ಟಾಲಿವುಡ್‌ನ ತಾರಾದಂಪತಿಗಳಾಗಿದ್ದ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ದೂರಾಗಿರೋ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಆದರೆ, ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ನಾಲ್ಕೇ ವರ್ಷಕ್ಕೆ ಸಂಸಾರ ಸಾಗರದಲ್ಲಿ ಎಳ್ಳುನೀರು ಬಿಟ್ಟರು. ನೂರಾರು ಕೋಟಿ ಖರ್ಚು ಮಾಡಿ ಹಸೆಮಣೆ ಏರಿದ್ದ ಈ ಕಪಲ್ಸ್, ಸೋಷಿಯಲ್ ಮೀಡಿಯಾದಲ್ಲಿ ನಾಲ್ಕು ಸಾಲು ಗೀಚಿ ಡಿವೋರ್ಸ್ ಘೋಷಿಸಿಕೊಂಡರು. ಆದರೆ, ಇವತ್ತಿಗೂ ಅದ್ಯಾವ ಕಾರಣಕ್ಕೆ ಈ ಮುದ್ದಾದ ಜೋಡಿ ದೂರಾಯ್ತು ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅಂತೆಕಂತೆ ವಿಚಾರಗಳು ನೂರೆಂಟು ಹರಿದಾಡಿವೆ ಬಿಟ್ರೆ, ಇದೇ ರೀಸನ್‌ಗೆ ಚೈ-ಸ್ಯಾಮ್ ವಿಚ್ಛೇದನ ಪಡೆದರು ಅನ್ನೋದು ಗೊತ್ತಾಗಿಲ್ಲ. ಆದ್ರೀಗ ಸಮಂತಾ ಹಂಚಿಕೊಂಡಿರೋ ಬರಹ ನೋಡ್ತಿದ್ರೆ, ಇಬ್ಬರು ಡಿವೋರ್ಸ್ ಪಡೆಯೋದಕ್ಕೆ ಕಾರಣ ಇದೇ ಇರಬಹುದಾ ಎನ್ನುವ ಸಂಶಯ ಮೂಡಿಸ್ತಿದೆ.
ಸ್ಯಾಮ್ ಎಷ್ಟೇ ಬ್ಯುಸಿ ಇದ್ರೂ ಅಭಿಮಾನಿಗಳ ಜೊತೆ ಕನೆಕ್ಟೆಡ್ ಇರ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ Ask Me something ಸೆಶನ್ ನಡೆಸ್ತಿರ್ತಾರೆ. ಇತ್ತೀಚೆಗೆ ತಮ್ಮ ಬ್ರಾಡ್‌ಕಾಸ್ಟ್ ಚಾನೆಲ್ ಮೂಲಕ ಅಭಿಮಾನಿಗಳ ಮುಂದೆ ಹಾಜರಾಗಿ ಫ್ಯಾನ್ಸ್‌ಗೆ ಸ್ಯಾಮ್ ಪ್ರಶ್ನೆ ಮಾಡಿದ್ದಾರೆ. ‘ತಾವು ಜೀವನದಲ್ಲಿ ಕಲಿತ ದೊಡ್ಡ ಜೀವನ ಪಾಠ ಯಾವುದು ಹಾಗೂ ಅದು ಹೇಗೆ ಅವರ ವೈಯಕ್ತಿಕ ಬೆಳವಣಿಗೆಗೆ ಸಹಾಯವಾಯ್ತು ಎಂಬ ಬಗ್ಗೆ ಕೇಳಿದ್ದಲ್ಲದೇ ತಮ್ಮ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. ಅಷ್ಟಕ್ಕೂ, ಸಮಂತಾ ಏನಂತ ಬರೆದುಕೊಂಡಿದ್ದಾರೆ ಹೇಳ್ತೀವಿ ಕೇಳಿ
