ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ `ದೇವರ’. ಡೇ ಒನ್ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಈ ಚಿತ್ರ, ಇದೀಗ ಪ್ಯಾನ್ ಇಂಡಿಯಾ ಬ್ಯೂಟಿಯ ಸ್ಪೆಷಲ್ ಎಂಟ್ರಿ ಸುದ್ದಿಯಿಂದ ದುನಿಯಾದಲ್ಲಿ ಸೌಂಡ್ ಮಾಡ್ತಿದೆ. ದೇವರ ವಿಶೇಷ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಚಿತ್ರತಂಡ ನ್ಯಾಷನಲ್ ಲೆವೆಲ್ ಹೀರೋಯಿನ್ಗೆ ಬಲೆಬೀಸಿ ಕರೆತಂದಿರುವ ಸುದ್ದಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ, ಯಾರು ಆ ನಟಿಮಣಿ? ಯಂಗ್ ಟೈಗರ್ ಜೊತೆ ಲೆಗ್ ಶೇಕ್ ಮಾಡುವ ಲಕ್ಕಿ ಚಾನ್ಸ್ ಸಿಕ್ಕಿದ್ಯಾರಿಗೆ ಅಂತೀರಾ? ಈ ಕುತೂಹಲದ ಪ್ರಶ್ನೆಗೆ ಉತ್ತರ ಈಗಲೇ ಸಿಗಲ್ಲ. ಯಾಕಂದ್ರೆ, ಟಾಲಿವುಡ್ ಗಲ್ಲಿಯಲ್ಲಿ ಕೇಕೆ ಹೊಡೆಯುತ್ತಿರುವುದು `ದೇವರ’ ಟೀಮ್ ಪ್ಯಾನ್ ಇಂಡಿಯಾ ಬ್ಯೂಟಿಗೆ ಗಾಳಹಾಕಿರುವ ಬಗ್ಗೆ. ಆಕೆ ಸ್ಟಾರ್ ನಟಿಯಾಗಿದ್ದು, ನ್ಯಾಷನಲ್ ಲೆವೆಲ್ ನಲ್ಲಿ ಗುರ್ತಿಸಿಕೊಂಡಿದ್ದಾರಂತೆ. ಹೀಗಾಗಿ ಆ ನಟಿಮಣಿಗೆ ರೆಡ್ಕಾರ್ಪೆಟ್ ಹಾಕಿ ಕರೆತಂದು `ದೇವರ’ ಅಂಗಳದಲ್ಲಿ ಕುಣಿಸಲಿದ್ದಾರಂತೆ. ಆರ್ ಆರ್ ಆರ್ ನಂತರ ತಾರಕ್ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿರುವುದರಿಂದ ಅವರ ಜೊತೆ ಸ್ಕ್ರೀನ್ ಶೇರ್ ಮಾಡಲಿಕ್ಕೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಫೇಮಸ್ ಆಗಿರುವ ಪೋರಿನೇ ಇರಲಿ ಅಂತ ಆಕೆನಾ ಸೆಲೆಕ್ಟ್ ಮಾಡಿದ್ದಾರಂತೆ. ಇಂಟ್ರೆಸ್ಟಿಂಗ್ ಅಂದರೆ ಸೆನ್ಸೇಷನ್ ಮ್ಯೂಸಿಕ್ ಕಂಪೋಸರ್ ಅನಿರುದ್ ರವಿಚಂದರ್ `ದೇವರ’ ಸಿನಿಮಾಗೆ ಸ್ಪೆಷಲ್ ಡ್ಯಾನ್ಸ್ ನಂಬರ್ ಕಂಪೋಸ್ ಮಾಡಿದ್ದಾರಂತೆ. ಬಿಗ್ ಸ್ಕ್ರೀನ್ ಗೆ ಕಿಚ್ಚು ಹಚ್ಚುವ ಹಾಡು ಇದಾಗಿದ್ದು, ಆಲ್ ಇಂಡಿಯಾ ಫ್ಯಾನ್ಸ್ ಗೆ ಕಿಕ್ಕೇರಲಿದೆಯಂತೆ.
