ. ಇದೀಗ ಡೆಲ್ಲಿಯ ಕಥಾನಕವನ್ನು ಬಿಚ್ಚಿಡಲು ರೆಡಿಯಾಗಿರುವ ನಿರ್ದೇಶಕರು. ‘ಡೆಲ್ಲಿ ಫೈಲ್ಸ್’(Delhi Files) ಮೂಲಕ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕರು.
‘ನೋ ಬಿಗ್ ಸ್ಟಾರ್ಸ್ ಓನ್ಲೀ ಬಿಗ್ ಕಂಟೆಂಟ್’ ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಂದು ದೊಡ್ಡ ಇಂಪ್ಯಾಕ್ಟ್ ಮಾಡಲು ಸರ್ವ ಸನ್ನದ್ದರಾಗಿರುವ ಸುಳಿವು ನೀಡಿದ್ದಾರೆ ವಿವೇಕ್ ಅಗ್ನಿಹೋತ್ರಿ(Vivek Agnihotri). ‘ಕಾಶ್ಮೀರಿ ಫೈಲ್ಸ್’ ಕೂಡ ದೊಡ್ಡ ಸ್ಟಾರ್‌ಗಳ ಹೊರತಾಗಿತ್ತು. ಆದರೆ ಅದು ದೇಶದಾದ್ಯಂತ ಮಾಡಿದ ಇಂಪ್ಯಾಕ್ಟ್ ಹಾಗೂ ಕಲೆಕ್ಷನ್‌ನಲ್ಲಿ ರೆಕಾರ್ಡ್ ಬರೆದಿತ್ತು. ರೈಟ್ ಟು ಲೈಫ್ ಎಂದಿರುವ ಡೆಲ್ಲಿ ಫೈಲ್ಸ್ ಫಸ್ಟ್ ಲುಕ್ ಕೂಡ ಕ್ಯೂರಿಯಾಸಿಟಿ ಮೂಡಿಸಿದ್ದು ಯಾವ ಕಥಾನಕ ಬಿಚ್ಚಿಕೊಳ್ಳಲಿದೆ ಅನ್ನೋದಕ್ಕೆ 2025ಕ್ಕೆ ಉತ್ತರ ಸಿಗಲಿದೆ.