ಏಳೆಂಟು ವರ್ಷ ಲವ್ ಮಾಡಿ ವೈಭವದಿಂದ ಹಸೆಮಣೆ ಏರಿದವರು, 2 ವರ್ಷಕ್ಕೆ ಡಿವೋರ್ಸ್ ಗಾಗಿ ಕೋರ್ಟ್ ಬಾಗಿಲು ಬಡಿತಾರೆ ಅಂದ್ರೆ, ನಿಜಕ್ಕೂ ಅಚ್ಚರಿ ಅನ್ಸತ್ತೆ.. ಅದ್ರಲ್ಲೂ ಸ್ಟಾರ್ ಕಪಲ್ ಇಂತಾದೊಂದು ನಿರ್ಧಾರಕ್ಕೆ ಬರ್ತಾರೆ ಅಂದ್ರೆ ನಂಬೋದು ಕಷ್ಟ..ಆದ್ರು, ಇದು ಕಲಿಗಾಲ.. ರಾಕೆಟ್ ವೇಗದಲ್ಲಿ ಓಡ್ತಿರೋ ಪ್ರಪಂಚ.. ಈಗೆಲ್ಲಾ ಗಂಡ ಹೆಂಡ್ತಿ ಡಿವೋರ್ಸ್ ಗೆ ಆಕಾಶ ಕಳಚಿ ಬೀಳುವಂತ ಕಾರಣ ಬೇಕಿಲ್ಲ.. ಸಣ್ಣದೊಂದು ಜಗಳವು ದುಡುಕಿನ ನಿರ್ಧಾರಕ್ಕೆ ಪ್ರೇರೇಪಿಸಿಬಿಡುತ್ತೆ. ಇದಕ್ಕೆ ಸಾಕ್ಷಿನೇ ಸಮಂತಾ- ನಾಗಚೈತನ್ಯ.
ಪ್ರೀತಿಸಿ ಮದುವೆ ಆಗಿದ್ದ ಸಮಂತಾ- ನಾಗಚೈತನ್ಯ ಬೇರೆ ಆಗ್ತಾರೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ರು. ಟಾಲಿವುಡ್, ಬಾಲಿವುಡ್ ನಲ್ಲೂ ಈ ಸುದ್ದಿ ದೊಡ್ಡದಾಗಿ ಸೌಂಡ್ ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ, ಚೈತು ಇಬ್ರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು.. ಅಂದಿನಿಂದ ಇಂದಿನವರೆಗೂ ಫ್ಯಾನ್ಸ್ ಇಬ್ಬರು ಒಂದಾಗಲಿ ಅನ್ನೋ ಇಂಗಿತ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಮಧ್ಯೆ ನಿಜವಾಗಲೂ ಸ್ಯಾಮ್, ನಾಗಚೈತನ್ಯ ಒಂದಾಗಲಿದ್ದಾರೆ ಎಂಬ ಚರ್ಚೆ ಜೋರಾಗಿತ್ತು. ಇದಕ್ಕೆ ಸಮಂತಾ ಹೂ ಅನ್ನಲ್ಲೇ ಇಲ್ಲ.
ವಿವಾಹ ಕಲಹದ ನಡುವೆ ವಕ್ಕರಿಸಿ ವಿಚಿತ್ರ ಖಾಯಿಲೆ, ಟ್ರೋಲ್ ಗಳ ಕಾಟ ಈ ಎಲ್ಲದಕ್ಕೂ ಸೆಡ್ಡು ಹೊಡೆದು ಸಮಂತಾಬೇಬಿ ಮತ್ತೆ ಮೈ ಕೊಡವಿ ನಿಂತಿದ್ದಾರೆ. ನಟನೆ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಇಳಿದಿರುವ ಯಶೋಧಗೆ ಮತ್ತೆ ಮದುವೆ ಆಗುವಂತೆ ಕುಟುಂಬಸ್ಥರು ಒತ್ತಾಯಿಸ್ತಿದ್ದಾರಂತೆ. ಹಗಲು ಕಂಡ ಬಾವಿಯಲ್ಲಿ ಇರುಳು ಬಿದ್ದಂಗೆ. ಗೊತ್ತು ಗೊತ್ತಿದ್ದು ಮತ್ತೆ ಕೈ ಸುಟ್ಟುಕೊಳ್ಳದಾ..?ನೋಚಾನ್ಸ್ ಅಂತಾ ಉತ್ತರಕೊಟ್ಟಿದ್ದಾರೆ.
ಸ್ಯಾಮ್ ಎಷ್ಟೇ ಬ್ಯುಸಿ ಇದ್ರೂ ಅಭಿಮಾನಿಗಳ ಜೊತೆ ಕನೆಕ್ಟ್ ಆಗ್ತಾರೆ ಇರ್ತಾರೆ. ಅದರಂತೆ ಭಾನುವಾರ ಸೋಷಿಯಲ್ ಮೀಡಿಯಾದಲ್ಲಿ Ask Me something ಸೆಶನ್ ನಡೆಸಿದ್ದಾರೆ. ಈ ವೇಳೆ ಸಮಂತಾಗೆ ಮತ್ತೆ ಮದುವೆಯಾಗುವ ಯೋಚನೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.? ಅದಕ್ಕೆ ಫನ್ನಿಯಾಗಿ ರಿಯಾಕ್ಟ್ ಮಾಡಿರುವ ಶಾಕುಂತಲಂ, ಬ್ಯಾಡ್ ಇನ್ವೆಸ್ಟ್ ಮೆಂಟ್ ಅಂತಾ ಅಂಕಿ ಅಂಶಗಳ ಮೂಲಕ ಉತ್ತರಿಸಿದ್ದಾರೆ. ಮತ್ತೆ ಮದುವೆಯಾಗುವ ಆಲೋಚನೆ ಸಮಂತಾಳಲ್ಲಿ ಇದ್ದಾಗೇ ಇಲ್ಲ. ಸಿಂಗಲ್ ಆಗಿ ಎಷ್ಟು ದಿನ ಹೀಗೆ ಇರ್ತಿಯಮ್ಮ..ಯೋಚನೆ ಮಾಡು ಅಂತಾ ಕೆಲ್ರು ಅಡ್ವೈಸ್ ಕೊಡ್ತಿದ್ದಾರೆ. ಅಡ್ವೈಸ್ ಕೊಡೋರಿಗೆಲ್ಲಾ..ಉತ್ತರಿಸೋದಿಕ್ಕೆ ಆಗುತ್ತಾ…ನೋ..ಇದು ಸಮಂತಾಳದ ಮನದ ಮಾತು.