Atlee: ಸೂಪರ್ ಹಿಟ್ ಸಿನಿಮಾಗಳ ಸರದಾರ ನಿರ್ದೇಶಕ ಅಟ್ಲಿ ಫೇಮ್ ʻಜವಾನ್ʼ ಸಿನಿಮಾದ ನಂತರ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಕಾಲಿವುಡ್ ಜೊತೆಗೆ ಟಾಲಿವುಡ್, ಬಿಟೌನ್ ಅಂಗಳದಲ್ಲೂ ಅಟ್ಲಿ ಈಗ ಬಹು ಬೇಡಿಕೆಯ ನಿರ್ದೇಶಕ. `ಜವಾನ್’ ಸಿನಿಮಾ ನಂತರ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಜೊತೆ ಸಿನಿಮಾ ಮಾಡುತ್ತಿದ್ದಾರೆ ಅಟ್ಲಿ(Atlee). ಇವರಿಬ್ಬರ ಕಾಂಬಿನೇಶನ್ ಸಿನಿಮಾಗೆ ಹೀರೋಯಿನ್ ಹುಡುಕಾಟ ಜೋರಾಗಿದ್ದು, ಟಾಲಿವುಡ್ ಅಂಗಳದಲ್ಲೆಲ್ಲಾ ಇದೇ ಸುದ್ದಿ.
`ಪುಷ್ಪಾ-2′ ಸಿನಿಮಾ ನಂತರ ಅಟ್ಲಿ ಹಾಗೂ ಅಲ್ಲು ಅರ್ಜುನ್(Allu Arjun) ಸಿನಿಮಾ ಸೆಟ್ಟೇರಲಿದೆ. ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿರುವ ಅಟ್ಲಿ(Atlee) ನಾಯಕಿಯ ಹುಡುಕಾಟದಲ್ಲಿದ್ದಾರೆ. ಸಮಂತಾ ಹಾಗೂ ತ್ರಿಶ(Trisha) ಹೆಸರು ನಾಯಕಿಯರ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದ್ದು, ಇಬ್ಬರಲ್ಲಿ ಯಾರಾಗ್ತಾರೆ ಐಕಾನ್ ಸ್ಟಾರ್‌ಗೆ ನಾಯಕಿ ಅನ್ನೋದೆ ಸದ್ಯದ ಪ್ರಶ್ನೆ.
ಮೂಲಗಳ ಪ್ರಕಾರ ನಿರ್ದೇಶಕ ಅಟ್ಲಿ ಸಮಂತಾರನ್ನು(Samantha) ಈಗಾಗಲೇ ಸಿನಿಮಾಗೆ ಅಪ್ರೋಚ್ ಮಾಡಿದ್ದಾರಂತೆ. ಆದ್ರೆ ಕಳೆದ ಎರಡು ಕೆಲ ವರ್ಷದಿಂದ ಆರೋಗ್ಯದ ಕಾರಣದಿಂದ ಸಿನಿಮಾದಿಂದ ದೂರ ಉಳಿದಿರುವ ಸಮಂತಾ ಈ ಬಗ್ಗೆ ಏನ್ ಹೇಳಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಒಂದು ವೇಳೆ ಸಮಂತಾ ಈ ಸಿನಿಮಾ ಒಪ್ಪಿಕೊಂಡರೆ ಖಂಡಿತಾ ಒಳ್ಳೆ ಕಂಬ್ಯಾಕ್ ಆಗೋದು ಗ್ಯಾರೆಂಟಿ. ಅಲ್ಲದೇ ಅಟ್ಲಿ, ಸಮಂತಾ ಈಗಾಗಲೇ ಥೆರಿ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿರೋದ್ರಿಂದ ಇಬ್ಬರು ಕೂಡ ಆತ್ಮೀಯರು. ಹಾಗಾಗಿ ಅಟ್ಲಿ ಆಫರ್ ಸ್ಯಾಮ್(Samantha) ತಳ್ಳಿ ಹಾಕೋದಿಲ್ಲ ಎಂಬ ಚರ್ಚೆ ಕೂಡ ಟಾಲಿವುಡ್‌ನಲ್ಲಿದೆ.
ಅಲ್ಲು ಅರ್ಜುನ್(Allu Arujun), ಅಟ್ಲಿ ಕಾಂಬಿನೇಶನ್‌ನಲ್ಲಿ ಸಿನಿಮಾ ಬರ್ತಿರೋದು ದೊಡ್ಡ ಸುದ್ದಿಯಾಗಿದ್ರೆ, ಈ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋ ದೊಡ್ಡ ಚರ್ಚೆ ಕೂಡ ಸೌತ್ ಸಿನಿ ದುನಿಯಾದಲ್ಲಿ ನಡೆಯುತ್ತಿದೆ. ಒಂದು ವೇಳೆ ಈ ಆಫರ್ ಸ್ಯಾಮ್(Samantha) ಪಾಲಾದರೆ ಖಂಡಿತಾ ಅಭಿಮಾನಿಗಳ ಸಂತಸಕ್ಕೆ ಎಲ್ಲೇ ಇರೋದಿಲ್ಲ.