War2: ‘ವಾರ್2’(War2) ಸಿನಿಮಾ ಬಾಲಿವುಡ್ ಅಂಗಳದ ಬಿಗ್ಗೆಸ್ಟ್ ಆಕ್ಷನ್ ಎಂಟಟೈನರ್ ಸಿನಿಮಾ. ಬಿಗ್ ಬಜೆಟ್ನಲ್ಲಿ ನಿರ್ಮಾಣ ವಾಗುತ್ತಿರುವ ‘ವಾರ್’ ಸೀಕ್ವೆಲ್ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದೆ. ಮೊದಲ ಸೀಕ್ವೆಲ್ನಲ್ಲಿ ಆಕ್ಷನ್ ಹೀರೋ ಆಗಿ ಮಿಂಚಿದ್ದ ಹೃತಿಕ್, ಟೈಗರ್ ಶ್ರಾಫ್ ಕಂಡು ಎಂಜಾಯ್ ಮಾಡಿದ್ದ ಸಿನಿಪ್ರಿಯರು ಸೀಕ್ವೆಲ್ನಲ್ಲಿ ಅದರ ದುಪ್ಪಟ್ಟು ಮನರಂಜನೆ ಪಡೆಯೋದು ಗ್ಯಾರೆಂಟಿ.
‘ವಾರ್2’(War2) ಅಂಗಳಕ್ಕೆ ಮ್ಯಾನ್ ಆಫ್ ಮಾಸಸ್ ಜೂ.NTR ಆಗಮನ ಯಾವಾಗ ಆಯ್ತೋ ಕ್ರೇಜ಼್ ದುಪ್ಪಟಾಗಿದೆ. ಮೊದಲ ಬಿಟೌನ್ ಸಿನಿಮಾದಲ್ಲಿ ತಾರಕ್ ಬಣ್ಣ ಹಚ್ಚುತ್ತಿದ್ದು, ಆಕ್ಷನ್ ಅವತಾರದಲ್ಲಿ ಈ ಇಬ್ಬರು ಸ್ಟಾರ್ಗಳನ್ನು ಕಣ್ತುಂಬಿಕೊಳ್ಳಲು ಬಿಟೌನ್ ಕಾತುರದಿಂದ ಕಾಯುತ್ತಿದೆ. ಇದೀಗ ನಿರ್ಮಾಪಕ ಆದಿತ್ಯ ಚೋಪ್ರ ಮತ್ತೊಂದು ಎಕ್ಸೈಟ್ ನ್ಯೂಸ್ ನೀಡಿದ್ದಾರೆ. ಚಿತ್ರದಲ್ಲಿ ಆಸ್ಕರ್ಗೆ ಮುತ್ತಿಟ್ಟ ‘ನಾಟು ನಾಟು’ ಮೀರಿಸುವ ಡಾನ್ಸಿಂಗ್ ನಂಬರ್ ಇರುತ್ತೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ಇಬ್ಬರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಹೃತಿಕ್ ರೋಶನ್(Hrithik Roshan) ಡಾನ್ಸ್ ಅಂದ್ರೆ ಅದರ ಬಗ್ಗೆ ದೂಸ್ರಾ ಮಾತೇ ಇಲ್ಲ. ಅವರ ಡಾನ್ಸ್ಗೆ ಫಿದಾ ಆಗದವರಿಲ್ಲ. ಹೃತಿಕ್ ಜೊತೆ ಮ್ಯಾನ್ ಆಫ್ ಮಾಸಸ್ ಜೊತೆಯಾದ್ರೆ ಅದರ ರೇಂಜ್ ಬೇರೆ ಲೆವೆಲ್ನಲ್ಲಿರುತ್ತೆ. ನಾಟು-ನಾಟು ಹಾಡಲ್ಲಿ ಜೂ.NTR ಡಾನ್ಸ್ ಕಂಡು ವರ್ಲ್ಡ್ವೈಡ್ ಲೋಕವೇ ಬೆರಗಾಗಿದೆ. ಅವರ ಎನರ್ಜಿ ಕಂಡು ಫಿದಾ ಆಗಿದೆ. ಈ ಇಬ್ಬರು ಡಾನ್ಸ್ ಮಹಾಶಯರು ಒಂದಾಗಿ ಸ್ಪೆಪ್ ಹಾಕ್ತಾರೆ ಅನ್ನೋ ಸುದ್ದಿ ಕೇಳೋಕೆ ಇಷ್ಟು ಥ್ರಿಲ್ಲಿಂಗ್ ಆಗಿದೆ, ತೆರೆಮೇಲೆ ನೋಡೋಕೆ ಅದೆಷ್ಟು ಕ್ರೇಜಿ಼ಯಾಗಿರುತ್ತೆ ಅನ್ನೋದನ್ನ ಹೇಳೋದು ಬೇಕಿಲ್ಲ. ಬಿಟೌನ್ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಈ ಸಾಂಗ್ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.
ಅಯಾನ್ ಮುಖರ್ಜಿ(Ayan Mukerji) ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರ್ತಿದೆ. ಮುಂಬೈನಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ಯಶ್ ರಾಜ್ ಫಿಲ್ಮಂಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ 2025ಕ್ಕೆ ಬಿಡುಗಡೆಯಾಗಲಿದೆ.