ʻತನ್ನ ಆಯ್ಕೆಗಳ ಮೇಲೆ ತನ್ನ ಸಂಗಾತಿಯ ಪ್ರಭಾವ ಇತ್ತು. ನಿರಂತರ ಸಂಗಾತಿಯ ಪ್ರಭಾವದಿಂದಾಗಿ ತನ್ನ ಇಷ್ಟ ಯಾವುದು ತನಗೆ ಇಷ್ಟವಿಲ್ಲದ್ದು ಯಾವುದು ಎಂಬ ಬಗ್ಗೆಯೂ ತನಗೆ ಗೊತ್ತಿಲ್ಲದೇ ಹೋಗಿತ್ತು ಎಂದಿದ್ದಾರೆ. ಆದರೆ ಇದೇ ಸಮಯದಲ್ಲಿ ತಾನು ಬದುಕಿನಲ್ಲಿ ತುಂಬಾ ಅಮೂಲ್ಯವಾದ ಪಾಠ ಕಲಿತೆ. ಕಷ್ಟದ ಸಮಯದಲ್ಲೇ ಬದುಕಿನಲ್ಲಿ ಒಳ್ಳೆಯ ಪಾಠ ತಿಳಿಯಿತು. ಇದು ನನ್ನ ವೈಯಕ್ತಿಕ ಬೆಳವಣಿಗೆಗೆ ಸಹಾಯವಾಯ್ತು ಎಂತಲೂ ತಿಳಿಸಿದ್ದಾರೆ. ಸಮಂತಾರ ಈ ಬರಹ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಅಭಿಪ್ರಾಯ ಹೊರಹಾಕ್ತಿದ್ದಾರೆ. ಸ್ಯಾಮ್ ಮಾತನಾಡ್ತಿರೋದು ಮಾಜಿ ಪತಿ ಚೈ ಬಗ್ಗೆನೇ ಅಂತ ಕೆಲವರು ಹೇಳಿದರೆ, ಇನ್ನೂ ಕೆಲವರು ತನ್ನನ್ನ ತಾನು ಕಂಡುಕೊಳ್ಳೋಕೆ ಡಿವೋರ್ಸ್ ಪಡೆದು ಹೊರಬಂದಿದ್ದಾರೆ ಅಂತ ಕಮೆಂಟ್ ಮಾಡ್ತಿದ್ದಾರೆ.
ಅಷ್ಟಕ್ಕೂ, ಸ್ಯಾಮ್ ಎಲ್ಲೂ ಕೂಡ ಚೈ ಹೆಸರನ್ನ ಮೆನ್ಷನ್ ಮಾಡಿಲ್ಲ. ಟ್ವೀಟ್‌ನಲ್ಲಿ ಪಾರ್ಟ್ನರ್ ಅಂತ ನಮೂದಿಸಿದ್ದಾರೆ ಹೊರೆತು ನಾಗಚೈತನ್ಯ ಹೆಸರನ್ನ ಪ್ರಸ್ತಾಪ ಮಾಡಿಲ್ಲ. ಅದಾಗ್ಯೂ ನೆಟ್ಟಿಗರು ಮನಂ ಚೆಲುವೆ ಹೇಳ್ತಿರೋದು ಚೈತನ್ಯ ಬಗ್ಗೆನೇ ಅಂತ ಪ್ರಿಡಿಕ್ಟ್ ಮಾಡ್ತಿದ್ದಾರೆ. ಆದರೆ, ಇವರಿಬ್ಬರ ಅಭಿಮಾನಿಗಳು ಮಾತ್ರ ಈ ಕ್ಷಣಕ್ಕೂ ಸಮಂತಾ ಹಾಗೂ ಚೈತನ್ಯ ಇಬ್ಬರು ಕೂಡ ಮನಸ್ತಾಪ ಮರೆತು ಒಂದಾಗಬೇಕು ಅಂತ ಬಯಸ್ತಿದ್ದಾರೆ. ಸದ್ಯಕ್ಕೆ ಅದ್ಯಾವ ಲಕ್ಷಣಗಳು ಕಾಣ್ತಿಲ್ಲ. ಡಿವೋರ್ಸ್ ಘೋಷಿಸಿಕೊಂಡ ಬಳಿಕ ತಮ್ಮ ತಮ್ಮ ಪಾಡಿಗೆ ತಾವಿದ್ದಾರೆ. ಈ ಮಧ್ಯೆ ಮಾರಣಾಂತಿಕ ಮಯೋಸೈಟಿಸ್ ಖಾಯಿಲೆಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡಿದ ಸ್ಯಾಮ್ ಗೆದ್ದುಬೀಗಿದ್ದಾರೆ. ಎಂದಿನಂತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.