Sridevi: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಸುಂದರಿ, ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ (Sridevi). ಬಿಟೌನ್ ಅಂಗಳದಲ್ಲಿ ಅಪಾರ ಬೇಡಿಕೆ ಸೃಷ್ಟಿಸಿಕೊಂಡಿದ್ದ ಅಭಿನಯ ಅಪ್ಸರೆ ಇಂದು ನಮ್ಮೊಂದಿಗಿಲ್ಲ. ಆದರೆ ಒಂದ್ ಕಾಲದಲ್ಲಿ ಈಕೆ ಸೃಷ್ಟಿಸಿದ್ದ ಕ್ರೇಜ಼್ ಪದಗಳಿಗೂ ನಿಲುಕದ್ದು. ಇಂತಹ ಸೂಪರ್ ಸ್ಟಾರ್ ನಟಿಗೆ ಆ ಒಬ್ಬ ಗಾಯಕನ ಜೊತೆ ನಟಿಸಬೇಕೇಂಬ ಮಹದಾಸೆಯಿತ್ತಂತೆ.
ಅತಿಲೋಕ ಸುಂದರಿ, ಅಪ್ರತಿಮ ಖ್ಯಾತಿ ಹೊಂದಿದ್ದ ಶ್ರೀದೇವಿ(Sridevi) ಜೊತೆ ನಟಿಸಲು ನಟರುಗಳೇ ಕ್ಯೂ ನಲ್ಲಿ ಇರ್ತಿದ್ದ ಆ ಕಾಲದಲ್ಲಿ, ಶ್ರೀದೇವಿಗೆ ಮಾತ್ರ ಅಮರ್ ಸಿಂಗ್ ಚಂಮ್ಕೀಲ(Amar Singh Chamkila) ಜೊತೆ ನಟಿಸಬೇಕೆಂಬ ಆಸೆಯಿತ್ತಂತೆ. ಈತ ಪಂಜಾಬಿಯ ಖ್ಯಾತ ಸಂಗೀತ ನಿರ್ದೇಶಕ ಕಂ ಗಾಯಕ. ಇವರ ಹಾಡು ಕೇಳಿ ಫಿದಾ ಆಗಿದ್ದ ಶ್ರೀದೇವಿ ತಮ್ಮ ಜೊತೆ ಹೀರೋ ಆಗಿ ಸಿನಿಮಾ ಮಾಡಿ ಎಂದು ಆಫರ್ ನೀಡಿದ್ದರಂತೆ. ಆದರೆ ಅಮರ್ ಸಿಂಗ್ ಹಿಂದಿ ಬಾರದ ಕಾರಣ ಒಪ್ಪಿಕೊಂಡಿರಲಿಲ್ಲ. ಒಂದು ತಿಂಗಳು ಹಿಂದಿ ತರಭೇತಿ ನೀಡೋದಾಗಿ ಹೇಳಿದಾಗ್ಯೂ ಸಂಗೀತವೇ ಆದಾಯವಾಗಿದ್ದ ಅಮರ್ ಸಿಂಗ್‌ಗೆ ಅವತ್ತಿನ ದಿನಕ್ಕೆ ತಮಗೆ ೧೦ ಲಕ್ಷ ಲಾಸ್ ಆಗುತ್ತೆಂದು ಆಫರ್ ತಿರಸ್ಕರಿಸಿದ್ದರಂತೆ. ಶ್ರೀದೇವಿಯೇ(Sridevi) ಅವರೊಂದಿಗೆ ಪಂಜಾಬಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ. ಆದ್ರೆ ಆ ಆಸೆ ಕೂಡ ಕೈಗೂಡಲಿಲ್ಲವಂತೆ.
ಬಿಟೌನ್‌ನಲ್ಲಿ ಅಮರ್ ಸಿಂಗ್ ಚಮ್ಕೀಲ ಕುರಿತ ಬಯೋಪಿಕ್ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅಮರ್ ಸಿಂಗ್ ಚಮ್ಕೀಲ ಸ್ನೇಹಿತ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದ ಈ ಇಂಟ್ರಸ್ಟಿಂಗ್ ವಿಚಾರ ವೈರಲ್ ಆಗಿದೆ.