Sreeleela: ಟಾಲಿವುಡ್ ಸೂಪರ್ ಹಿಟ್ ಸಿನಿಮಾ ʻಡಿಜೆ ಟಿಲ್ಲುʼ ಅವತರಣಿಕೆ ಟಿಲ್ಲು ಸ್ಕ್ವೇರ್(Tillu Squre) ಕಳೆದ ವಾರ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಸಿದ್ದು ಜೊನ್ನಲಗಡ್ಡ(Siddu Jonnalagadda) ಹಾಗೂ ಅನುಪಮಾ ಪರಮೇಶ್ವರನ್(Anupama Parameswran). ಜೋಡಿಯಾಗಿ ನಟಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಟಾಕ್ ಕ್ರಿಯೇಟ್ ಮಾಡಿತ್ತು. ಟ್ರೇಲರ್ ಬಿಡುಗಡೆಯಾದಾಗ ಅನುಪಮಾ ಬೋಲ್ಡ್ ಅವತಾರ ಸಾಕಷ್ಟು ಟ್ರೋಲ್‌ಗೆ ಒಳಗಾಗಿತ್ತು. ಸಾಕಷ್ಟು ನೆಗೆಟಿವ್ ಕಮೆಂಟ್‌ಗಳೊಂದಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರದಲ್ಲೇ 68 ಕೋಟಿ ಗಳಿಕೆ ಮಾಡಿದೆ.
ಟಿಲ್ಲು ಸ್ಕ್ವೇರ್(Tillu Squre) ಸಕ್ಸಸ್ ಆಗುತ್ತಿದ್ದಂತೆ ಟಾಲಿವುಡ್ ಅಂಗಳದಲ್ಲಿ ಸುದ್ದಿಯೊಂದು ಹರಿದಾಡ್ತಿದೆ. ಅದೇನೆಂದರೆ ಈ ಚಿತ್ರದ ನಾಯಕಿ ಪಾತ್ರಕ್ಕೆ ಈ ಮೊದಲು ನಟಿ ಶ್ರೀಲೀಲಾ(Sreeleela) ಆಯ್ಕೆಯಾಗಿದ್ದರಂತೆ. ಆದ್ರೆ ಸಿನಿಮಾ ಕಥೆ ಹಾಗೂ ಸಾಕಷ್ಟು ಬೋಲ್ಡ್ ಅವತಾರದ ಸೀನ್‌ಗಳು ಇದ್ದುದ್ದರಿಂದ ಸಿನಿಮಾವನ್ನು ಶ್ರೀಲೀಲಾ ನಿರಾಕರಿಸಿದ್ದರಂತೆ. ಶ್ರೀಲೀಲಾ(Sreeleela) ಸಿನಿಮಾದಿಂದ ಔಟ್ ಆದ ಮೇಲೆ ಆ ಜಾಗಕ್ಕೆ ಮಲಯಾಳಿ ಬ್ಯೂಟಿ ಅನುಪಮಾ ಪರಮೇಶ್ವರನ್ ಎಂಟ್ರಿಯಾಗಿತ್ತು. ಇದೀಗ ಸಿನಿಮಾ ಸೂಪರ್ ಸಕ್ಸಸ್ ಕಂಡಿದ್ದು, ಒಂದು ವೇಳೆ ಈ ಜಾಗದಲ್ಲಿ ಶ್ರೀಲೀಲಾ(Sreeleela) ಇದ್ದಿದ್ರೆ ಬಿಗ್ ಬ್ರೇಕ್ ಸಿಗುತ್ತಿತ್ತು ಎಂದು ಟಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಆದ್ರೆ, ಶ್ರೀಲೀಲಾ ಫ್ಯಾನ್ಸ್ ಹಾಗೂ ನೆಟ್ಟಿಗರು ಈ ವಾದವನ್ನು ತಳ್ಳಿ ಹಾಕುತ್ತಿದ್ದಾರೆ. ಶ್ರೀಲೀಲಾ(Sreeleela) ಈ ಸಿನಿಮಾ ತಿರಸ್ಕರಿಸಿ ಒಳ್ಳೆ ಕೆಲಸ ಮಾಡಿದ್ದಾರೆ. ಇಲ್ಲಿವರೆಗೂ ಶ್ರೀಲೀಲಾ ಇಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿಲ್ಲ. ಒಂದು ವೇಳೆ ಒಪ್ಪಿಕೊಂಡಿದ್ದರೆ ಇಮೇಜ್‌ಗೆ ದಕ್ಕೆಯಾಗುತ್ತಿತ್ತು ಎನ್ನುತ್ತಿದ್ದಾರೆ. ಇತ್ತ ಸಿನಿಮಾಗಳ ಸಾಲು ಸೋಲಿನಿಂದ ಶ್ರೀಲೀಲಾ(Sreeleela) ಕೂಡ ಬೇಸತ್ತಿದ್ದು. ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಿರುವ ಕಿಸ್ ಬೆಡಗಿ ಎಂಬಿಬಿಎಸ್ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದಾರೆ.