ಒಂದ್ ಟೈಮ್‌ನಲ್ಲಿ ಸೌತ್‌ನ ಕೆಲ ನಟಿಮಣಿಯರಿಗೆ ನೀವು ಯಾರ್ ಜೊತೆ ಆಕ್ಟ್ ಮಾಡೋಕೆ ಇಷ್ಟಪಡ್ತೀರಾ ಅಂತ ಪ್ರಶ್ನೆ ಮಾಡಿದಾಗ ಬಹುತೇಕ ಹೀರೋಯಿನ್ಸ್ ಬಿಟೌನ್ ಸ್ಟಾರ್‌ಗಳ ಹೆಸರು ಹೇಳ್ತಿದ್ದರು. ಆದ್ರೀಗ, ಕಾಲ ಬದಲಾಗಿದೆ. ಸೌತ್ ಸಿನಿಮಾ ಇಂಡಸ್ಟ್ರಿಯವರನ್ನಲ್ಲ ಬಿಟೌನ್ ನಟಿಮಣಿಯರನ್ನ ಕೇಳಿದ್ರು ಕೂಡ ಅವರಲ್ಲಿ ಬಹುತೇಕ ನಾಯಕಿಯರು ರಾಕಿಭಾಯ್ (Yash) ಜೊತೆ ಆಕ್ಟ್ ಮಾಡಬೇಕು ಅಂತಾರೇ. ಇದಕ್ಕೆ ಬಾಲಿವುಡ್ ಬೆಬೋ ಕರೀನಾ (Kareena Kapoor) ಕಪೂರ್ ಕೂಡ ಹೊರತಾಗಿಲ್ಲ ಅನ್ನೋದೇ ಇಂಟ್ರೆಸ್ಟಿಂಗ್ ಸಮಾಚಾರ
ಯಸ್, ಬಿಟೌನ್ ಬೆಬೋ ಕರೀನಾಗೆ ಮಾನ್‌ಸ್ಟರ್ ಯಶ್ (Yash) ಜೊತೆ ಮೆರವಣಿಗೆ ಹೊರಡುವಾಸೆ. ಅದನ್ನು ಖುದ್ದು ಕರೀನಾ ಕಾಫಿ ವಿತ್ ಕರಣ್ ಶೋನಲ್ಲಿ ಓಪನ್ನಾಗಿ ಹೇಳಿಕೊಂಡಿದ್ದರು. ಕೆಜಿಎಫ್ ಸಿನಿಮಾ ನೋಡಿದ್ಮೇಲೆ ರಾಕಿಭಾಯ್ ಜೊತೆ ಬಣ್ಣ ಹಚ್ಚೋಕೆ ಎಕ್ಸೈಟ್ ಆಗಿರೋದಾಗಿ ತಿಳಿಸಿದ್ದರು. ಇತ್ತೀಚೆಗೆ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ದೊಡ್ಡ ಸೌತ್ ಸಿನಿಮಾಗೆ ಸಹಿ ಹಾಕಿರೋ ಮ್ಯಾಟರ್ ರಿವೀಲ್ ಮಾಡಿದ್ದರು. ಇದು ಪ್ಯಾನ್ ಇಂಡಿಯಾ ಕಾಲ. ಶೂಟಿಂಗ್ ಎಲ್ಲಿ ನಡೆಯುತ್ತದೆಯೋ ಗೊತ್ತಿಲ್ಲ. ಬಟ್ ನಾನಂತೂ ಈ ಚಿತ್ರಕ್ಕೆ ಎಕ್ಸೈಟ್ ಆಗಿ ಕಾಯ್ತಿದ್ದೇನೆ ಎಂದಿದ್ದರು. ಆ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ಕಾ ಅಥವಾ ಬೇರೊಂದು ಪ್ಯಾನ್ ಇಂಡಿಯಾ ಸಿನಿಮಾನಾ ಅನ್ನೋದನ್ನ ಮಾತ್ರ ಗುಟ್ಟಾಗಿಟ್ಟರು. ಆದರೂ ಕೂಡ ರಾಕಿಭಾಯ್ ಟಾಕ್ಸಿಕ್ ಚಿತ್ರದಲ್ಲಿ ಬಿಟೌನ್ ಬೆಬೋ (Kareena Kapoor) ಗ್ರ್ಯಾಂಡ್ ಎಂಟ್ರಿ ಅನ್ನೋ ಸುದ್ದಿ ಮಾತ್ರ ಬಿಗ್ ಬ್ರೇಕಿಂಗ್ ನ್ಯೂಸ್ ಆಗುತ್ತಲೇ ಇದೆ. ಮಾನ್‌ಸ್ಟರ್ ಜೊತೆ ಬಿಟೌನ್ ಹಾಟ್ ಬ್ಯೂಟಿಯ ಹೆಸರು ಮೆರೆಯುತ್ತಲೇ ಇದೆ.
ಅಷ್ಟಕ್ಕೂ, ಕೆಜಿಎಫ್ ಕಿಂಗ್ ಅಭಿನಯದ ಹೈವೋಲ್ಟೇಜ್ ಟಾಕ್ಸಿಕ್ ಚಿತ್ರಕ್ಕೆ ಹೀರೋಯಿನ್ ಯಾರು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಬಟ್ ಸಿನಿಮಾ ಸೆಟ್ಟೇರಿದಾಗಿನಿಂದ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ನಟಿಮಣಿಯರ ಹೆಸರುಗಳು ಕೇಳಿಬರ್ತಿದೆ. ರೌಡಿಬೇಬಿ ಸಾಯಿಪಲ್ಲವಿ (Sai Pallavi) ಸಂಯುಕ್ತ ಮೆನನ್, (Samyuktha Menon) ಮೃಣಾಲ್ ಠಾಕೂರ್, (Mrunal Thakur) ಶ್ರುತಿಹಾಸನ್ (Shruti Haasan) ಹೀಗೆ ನಾಯಕಿಯರ ಪಟ್ಟಿ ಬೆಳೆಯುತ್ತಲೇ ಹೋಗ್ತಿದೆ. ಆದರೆ, ಪ್ರೊಡಕ್ಷನ್ ಕಡೆಯಿಂದಾಗ್ಲೀ, ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohandas) ಕಡೆಯಿಂದಾಗ್ಲೀ ಹೀರೋಯಿನ್ ಸೆಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳ್ತಿಲ್ಲ. ಸದ್ಯ, ಟಾಕ್ಸಿಕ್ (Toxic) ಟೀಮ್ ಗೋವಾದಲ್ಲಿ ಬೀಡುಬಿಟ್ಟಿದೆ. ನಿರ್ದೇಶಕಿ ಗೀತುಮೋಹನ್‌ದಾಸ್, ಯಶ್ (Yash) ಹಾಗೂ ಇಡೀ ತಂಡ ಕಡಲ ತೀರದಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡ್ತಿರೋ ಫೋಟೋಸ್, ವಿಡೀಯೋಸ್ ವೈರಲ್ ಆಗಿದ್ವು. ಆ ಫೋಟೋಗಳ ಸೆನ್ಸೇಷನ್ ನಡುವೆ ಟಾಕ್ಸಿಕ್ ಸಿನಿಮಾ ಹೀರೋಯಿನ್ ಸುದ್ದಿ ಸಂಚಲನ ಮೂಡಿಸಿದೆ. ರಾಕಿಭಾಯ್ ಜೊತೆಯಾಗೋ ಅವಕಾಶ ಯಾರಿಗೆ ಸಿಗುತ್ತೆ? ಮಾನ್‌ಸ್ಟರ್ ಜೊತೆಯಾಗಿ ಪ್ಯಾನ್ ವರ್ಲ್ಡ್ ತುಂಬಾ ದಿಬ್ಬಣ ಹೊರಡೋ ಅದೃಷ್ಟ ಯಾರ ಪಾಲಾಗಲಿದೆ. ಕುತೂಹಲದಿಂದ ಕಾದುನೋಡಬೇಕು ಅಷ್ಟೇ.