ದೇವರ ಬಹುಕೋಟಿ ವೆಚ್ಚದ ಸಿನಿಮಾ. ಬರೀ ವಿಎಫೆಕ್ಟ್ಗೆ 150 ಕೋಟಿ ಬಂಡವಾಳ ಸುರಿದಿದ್ದಾರೆನ್ನುವ ನ್ಯೂಸ್ ಹೊರಬಂದಿತ್ತು. ಅಷ್ಟಕ್ಕೂ, ಈ ಸುದ್ದಿನಾ ಅಲ್ಲೆಗಳೆಯುವಂತಿಲ್ಲ. ಯಾಕಂದ್ರೆ, ತಾರಕ್ ಈಗ ಬರೀ ಸೌತ್ ಸ್ಟಾರ್ ಆಗಿ ಉಳಿದಿಲ್ಲ. ಬದಲಾಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಆಸ್ಕರ್ ಅವಾರ್ಡ್ ಮುಡಿಗೇರಿಸಿಕೊಂಡ ಮೇಲೆ ಹಾಲಿವುಡ್ ಜಗತ್ತು ಕೂಡ ತಾರಕ್ ಸಿನಿಮಾದತ್ತ ಕಣ್ಣಿಟ್ಟಿದೆ. ಹೀಗಾಗಿಯೇ `ದೇವರ’ ಚಿತ್ರವನ್ನ ನಿರ್ದೇಶಕ ಕೊರಟಾಲ ಶಿವ ಅದ್ದೂರಿಯಾಗಿ ಕಟ್ಟಿಕೊಡಲು ಮುಂದಾಗಿದ್ದಾರೆ. ಜನತಾ ಗ್ಯಾರೇಜ್ ಸಿನಿಮಾದ ನಂತರ ತಾರಕ್ ಹಾಗೂ ಕೊರಟಾಲ ಶಿವ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬೋ ರಿಪೀಟ್ ಆಗಿರೋದ್ರಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಸಿನಿಮಾದ ಒನ್ಲೈನ್ ಕಥೆ ಹೊರಬಿದ್ದಿದ್ದು, ತಂದೆ-ಮಗನ ಪಾತ್ರದಲ್ಲಿ ಭೀಮ್ ಅಬ್ಬರಿಸಿ ಬೊಬ್ಬಿರಿಯಬಹುದಾ ಎನ್ನುವ ಸಂಶಯ ಕಾಡ್ತಿದೆ.
ಅಂದ್ಹಾಗೇ, ದೇವರ ಸಮುದ್ರ ತಟದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದ್ದು, ಸಮುದ್ರದ ಮೇಲೆ ಅಧಿಕಾರಕ್ಕಾಗಿ ಪರಸ್ಪರ ಕಾದಾಟದಲ್ಲಿರುವ ಮೃಗಗಳ ಮಧ್ಯೆ ಜೂ ಎನ್ಟಿಆರ್ ಪಾತ್ರ ಸೆಣೆಸಲಿದೆ ಎನ್ನಲಾಗುತ್ತಿದೆ. ‘ದೇವರ’ ಸಿನಿಮಾ ಪಕ್ಕಾ ಆಕ್ಷನ್ ಭರಿತ ಹೊಡಿ-ಬಡಿ ಕತೆಯನ್ನು ಒಳಗೊಂಡಿರುವುದು ಇದಾಗಲೇ ಖಾತ್ರಿಯಾಗಿದೆ. ‘ದೇವರ’ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪ್ರೋಮೋ ವಿಡಿಯೋದ ಹಿನ್ನೆಲೆಯಲ್ಲಿರುವ ಧ್ವನಿಯೊಂದು ‘ದೇವರ’ ಸಿನಿಮಾದ ಕತೆಯ ಎಳೆಯನ್ನು ಹೇಳಿದೆ. ”ಕತೆಯಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಮೃಗಗಳೇ ಇರುತ್ತಾರೆ. ಸಾವೆಂದರೆ ಭಯ ಇರದ, ದೇವರೆಂದರೆ ಭಯ ಇರದ ಮೃಗಗಳು ಅವರು. ಆದರೆ ಅವರಿಗೆಲ್ಲ ಒಬ್ಬರೆಂದರೆ ಭಯ. ಅದು ಯಾರೆಂದು ವಿವರಿಸಿ ಹೇಳಬೇಕಿಲ್ಲ. ಭಯ ಇರಬೇಕು, ಭಯ ಅವಶ್ಯಕ, ಭಯ ಪಡಿಸಲು ಈ ಸಿನಿಮಾದಲ್ಲಿ ಆತ ಯಾವ ರೇಂಜಿಗೆ ಬೇಕಾದರು ಹೋಗುತ್ತಾನೆ. ಇದು ಬಹಳ ಎಮೋಷನಲ್ ಪಯಣ” ಎಂದಿದೆ.
ದೇವರ’ ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಮುಖ್ಯ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಇದ್ದಾರೆ. ಸಿನಿಮಾದ ಸಾಹಸ ನಿರ್ದೇಶನಕ್ಕೆ ಹಾಲಿವುಡ್ನ ಜನಪ್ರಿಯ ಸಾಹಸ ನಿರ್ದೇಶಕರನ್ನು ಕರೆತರಲಾಗಿದೆ. ಎರಡು ಹಾಲಿವುಡ್ ರೇಂಜ್ನ ಫೈಟ್ ಸೀಕ್ವೆನ್ಸ್ಗಳನ್ನು ನಿರ್ದೇಶಕ ಕೊರಟಾಲ ಶಿವ ಸೃಷ್ಟಿಸಿದ್ದಾರಂತೆ. ಒಂದು ಫೈಟ್ ದೊಡ್ಡ ಹಡಗಿನಲ್ಲಿ ನಡೆದರೆ ಮತ್ತೊಂದು ಫೈಟ್ ಸಮುದ್ರದ ದಡದಲ್ಲಿ ನಡೆಯುತ್ತದೆ. ಎರಡಕ್ಕೂ ಹಾಲಿವುಡ್ನ ಅನುಭವಿ ಫೈಟ್ ಕಂಪೋಸರ್ ಅನ್ನು ಕರೆತರಲಾಗಿದೆ. ‘ದೇವರ’ ಸಿನಿಮಾ 2024 ರ ಏಪ್ರಿಲ್ 05ಕ್ಕೆ ಬಿಡುಗಡೆ ಆಗಲಿದೆ.